ನೇಪಾಳದಲ್ಲಿ ಖ್ಯಾತ ಗಾಯಕಿ ಅನುರಾಧ ಭಟ್…. ಸಹೋದರಿ ಜೊತೆ ಪಶುಪತಿ ದರ್ಶನ

Published : Nov 27, 2023, 03:42 PM IST

ಕನ್ನಡ ಸಿನಿ ಲೋಕದ ಖ್ಯಾತ ಗಾಯಕಿ ಅನುರಾಧ ಭಟ್ ಸದ್ಯ ನೇಪಾಳದಲ್ಲಿ ತಮ್ಮ ಸಹೋದರಿ ಜೊತೆ ಪ್ರವಾಸದಲ್ಲಿದ್ದು, ದೇಗುಲ ದರ್ಶನ ಮಾಡುತ್ತಾ, ಅಕ್ಕ, ತಂಗಿ ಎಂಜಾಯ್ ಮಾಡ್ತಿದ್ದಾರೆ.   

PREV
17
ನೇಪಾಳದಲ್ಲಿ ಖ್ಯಾತ ಗಾಯಕಿ ಅನುರಾಧ ಭಟ್…. ಸಹೋದರಿ ಜೊತೆ ಪಶುಪತಿ ದರ್ಶನ

ಸ್ಯಾಂಡಲ್ ವುಡ್ ನ ಖ್ಯಾತ ಗಾಯಕಿ (SInger)  ಮತ್ತು ಸದ್ಯ ಸರಿಗಮಪ ಮೆಂಟರ್ ಆಗಿರುವ ಅನುರಾಧ ಭಟ್ (Anuradha Bhat) ಅವರು ತಮ್ಮ ಸಹೋದರಿ ಹಾಗೂ ನಟಿ, ನಿರೂಪಕಿಯಾಗಿರುವ ಅನುಪಮಾ ಭಟ್ ಜೊತೆ ಸದ್ಯ ನೇಪಾಳದಲ್ಲಿದ್ದು, ಅಲ್ಲಿ ದೇಗುಲಗಳು, ಸುಂದರ ತಾಣಗಳ ದರ್ಶನ ಪಡೆಯುತ್ತಿದ್ದಾರೆ. 
 

27

ನೇಪಾಳದ ಹಲವಾರು ದೇಗುಲಗಳಿಗೆ ಭೇಟಿ ನೀಡಿರುವ ಅನುರಾಧ ಭಟ್, ಅಲ್ಲಿನ ಸುಂದರವಾದ ಫೋಟೋಗಳನ್ನು ದೇಗುಲಗಳ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿದ್ದು, ನೇಪಾಳದ ಕಠ್ಮಂಡುವಿನಲ್ಲಿ ಒಂದು ದಿನ ಎಂದು ಬರೆದುಕೊಂಡಿದ್ದಾರೆ. 
 

37

ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮದಲ್ಲಿ ಭಾಗಿಯಾಗಲು ನೇಪಾಳಕ್ಕೆ ತೆರಳಿದ್ದ ಅನುರಾಧಾ ಭಟ್. ಅಲ್ಲಿನ ಕನ್ನಡ ಜನತೆಗಾಗಿ ಹಲವಾರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಮನರಂಜನೆ ನೀಡಿದ್ದಾರೆ. 
 

47

ಈ ವರ್ಷ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನೇಪಾಳದ ಪಶುಪತಿ ದೇವಾಲಯದಲ್ಲಿ (Pashupathinath Temple) ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್‌ ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಅನುರಾಧ ಭಾಗಿಯಾಗಿದ್ದರು. 
 

57

ಅನುರಾಧ ಭಟ್ (Anuradha Bhat) ಅವರು ಕಾರ್ಯಕ್ರಮದ ಜೊತೆಗೆ ನೇಪಾಳ ಪ್ರವಾಸ ಕೈಗೊಂಡಿದ್ದು, ಪಶುಪತಿನಾಥ ಮಂದಿರ, ಬೌಧನಾಥ್ ಸ್ತೂಪ, ಜಲ್ ನಾರಾಯಣ ಮಂದಿರ, ಕಠ್ಮಂಡು ದರ್ಬಾರ್ ಸ್ಕ್ವೇರ್ ಮೊದಲಾದ ಪ್ರಸಿದ್ಧ ತಾಣಗಳಿಗೆ ತೆರಳಿ ದೇವರ ದರ್ಶನ ಮಾಡಿದ್ದಾರೆ. 
 

67

ಅಲ್ಲದೇ ನೇಪಾಳವು ಜೀವ ಕಳೆ ಇರುವಂತಹ ದೇಶ, ಇಲ್ಲಿನ ಸಂಪ್ರದಾಯ ಮತ್ತು ಸಂಸ್ಕೃತಿ ಅದ್ಭುತವಾಗಿದೆ. ಈ ದೇಶವನ್ನು ಮತ್ತಷ್ಟೂ ಎಕ್ಸ್ ಪ್ಲೋರ್ ಮಾಡೋದು ಬಾಕಿ ಇದೆ ಎಂದು ಅನುರಾಧ ಭಟ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ (Instagram) ಬರೆದುಕೊಂಡಿದ್ದಾರೆ. 
 

77

ಅಲ್ಲದೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಮನೊಕಾಮನ ದೇವಾಲಯದ ಸುಂದರ ಕಲರ್ ಫುಲ್ ಅಂಗಡಿಗಳಿಂದ ಕೂಡಿದ ಪರಿಸರವನ್ನು ತಮ್ಮ ಸಹೋದರಿ ಅನುಪಮ ಭಟ್ (Anupama Bhat) ಜೊತೆ ವಿಡೀಯೋ ಮೂಲಕ ತೋರಿಸಿದ್ದಾರೆ. 
 

Read more Photos on
click me!

Recommended Stories