ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಕೆಜಿಎಫ್ ನಟ ಯಶ್; ಕಾರಣವೇನು?

Published : Feb 07, 2023, 04:36 PM ISTUpdated : Feb 07, 2023, 05:06 PM IST

ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಪರಾಜಿಗಳನ್ನು ಕಂಡು ಯಶ್ ನಗು ನಗುತ್ತಾ ಮಾತನಾಡಿಸಿದ್ದಾರೆ. 

PREV
17
ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಕೆಜಿಎಫ್ ನಟ ಯಶ್; ಕಾರಣವೇನು?

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಸಿನಿಮಾ ಸೂಪರ್ ಹಿಟ್ ಅದ ಮೇಲೆ ಯಶ್ ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡರು.

27

ಕೆಜಿಎಫ್ ಸಿನಿಮಾ ಆದ್ಮೇಲೆ ಯಶ್ ಮುಂದಿನ ಪ್ರಾಜೆಕ್ಟ್‌ ಯಾವುದು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದೇ ಸಮಯಕ್ಕೆ ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ಸಹಜವಾಗಿ ಕುತೂಹಲ ಹೆಚ್ಚಾಗಿದೆ. 

37

ಯಶ್‌ ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಭಾಷೆಯ ಸ್ಟಾರ್ ನಟರನ್ನು ಮಾತ್ರವಲ್ಲದೆ ಕ್ರಿಕೆಟರ್ಸ್‌ ಮತ್ತು ರಾಜಕಾರಣಿಗಳನ್ನು ಭೇಟಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ನೋಡಬಹುದು. 

47

ಈಗ ಯಶ್ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಐಷಾರಾಮಿ ಬ್ಲಾಕ್‌ ಕಾರಿನಲ್ಲಿ ಕುಳಿತುಕೊಂಡಿರುವ ಯಶ್ ನೀಲಿ ಬಣ್ಣದ ಶರ್ಟ್‌ ಧರಿಸಿದ್ದಾರೆ. 

57

ಯಶ್ ಸನ್‌ಗ್ಲಾಸ್‌ ಮತ್ತು ವಾಚ್‌ ಗಮನ ಸೆಳೆದಿದೆ. ಪ್ಯಾಪರಾಜಿಗಳಿಗೆ ಹಾಯ್ ಹೇಳಿ ಕ್ಯಾಮೆರಾಗೆ ಯಶ್ ಸ್ಮೈಲ್ ಮಾಡಿದ್ದಾರೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ದಿಢೀರ್ ಮುಂಬೈ ಭೇಟಿ ನೀಡಿದ್ದು ಜಾಹೀರಾತಿನ ಚಿತ್ರೀಕರಣಕ್ಕಾಗಿ.  

67

ಯಶ್ ಮತ್ತೊಂದು ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಂಬೈಗೆ ಭೇಟಿ ನೀಡಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಜಾಹೀರಾತಿನ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 

77

ಯಶ್ ಕೆಜಿಎಫ್ ಚಾಪ್ಟರ್ 3 ಸಿನಿಮಾ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ ಆದರೆ ಯಶ್ ತಮಿಳು ಡೈರೆಕ್ಟರ್‌ ಬಳಿ ಕಥೆ ಕೇಳುತ್ತಿದ್ದಾರೆ ಎನ್ನುವ ಗಾಳಿ ಮಾತುಗಳಿದೆ. ಕೆಲವು ದಿನಗಳ ಹಿಂದೆ ಮನೆ ಬಳಿ ಆಗಮಿಸಿದ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories