ಬಾಡಿಗಾರ್ಡ್‌ ಜೊತೆ ಯಶ್ ಫ್ಯಾಮಿಲಿ ಪಾರ್ಟಿ: ಬೇಧಭಾವ ಮಾಡಲ್ಲ, ಡಾ. ರಾಜ್ ರೀತಿ ನಮ್ಮ ಬಾಸ್ ಎಂದ ನೆಟ್ಟಿಗರು!

First Published | Sep 28, 2024, 3:17 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಯಶ್ ಮತ್ತು ಟೀಂ ಲಂಚ್ ಫೋಟೋ. ಸರಳತೆಯನ್ನು ಮೆಚ್ಚಿಕೊಂಡಾಡಿದ ಅಭಿಮಾನಿಗಳು..... 

ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಂದು ನಿಲ್ಲಿಸಿದ ಸ್ಯಾಂಡಲ್‌ವುಡ್‌ ಓನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ರಾಖಿ ಬಾಯ್ ಇದೀಗ ತಮ್ಮ ಆಪ್ತರ ಜೊತೆ ಸಮಯ ಕಳೆದಿದ್ದಾರೆ.

 ಟಾಕ್ಸಿಕ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು ರಾಕಿಂಗ್ ಸ್ಟಾರ್ ಯಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬೆಂಗಳೂರು ಮತ್ತು ಮುಂಬೈ ನಡುವೆ ಆಗಾಗ ಪ್ರಯಾಣ ಮಾಡುತ್ತಿರುತ್ತಾರೆ. 

Tap to resize

ಸಿನಿಮಾ ಕೆಲಸಗಳಲ್ಲಿ ಯಶ್ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಫ್ಯಾಮಿಲಿ ಟೈಂ ಎಂದೂ ಮಿಸ್ ಮಾಡುವುದಿಲ್ಲ. ತಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರನ್ನು ಫ್ಯಾಮಿಲಿ ರೀತಿಯಲ್ಲಿ ನೋಡಿಕೊಳ್ಳುತ್ತಾರೆ.

ಕೆಲವು ದಿನಗಳ ಹಿಂದೆ ಯಶ್ ಮತ್ತು ರಾಧಿಕಾ ಪಂಡಿತ್ ಮುಂಬೈ ಕಡೆ ಪ್ರಯಾಣ ಮಾಡಿದ್ದರು. ಈ ವೇಳೆ ತಮ್ಮ ಬಾಡಿ ಗಾರ್ಡ್ ಶ್ರೀನಿವಾಸ್, ಜಿಮ್ ಟ್ರೇನರ್ ಕಿಟ್ಟಿ ಜೊತೆ ಊಟ ಮಾಡಿರುವ ಫೋಟೋ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ಯಶ್ ರಾಧಿಕಾ ತಮ್ಮ ಮಕ್ಕಳು ಮತ್ತು ಅತ್ತೆಮಾವನ ಜೊತೆಯಲ್ಲಿ ಪ್ರಯಾಣ ಮಾಡಿದ್ದಾರೆ. ತಮ್ಮ ಜೊತೆ ಕೆಲಸ ಮಾಡುವವರನ್ನು ಒಂದೇ ಟೇಬಲ್‌ ಮೇಲೆ ಕುಳಿಸಿಕೊಂಡ ಊಟ ಮಾಡಿಸಿದ್ದಾರೆ.

ಡಾ.ರಾಜ್‌ಕುಮಾರ್ ಕೂಡ ಪ್ರತಿಯೊಬ್ಬರನ್ನೂ ಗೌರವಿಸುತ್ತಿದ್ದರು ಯಾವುದೇ ಬೇಧಬಾವ ಮಾಡುತ್ತಿರಲಿಲ್ಲ ನಮ್ಮ ಯಶ್ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!