ಕೆಜಿಎಫ್ ಸಿನಿಮಾ ಕನ್ನಡದ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಸುದ್ದಿ ಮಾಡುವಂತೆ ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ಎರೆ ಮೇಲೆ ಎಂದಿಗೂ ಜೊತೆಯಾಗಿ ಕಾಣಿಸಿಕೊಳ್ಳದ ಅತ್ತೆ-ಸೊಸೆ ರಿಯಲ್ ಆಗಿ ಜೊತೆ ಸೇರಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
ಕೆಜಿಫ್ ಆಗಿರಬಹುದು ಅಥವಾ ಕೆಜಿಎಫ್ ಪಾರ್ಟ್ 1 ಆಗಿರಬಹುದು. ಎರಡೂ ಸಿನಿಮಾಗಳು ಸಹ ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ ಚಿತ್ರವಿದು.
27
ಸಿನಿಮಾದ ಅತ್ತೆ ಸೊಸೆ
ಕೆಜಿಎಫ್ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು ಸಹ ಭಾರಿ ಸದ್ದು ಮಾಡಿದ್ದವು. ಯಶ್ ಅಮ್ಮನಾಗಿ ಅಭಿನಯಿಸಿದ ಅರ್ಚನಾ ಜೋಯಿಸ್ ಇರಬಹುದು ಅಥವಾ ರೀನಾ ರಾಯ್ ಆಗಿ ಅಭಿನಯಿಸಿದ ಶ್ರೀನಿಧಿ ಶೆಟ್ಟಿ ಇರಬಹುದು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದರು.
37
ಸಿನಿಮಾದಲ್ಲಿ ಇಬ್ಬರು ಜೊತೆಯಾಗಲೇ ಇಲ್ಲ
ಕೆಜಿಎಫ್ ಸಿನಿಮಾದಲ್ಲಿ ತಾಯಿ ಪಾತ್ರವು ನೆನಪುಗಳಲ್ಲಿ ಮಾತ್ರ ಪದೇ ಪದೇ ಬರುತ್ತೆ. ಸಿನಿಮಾದ ಕಥೆಯ ಮೂಲವೇ ತಾಯಿ ಪಾತ್ರ. ಆದರೆ ತಾಯಿಯ ಇರುವಿಕೆ ರಾಕಿ ಬಾಯ್ ನೆನಪುಗಳಲ್ಲಿ ಮಾತ್ರ ಹಾಗಾಗಿ ಸಿನಿಮಾದಲ್ಲಿ ರಾಕಿ ಬಾಯ್ ತಾಯಿ ಹಾಗೂ ಪತ್ನಿ ಜೊತೆಯಾಗುವ ದೃಶ್ಯವೇ ಇಲ್ಲ.
ಇದೀಗ ಶ್ರೀನಿಧಿ ಶೆಟ್ಟಿ ಹಾಗೂ ಅರ್ಚನಾ ಜೋಯಿಸ್ ರಿಯಲ್ ಲೈಫಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು. ಇಬ್ಬರು ಪಾರ್ಟಿ ಮೂಡ್ ನಲ್ಲಿದ್ದು. ರೀಲಲ್ಲಿ ಒಂದಾಗದ ಕೆಜಿಎಫ್ ಅತ್ತೆ ಸೊಸೆ ರಿಯಲ್ ಲೈಫಲ್ಲಿ ಒಂದಾಗಿರೋದು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
57
ಭುವನ್ ಗೌಡ ಮದುವೆ
ಶ್ರೀನಿಧಿ ಶೆಟ್ಟಿ ಮತ್ತು ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದ ಭುವನ್ ಗೌಡ ಅವರ ಮದುವೆ ಸಮಾರಂಭದಲ್ಲಿ, ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.
67
ಶ್ರೀನಿಧಿ ಶೆಟ್ಟಿ
ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಕ್ರಮ್ ಜೊತೆ ಕೋಬ್ರಾ ಹಾಗೂ ನಾಣಿ ಜೊತೆ ಹಿಟ್ ಸಿನಿಮಾದಲ್ಲಿ ನಟಿಸಿದ್ದರು. ಮುಂದೆ ಸುದೀಪ್ ಜೊತೆಗಿನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.