ʼಕಾಂತಾರ 1ʼ ಸಿನಿಮಾದಲ್ಲಿ ಬ್ಯುಸಿಯಿರೋ ರಿಷಬ್ ಶೆಟ್ಟಿ ಕುಟುಂಬದ ಯುಗಾದಿ ಆಚರಣೆ ಫೋಟೋಗಳಿವು!
ನಟ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಯುಗಾದಿ ಆಚರಿಸಿದ್ದಾರೆ. ಹಬ್ಬದ ಆಚರಣೆಯ ಸುಂದರ ಫೋಟೋಗಳಿವು.
ನಟ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಯುಗಾದಿ ಆಚರಿಸಿದ್ದಾರೆ. ಹಬ್ಬದ ಆಚರಣೆಯ ಸುಂದರ ಫೋಟೋಗಳಿವು.
'ಕಾಂತಾರ' ಸಿನಿಮಾ ಮೂಲಕ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕುಟುಂಬದ ಜೊತೆಗೆ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಹಾಗೂ ಮುದ್ದು ಮಕ್ಕಳ ಜೊತೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ವಿಶೇಷವಾಗಿ ಹಬ್ಬ ಆಚರಿಸಿದ್ದಾರೆ.
ಪ್ರಗತಿ ಶೆಟ್ಟಿ, ರಣ್‌ವಿಥ್ ಶೆಟ್ಟಿ, ರಾಧ್ಯಾ ಶೆಟ್ಟಿ, ರಿಷಬ್ ಶೆಟ್ಟಿ ಅವರು ಟ್ರೆಡಿಷನಲ್ ಡ್ರೆಸ್ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ದೈವಭಕ್ತರು. ಸಮಯ ಸಿಕ್ಕಾಗ ಅವರು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಹಸು, ಎತ್ತುಗಳಿಗೆ ಕಬ್ಬು ನೀಡಿದ್ದಾರೆ. ರಿಷಬ್ ಅವರ ಸುಂದರ ಫೋಟೋ ಇದಾಗಿದೆ.
ʼಕಾಂತಾರʼ ಸಿನಿಮಾ ನಂತರದಲ್ಲಿ ರಿಷಬ್ ಶೆಟ್ಟಿ ಅವರು ಯಾವಾಗ ಪಾರ್ಟ್ 2 ರಿಲೀಸ್ ಮಾಡ್ತಾರೆ ಎಂದು ವೀಕ್ಷಕರು ಕಾಯುತ್ತಲಿದ್ದಾರೆ. ಆದರೆ ರಿಷಬ್ ಶೆಟ್ಟಿ ಅವರು ಪ್ರೀಕ್ವೆಲ್ ರೆಡಿ ಮಾಡುತ್ತಿರೋದಾಗಿ ಹೇಳಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರು ಬಸವಣ್ಣನಿಗೆ ನಮಸ್ಕಾರ ಮಾಡಿದ್ದಾರೆ. ಆದಷ್ಟು ಬೇಗ ಅವರು ಸಿನಿಮಾವನ್ನು ತೆರೆ ಮೇಲೆ ತರಲಿದ್ದಾರಂತೆ. ಇದಕ್ಕಾಗಿ ಭರ್ಜರಿ ತಯಾರಿ ಕೂಡ ಮಾಡಿಕೊಂಡಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಈಗ ಭರ್ಜರಿ ಡಿಮ್ಯಾಂಡ್ ಇದೆ. ಹೀಗಾಗಿ ಅವರು ಕಥೆ ನೋಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.