Esha Lankesh: ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ: ನಾಯಕಿಯಾದ ಪಿ.ಲಂಕೇಶ್ ಮೊಮ್ಮಗಳು

Published : Jul 08, 2026, 05:15 PM IST

ನವಿಶಾ ಫಿಲ್ಮ್ಸ್ ಬ್ಯಾನರ್‌ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.

PREV
14
ಪಿ.ಲಂಕೇಶ್ ಮೊಮ್ಮಗಳು

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ನಾಯಕಿಯ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಖ್ಯಾತ ಪತ್ರಕರ್ತ, ಲೇಖಕ ಪಿ. ಲಂಕೇಶ್ ಅವರ ಮೊಮ್ಮಗಳು ಹಾಗೂ ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಇದೀಗ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ತಮ್ಮ ಸಿನಿ ಪಯಣ ಆರಂಭಿಸುತ್ತಿದ್ದಾರೆ. ಸ್ಟಾರ್‌ಗಳ ಮಕ್ಕಳು, ನಿರ್ದೇಶಕರು ಹಾಗೂ ನಿರ್ಮಾಪಕರ ಕುಟುಂಬದ ಸದಸ್ಯರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು ಹೊಸ ಸಂಗತಿಯಲ್ಲ.

24
ಪ್ರೀತಂ ಗುಬ್ಬಿ ಆ್ಯಕ್ಷನ್-ಕಟ್

ಆದರೆ ಪ್ರತಿಭೆಯ ಮೂಲಕ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವುದು ಮುಖ್ಯ. ಆ ನಿಟ್ಟಿನಲ್ಲಿ ಇಶಾ ಲಂಕೇಶ್ ಕೂಡ ತಮ್ಮ ಮೊದಲ ಚಿತ್ರದಲ್ಲೇ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇಶಾ ನಾಯಕಿಯಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಪ್ರೀತಂ ಗುಬ್ಬಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈಗಾಗಲೇ ದಿಲ್ ರಂಗೀಲಾ, ಜಾನು ಹಾಗೂ ಬಾನ ದಾರಿಯಲ್ಲಿ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರು, ಈ ಹೊಸ ಪ್ರಾಜೆಕ್ಟ್‌ಗೆ ನಿರ್ದೇಶನ ಮಾಡುತ್ತಿದ್ದಾರೆ.

34
ಪಾತ್ರದ ಆಯ್ಕೆಯಲ್ಲೂ ವಿಶೇಷ

ನವಿಶಾ ಫಿಲ್ಮ್ಸ್ ಬ್ಯಾನರ್‌ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್, ನಟನೆಯ ತರಬೇತಿ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಭಿನಯದ ಜೊತೆಗೆ ಪಾತ್ರದ ಆಯ್ಕೆಯಲ್ಲೂ ವಿಶೇಷ ಗಮನಹರಿಸಿರುವ ಅವರು, ಮೊದಲ ಸಿನಿಮಾದಲ್ಲೇ ವಿಭಿನ್ನವಾಗಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ.

44
ಶೀಘ್ರದಲ್ಲೇ ಅನಾವರಣ

ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ನಾಯಕಿಯ ಪರಿಚಯವನ್ನು ಮಾತ್ರ ಅಧಿಕೃತವಾಗಿ ಪ್ರಕಟಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ, ಚಿತ್ರದ ಉಳಿದ ಕಲಾವಿದರು, ತಾಂತ್ರಿಕ ವರ್ಗ ಹಾಗೂ ಕಥೆಯ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಾವಂತ ನಿರ್ದೇಶಕರೊಂದಿಗೆ ಇಶಾ ಲಂಕೇಶ್ ಅವರ ಚೊಚ್ಚಲ ಸಿನಿಮಾ ಘೋಷಣೆಯಾಗಿರುವುದರಿಂದ, ಈ ಹೊಸ ಜೋಡಿಯ ಸಿನಿಮಾ ಕುರಿತು ಸಿನಿಪ್ರಿಯರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories