ತೋಟಗಾರಿಕಾ ಇಲಾಖೆಯಿಂದ ರಾಜ್‌ ಕುಟುಂಬ ಭೇಟಿ; ವಿಶೇಷ ಫ್ಲವರ್‌ ಶೋಗೆ ಪ್ಲಾನ್

Published : Jul 21, 2022, 12:22 PM IST

ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ.   

PREV
16
ತೋಟಗಾರಿಕಾ ಇಲಾಖೆಯಿಂದ ರಾಜ್‌ ಕುಟುಂಬ ಭೇಟಿ;  ವಿಶೇಷ ಫ್ಲವರ್‌ ಶೋಗೆ ಪ್ಲಾನ್

ಡಾ||ರಾಜಕುಮಾರ್  ಹಾಗೂ ಪುನೀತ್ ರಾಜಕುಮಾರ್ ಅವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಡಾ|ರಾಜ್ ಕುಟುಂಬದವರಿಂದ ಸೂಕ್ತ ಸಲಹೆ. 

26

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಲಾಲ್ ಬಾಗ್ ನಲ್ಲಿ ಆಗಸ್ಟ್ 5 ರಿಂದ 15 ರವರೆಗೂ ನಡೆಯಲಿದೆ.  ಈ ಬಾರಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ರವರ ವಿಷಯಾಧಾರಿತ ವಿಶೇಷ ಫಲಪುಷ್ಪ ಪ್ರದರ್ಶನವನ್ನು  ಹಮ್ಮಿಕೊಳ್ಳಲಾಗಿದೆ.

36

ಆಗಸ್ಟ್ 5ರಂದು ಫಲಪುಷ್ಪ  ಪ್ರದರ್ಶನವು  ಉದ್ಘಾಟನೆಗೊಳ್ಳಲಿದ್ದು ಖ್ಯಾತ ಚಿತ್ರನಟರಾದ, ಡಾ.ಶಿವರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರನ್ನು ಇಂದು ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆತ್ಮೀಯವಾಗಿ  ವಿನಂತಿಸಲಾಯಿತು.

46

ಈ ಸಂದರ್ಭದಲ್ಲಿ ಉದ್ಯಾನ  ಕಲಾಸಂಘದ  ಉಪಾಧ್ಯಕ್ಷರಾದ ಶ್ರೀ ವಾಸುದೇವ್. ತೋಟಗಾರಿಕೆ  ಜಂಟಿ ನಿರ್ದೇಶಕರಾದ  ಡಾ. ಎಂ ಜಗದೀಶ್ ಹಾಗೂ  ಲಾಲ್ ಬಾಗ್  ತೋಟಗಾರಿಕೆ ಉಪನಿರ್ದೇಶಕರಾದ  ಶ್ರೀಮತಿ ಜಿ ಕುಸುಮ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ರವರು ಉಪಸ್ಥಿತರಿದ್ದರು.

56

ಗಾಜನೂರಿನಲ್ಲಿ ಇರುವ ಡಾ ರಾಜ್ ಕುಮಾರ್ ಹುಟ್ಟಿದ ಮನೆ ಯ ಮಾದರಿ ಯನ್ನು ಮಾಡಿ ಮನೆಯ ಅಂಗಳದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿಯಲ್ಲಿ ಪ್ರತಿಮೆಗಳನ್ನು ಮಾಡಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ. ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ಹೈಲೈಟ್ ಆಗಲಿದೆ.

66

ಟಿಕೆಟ್ ದರ ನಿಗದಿ ಮಾಡುವ ವಿಚಾರದಲ್ಲಿ ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಸಚಿವ ಮುನಿರತ್ನ ಹೇಳಿದ್ದಾರೆ.  ಶಾಲಾಮಕ್ಕಳಿಗೆ ಫಲಪುಷ್ಪ ಪ್ರದರ್ಶನ ಅಂದ್ರೆ ಸ್ವಲ್ಪ ಹೆಚ್ಚು ಕ್ರೇಜ್ ಇರುತ್ತೆ. ಹಾಗಾಗಿ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವ ಬಗ್ಗೆ ಕೂಡ ಚಿಂತನೆ ನಡೆಸಲಾಗ್ತಿದೆ. 

Read more Photos on
click me!

Recommended Stories