ಪ್ರದರ್ಶಕರು, ಚಿತ್ರದ ತಾಂತ್ರಿಕ ತಂಡ, ಕಲಾವಿದರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಗೆ ‘ಕಾಂತಾರ’ ಚಿತ್ರದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ‘ಈ ಚಿತ್ರದ ಯಶಸ್ಸಿಗೆ ನಾನು ಒಬ್ಬನೇ ಕಾರಣ ಅಲ್ಲ. ನಮ್ಮ ಚಿತ್ರಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು, ಪ್ರಚಾರಕರ್ತರು, ಮಾಧ್ಯಮಗಳು, ಅಭಿಮಾನಿಗಳು, ಪ್ರೇಕ್ಷಕರು ಹೀಗೆ ಎಲ್ಲರ ಪ್ರೀತಿ- ಅಭಿಮಾನ ಮತ್ತು ಬೆಂಬಲ ಜತೆಯಾಗಿ ‘ಕಾಂತಾರ’ ಚಿತ್ರಕ್ಕೆ ಶತ ದಿನೋತ್ಸವ ಸಂಭ್ರಮ ತಂದು ಕೊಟ್ಟಿದೆ.