ರಗಡ್‌ ಪೊಲೀಸ್ ಗೆಟಪ್​​ನಲ್ಲಿ ಬಿಗ್​ಬಾಸ್ ತನಿಷಾ: ಲೇಡಿ ಸಿಂಗಂ ಬೆಂಕಿ ಗುರು ಎಂದ ಫ್ಯಾನ್ಸ್‌!

First Published | Mar 17, 2024, 8:45 AM IST

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ, ಬಿಗ್‌ಬಾಸ್‌ ಖ್ಯಾತಿಯ ಬೆಂಕಿ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್‌ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಬಿಗ್ ಬಾಸ್‌ ಬೆಡಗಿ ತನಿಷಾ ಕುಪ್ಪಂಡ ಅವರು ದೊಡ್ಮನೆ ಆಟ ಮುಗಿದ ಮೇಲೆ ಭಾರೀ ಬೇಡಿಕೆ ಇದೆ. ಸಿನಿಮಾ, ಬ್ಯುಸಿನೆಸ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಪೊಲೀಸ್ ಅವತಾರದಲ್ಲಿ ತನಿಷಾ ಕುಪ್ಪಂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ತನಿಷಾ ಕುಪ್ಪಂಡ ಖಡಕ್ ಮಾತುಗಳ ಮೂಲಕ ಗಮನ ಸೆಳೆದ ನಟಿ. ಬಿಗ್ ಬಾಸ್ ಮನೆಯ ಬೆಂಕಿ ಎಂದೇ ಹೈಲೆಟ್ ಆಗಿರೋ ತನಿಷಾ ಖಾಕಿ ತೊಟ್ಟು ದುಷ್ಟರಿಗೆ ಕ್ಲಾಸ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.

Tap to resize

ನಟಿ ತನಿಷಾ ಕುಪ್ಪಂಡ ಪೋಲೀಸ್‌ ಗೆಟಪ್‌ನಲ್ಲಿ ಅಂದವಾಗಿ ಪೋನಿಟೈಲ್ ಹಾಕಿಕೊಂಡು, ನಾರ್ಮಲ್‌ ಮೇಕಪ್‌ನಲ್ಲಿ ಮತ್ತು ಕೈಯಲ್ಲಿ ವಾಟರ್‌ ಬಾಟೆಲ್‌ ಹಿಡಿದು ಆಕರ್ಷವಾಗಿ ಕಾಣಿಸಿಕೊಂಡಿದ್ದಾರೆ.

ತನಿಷಾ ಕುಪ್ಪಂಡ ಸದಾ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿ ಈ ಫೋಟೋಗಳನ್ನು ಕೂಡ ಅಭಿಮಾನಿಗಳ ಜೊತೆಗೆ ಶೇರ್‌ ಮಾಡಿದ್ದಾರೆ. ಈ ಫೋಟೋಗಳಿಗೆ ಸಾವಿರಾರು ಲೈಕ್ಸ್‌ ಬರುವುದರ ಜೊತೆಗೆ ನೆಟ್ಟಿಗರು ಕಾಮೆಂಟ್‌ ಮೇಲೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.  

ಕನ್ನಡತಿ ಹೀರೋ ಕಿರಣ್ ರಾಜ್ ನಟನೆಯ ‘ಶೇರ್’ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟಿಯೇ ಸ್ವತಃ ಅಪ್‌ಡೇಟ್ ನೀಡಿದ್ದಾರೆ. ನಟಿಯ ಖದರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ನಿಮ್ಮ ಗೆಟಪ್ ಬೆಂಕಿ ಎಂದು ತನಿಷಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪೊಲೀಸ್ ಅವತಾರದಲ್ಲಿರುವ ವಿವಿಧ ಭಂಗಿಯ ಫೋಟೋ ಶೇರ್ ಮಾಡಿದ್ದಾರೆ.

ತನಿಷಾ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜೊತೆಗೆ ಇದನ್ನು ನೋಡಿದ ಫ್ಯಾನ್ಸ್‌  ನೀವು ಲೇಡಿ ಸಿಂಗಂ, ಸೂಪರ್ ಬೆಂಕಿ ತನಿಷಾ, ಬೇಸಿಗೆಯಲ್ಲಿ ಬಿಸಿಲನ್ನೇ ತಡೆಯೋಕಾಗ್ತಿಲ್ಲ, ಬೆಂಕಿ ಬೇರೆ ಬಂತಾ ಅಂತೆಲ್ಲಾ ಕಾಮೆಂಟ್‌ಗಳಲ್ಲಿ ಹೊಗಳಿದ್ದಾರೆ.

Latest Videos

click me!