Srinidhi Shetty: ವಧುವಿನ ಲುಕ್​ನಲ್ಲಿ ಕಂಗೊಳಿಸಿದ ಕೆಜಿಎಫ್ ಕ್ವೀನ್‌: ಮದ್ವೆ ಫಿಕ್ಸ್​ ಆಯ್ತಾ ಎಂದು ಕೇಳಿದ ನೆಟ್ಟಿಗರು!

Published : Nov 28, 2023, 03:00 AM IST

ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್‌ ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಖ್ಯಾತಿ ಪಡೆದರು. ಅವರ ಅಂದ ಚೆಂದಕ್ಕೆ ಅನೇಕರು ಮನಸೋತಿದ್ದಾರೆ. ಇದೀಗ ಶ್ರೀನಿಧಿ ಶೆಟ್ಟಿ ವಧುವಾಗಿದ್ದಾರೆ. 

PREV
17
Srinidhi Shetty: ವಧುವಿನ ಲುಕ್​ನಲ್ಲಿ ಕಂಗೊಳಿಸಿದ ಕೆಜಿಎಫ್ ಕ್ವೀನ್‌: ಮದ್ವೆ ಫಿಕ್ಸ್​ ಆಯ್ತಾ ಎಂದು ಕೇಳಿದ ನೆಟ್ಟಿಗರು!

ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾ  ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವ್ರಿಗೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿಯೇ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ನಟಿ ಆಗಾಗ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

27

ಇದೀಗ ವಧುವಿನ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಶ್ರೀನಿಧಿ, ಮಾಡಿರೋದು ಕೆಲವೇ ಸಿನಿಮಾಗಳಾದ್ರೂ ನಟಿ ಎಲ್ಲರಿಂದಲೂ ಭಾರೀ ಮೆಚ್ಚುಗೆಗಳಿಸಿದ್ದಾರೆ. ಇದೀಗ ಕಾಲಿವುಡ್, ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ.

37

ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಬ್ರೈಡಲ್ ಲುಕ್​ನಲ್ಲಿ ಮಿಂಚಿದ್ದಾರೆ. ಆಕರ್ಷಕವಾದ ಸೀರೆಯುಟ್ಟಿದ್ದ ಶ್ರೀನಿಧಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅವರ ಬ್ರೈಡಲ್ ಲುಕ್ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

47

ಹಸಿರು ಝರಿಯಂಚಿನ ಪಿಂಕ್ ಬಣ್ಣದ ಸೀರೆ ಉಟ್ಟಿದ್ದ ಶ್ರೀನಿಧಿ ಶೆಟ್ಟಿ ಕೊಂಚ ರಾಯಲ್ ಲುಕ್​ನಲ್ಲಿ ಮಿಂಚಿದ್ದಾರೆ. ಜೊತೆಗೆ ಅವರು ಗೋಲ್ಡನ್ ಜ್ಯುವೆಲ್ಸ್ ಕೂಡಾ ಧರಿಸಿದ್ದು ತುಂಬಾ ಗ್ರ್ಯಾಂಡ್ ಬ್ರೈಡ್ ಆಗಿ ಕಾಣಿಸಿಕೊಂಡಿದ್ದಾರೆ.

57

ಶ್ರೀನಿಧಿ ಅರಮನೆಯಂತಹ ಬ್ಯಾಗ್ರೌಂಡ್​ನಲ್ಲಿ ವಿವಿಧ ಭಂಗಿಗಳಲ್ಲಿ ಫೋಟೋಸ್‌ ತೆಗೆಸಿಕೊಂಡಿದ್ದು ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು ಮದುವೆ ಯಾವಾಗ ಅಂತ ಪ್ರಶ್ನೆ ಮಾಡಿದ್ದಾರೆ.

67

ಶ್ರೀನಿಧಿ ಶೆಟ್ಟಿ ಅವರು 21 ಅಕ್ಟೋಬರ್ 1992 ರಂದು ಕರ್ನಾಟಕದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಜನಿಸಿದರು. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 2015 ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಗೆದ್ದರು.

77

ಶ್ರೀನಿಧಿ ಮಿಸ್ ದಿವಾ 2016 ರಲ್ಲಿ ಸೂಪರ್ ನ್ಯಾಷನಲ್ ಆದರು. ಜೊತೆಗೆ ಮಣಪ್ಪುರಂ ಮಿಸ್ ಕ್ವೀನ್ ಇಂಡಿಯಾ ಕಿರೀಟವನ್ನು ಗೆದ್ದರು. ಇನ್ನು ಶ್ರೀನಿಧಿ ಅನೇಕ ಉತ್ಪನ್ನಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories