KCC ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್; ಕಿಂಗ್ ಕೊಹ್ಲಿ ಭೇಟಿ ಯಾವಾಗ ಎಂದ ಫ್ಯಾನ್ಸ್

Published : Feb 06, 2023, 04:33 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಭೇಟಿಯಾಗಿದ್ದಾರೆ. 

PREV
16
KCC ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್; ಕಿಂಗ್ ಕೊಹ್ಲಿ ಭೇಟಿ ಯಾವಾಗ ಎಂದ ಫ್ಯಾನ್ಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ಈ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೋ ಹಾಗೆ ಕ್ರಿಕೆಟ್ ಬಗ್ಗೆಯೂ ಅಷ್ಟೆ ಪ್ರೀತಿ. ಭಾರತ ಕ್ರಿಕೆಟ್ ತಂಡದ ಅನೇಕ ಆಟಗಾರರ ಜೊತೆ ಕಿಚ್ಚ ವಿಶೇಷವಾದ ಪ್ರೀತಿ, ಬಾಂಧವ್ಯ ಹೊಂದಿದ್ದಾರೆ. 

26

ಸುದೀಪ್ ಆಗಾಗ ಕೆಲವು ಆಟಗಾರನನ್ನು ಭೇಟಿಯಾಗುತ್ತಿರುತ್ತಾರೆ. ಆಟಗಾರರು ಕಿಚ್ಚನಿಗೆ ವಿಶೇಷಾದ ಉಡುಗೊರೆಗಳನ್ನು ಕಳುಹಿಸುತ್ತಿರುತ್ತಾರೆ. ಇದೀಗ ಕಿಚ್ಚ ಖ್ಯಾತ ಕ್ರಿಕೆಟ್ ಆಟಗಾರ ಶಿಖರ್ ಧವನ್ ಅವರನ್ನು ಭೇಟಿಯಾಗಿದ್ದಾರೆ. 
 

36

ಕಿಚ್ಚ ಸುದೀಪ್ ಮತ್ತು ಶಿಖರ್ ಧವನ್ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಂಗಳೂರಿನಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಭೇಟಿಯಾಗಿ ಕೆಲವು ಸಮಯ ಒಟ್ಟಿಗೆ ಕಳೆದಿದ್ದಾರೆ. ಮಾತು ಕತೆ ನಡೆಸಿದ್ದಾರೆ. 

46

ಸಿನಿಮಾ ಮತ್ತು ಕ್ರಿಕೆಟ್ ಬಗ್ಗೆ ಇಬ್ಬರೂ ಒಂದಿಷ್ಟು ಸಮಯ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸುದೀಪ್ ಸದ್ಯ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶಿಖರ್ ಧವನ್ ಭೇಟಿಯಾಗಿದ್ದು ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ. 

56

ಶಿಖರ್ ಧವರನ್ನು ಭೇಟಿಯಾದ ಫೋಟೋಗಳನ್ನು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎಂಥ ಅದ್ಭುತವಾದ ಭೇಟಿ ಎಂದು ಹೇಳಿದ್ದಾರೆ.  ಶಿಖರ್ ಧವನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿ, 'ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್‌ಗೆ ನನ್ನ ಸಹೋದರನಿಗೆ ಶುಭಾಶಯಗಳು' ಎಂದು ಹೇಳಿದ್ದಾರೆ. ಭೇಟಿಯ ನಿಜವಾದ ಕಾರಣ ಮಾತ್ರ ರಿವೀಲ್ ಮಾಡಿಲ್ಲ. 

66

ಕಿಚ್ಚ ಮತ್ತು ಧವನ್ ಭೇಟಿಯ ಫೋಟೋಗಳಿಗೆ ಅಭಿಮಾನಿಗಳು ಲೈಕ್ಸ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಗಬ್ಬರ್ ಸಿಂಗ್ ಆಲ್ ಇಂಡಿಯಾ ಕಟೌಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅಪ್ ಡೇಟ್ ನೀಡಿ ಎಂದು ಕೇಳುತ್ತಿದ್ದಾರೆ. ಕೆಲವು ಅಭಿಮಾನಿಗಳು ಕಿಂಗ್ ಕೊಹ್ಲಿ ಅವರನ್ನು ಭೇಟಿ ಮಾಡಿ ಎಂದು ಹೇಳುತ್ತಿದ್ದಾರೆ. 
 

Read more Photos on
click me!

Recommended Stories