ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸದ್ಯ ಜಾಲಿ ಮೋಡ್‌ನಲ್ಲಿದ್ದಾರೆ, ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
26
ವಿದೇಶ ಪ್ರಯಾಣ ಮಾಡುತ್ತಿರುವ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್ ಸ್ಥಳದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ ಆದರೆ ಸ್ಥಳ ಯಾವುದು ಎಂದು ರಿವೀಲ್ ಮಾಡಿಲ್ಲ.
36
'ಚೀಸ್ ಮತ್ತು ಜಿಲಾಟೋ ಅತಿ ಹೆಚ್ಚಿರುವ ಸ್ಥಳವಿದು.....ಇಲ್ಲಿ ಸೂರ್ಯ ತುಂಬಾ ತಡವಾಗಿ ಹೊರ ಬರುತ್ತಾನೆ. ನಾವು ಸದ್ಯಕ್ಕೆ ನಾಟ್ ರೀಚಬಲ್..ನಮ್ಮ ರಾಜ್ಯದಿಂದ ತುಂಬಾ ದೂರದಲ್ಲಿದ್ದೀವಿ'ಎಂದು ರಾಧಿಕಾ ಬರೆದುಕೊಂಡಿದ್ದಾರೆ.
46
ರಾಧಿಕಾ ಪೋಸ್ಟ್‌ಗೆ 'ಇಟಲಿ!! ನೀವಿಬ್ಬರೂ ಲಕ್ಕಿ.... ಸಖತ್ ಮಜಾ ಮಾಡಿ ಎಂಜಾಯ್'ಎಂದು ಸಂಸದೆ ಸುಮಲತಾ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ಸ್ಥಳ ಯಾವುದು ಎಂದು ರಿವೀಲ್ ಆಯ್ತು.
56
ಇಟಲಿ ಕಲರ್‌ಫುಲ್ ರಸ್ತೆಗಳನ್ನು ನಿಂತುಕೊಂಡು ರಾಧಿಕಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಫ್ಲೋರಲ್ ಪಿಂಕ್ ಆಂಡ್ ವೈಟ್ ಫ್ರಾಕ್‌ನಲ್ಲಿ ಮಿಂಚಿದ್ದಾರೆ.
66
ಸಾಮಾನ್ಯವಾಗಿ ರಾಧಿಕಾ ಮತ್ತು ಯಶ್ ಒಂದೇ ಬಣ್ಣದ ಡ್ರೆಸ್ ಧರಿಸುತ್ತಾರೆ ಆದರೆ ಮೊದಲ ಬಾರಿ ಕಾಂಬಿನೇಷನ್ ಡ್ರೆಸ್ ಧರಿಸಿದ್ದಾರೆ. ಯಶ್ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.