ಓರಾಯನ್ ಮಾಲ್‌ಲ್ಲಿ ಕಾಂತಾರಾ 1 ಪ್ರೀಮಿಯರ್ ಶೋ, ಮೂವಿ ವೀಕ್ಷಣೆಗೆ ಫ್ಯಾನ್ಸ್ ಜೊತೆ ಬಂದ ರಿಷಬ್

Published : Oct 01, 2025, 07:13 PM IST

ಓರಾಯನ್ ಮಾಲ್‌ಲ್ಲಿ ಕಾಂತಾರಾ 1 ಪ್ರೀಮಿಯರ್ ಶೋ, ಮೂವಿ ವೀಕ್ಷಣೆಗೆ ಫ್ಯಾನ್ಸ್ ಜೊತೆ ಬಂದ ರಿಷಬ್,  ಮಾಲ್‌ನ 7 ಸ್ಕ್ರೀನ್ ಕೂಡ ಹೌಸ್ ಫುಲ್ ಆಗಿದೆ. ಪತ್ನಿ ಸಮೇತ ರಿಷಬ್ ಶೆಟ್ಟಿ ಮಾಲ್‌ಗೆ ಆಗಮಿಸಿದ್ದು, ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ.

PREV
15
ಕಾಂತಾರಾ ಚಾಪ್ಟರ್ 1 ಪ್ರಿಮಿಯರ್ ಶೋ

ಕಾಂತಾರಾ ಚಾಪ್ಟರ್ 1 ಪ್ರಿಮಿಯರ್ ಶೋ

ದೇಶ ವಿದೇಶಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಕೌಂಟ್‌ಡೌನ್ ಶುರುವಾಗಿದೆ. ಅಕ್ಟೋಬರ್ 2ರಂದು ದೇಶಾದ್ಯಂತ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಅಂದರೆ ಇಂದು (ಅಕ್ಟೋಬರ್ 1) ಕಾಂತಾರಾ 1 ಸಿನಿಮಾದ ಪ್ರೀಮಿಯರ್ ಶೋ ಆಯೋಜನೆಗೊಂಡಿದೆ. ಪ್ರೀಮಿಯರ್ ಶೋಗೆ ಕಿಕ್ಕಿರಿದು ಜನ ಸೇರಿದ್ದಾರೆ.

25
ಓರಾಯನ್ ಮಾಲ್‌ಲ್ಲಿ ಕಾಂತಾರಾ ಪ್ರೀಮಿಯರ್ ಶೋ

ಓರಾಯನ್ ಮಾಲ್‌ಲ್ಲಿ ಕಾಂತಾರಾ ಪ್ರೀಮಿಯರ್ ಶೋ

ನಾಳೆ ದೇಶಾದ್ಯಂತ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆ ಹಿನ್ನಲೆಲ್ಲಿ ಇಂದು ಸಿನಿಮಾ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ರೀಮಿರ್ ಶೋ ಆಯೋಜನೆ ಮಾಡಲಾಗಿದೆ. ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ.

35
ಓರಾಯನ್ 7 ಸ್ಕ್ರೀನ್‍‌ಗಳಲ್ಲಿ ಪ್ರೀಮಿಯರ್ ಶೋ

ಓರಾಯನ್ 7 ಸ್ಕ್ರೀನ್‍‌ಗಳಲ್ಲಿ ಪ್ರೀಮಿಯರ್ ಶೋ

ಓರಾಯನ್ ಮಾಲ್‌ನಲ್ಲಿ 7 ಸ್ಕ್ರೀನ್‌ಗಳಲ್ಲಿ ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ರೀಮಿಯರ್ ಶೋ ನಡೆಯುತ್ತಿದೆ. ವಿಶೇಷ ಅಂದರೆ 7 ಸ್ಕ್ರೀನ್ ಕೂಡ ಹೌಸ್‌ಫುಲ್ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಪ್ರೀಮಿಯರ್ ಶೋ ವೀಕ್ಷಣೆಗೆ ಅವಕಾಶ ಸಿಗದ ಅಭಿಮಾನಿಗಳು ಓರಾಯನ್ ಮಾಲ್ ಹೊರಭಾಗದಲ್ಲಿ ಕಾಯುತ್ತಿದ್ದಾರೆ.

45
ಪತ್ನಿ ಜೊತೆ ಬಂದ ರಿಷಬ್ ಶೆಟ್ಟಿ

ಪತ್ನಿ ಜೊತೆ ಬಂದ ರಿಷಬ್ ಶೆಟ್ಟಿ

ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ರೀಮಿಯರ್ ಶೋ ವೀಕ್ಷಿಸಲು ರಿಷಬ್ ಶೆಟ್ಟಿ ಆಗಮಿಸಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಜೊತೆ ಆಗಮಿಸಿದ ರಿಷಬ್ ಶೆಟ್ಟಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಂಜೆ 6.30ಕ್ಕೆ ಪ್ರೀಮಿಯರ್ ಶೋ ಆರಂಭಗೊಂಡಿದೆ. ಶಿಳ್ಳೆ, ಚಪ್ಪಾಳೆ ಮೂಲಕ ಅಭಿಮಾನಗಳು ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಸ್ವಾಗತಿಸಿದ್ದಾರೆ.

55
ಕಾಂತಾರಾ ಸಿನಿಮಾ ಕ್ರೇಜ್

ಕಾಂತಾರಾ ಸಿನಿಮಾ ಕ್ರೇಜ್

ಕಾಂತಾರಾ ಸಿನಿಮಾ ದೇಶ ವಿದೇಶದಲ್ಲಿ ಭಾರಿ ಕ್ರೇಜ್ ಹುಟ್ಟುಹಾಕಿತ್ತು. ಈ ಸಿನಿಮಾದ ಯಶಸ್ಸಿನ ಬಳಿಕ ಪ್ರೀಕ್ವೆಲ್ ಕತೆ ಆರಂಭಗೊಂಡಿತ್ತು. ಕಾಂತಾರಾ ಚಾಪ್ಟರ್ 1 ಸಿನಿಮಾಗಾಗಿ ಕಳೆದ 3 ವರ್ಷಗಳಿಂದ ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮಂ ಸತತ ಪರಿಶ್ರಮಪಟ್ಟಿದೆ. ಇದೀಗ ಅದ್ಧೂರಿಯಾಗಿ ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ.

Read more Photos on
click me!

Recommended Stories