ಶೈನ್ ಶೆಟ್ಟಿ ಡ್ರೀಮ್​ ಗರ್ಲ್​ ಈಕೆ: ಕನಸಿನ ಕನ್ಯೆಯ ಬಗ್ಗೆ Bigg Boss ವಿನ್ನರ್​ ಓಪನ್​ ಮಾತು

Published : Oct 01, 2025, 12:12 PM IST

'ಜಸ್ಟ್ ಮ್ಯಾರೀಡ್' ಚಿತ್ರದ ಖುಷಿಯಲ್ಲಿರುವ ನಟ ಹಾಗೂ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ, ತಮ್ಮ ರಿಯಲ್ ಲೈಫ್‌ನಲ್ಲಿ ಇನ್ನೂ ಅವಿವಾಹಿತರಾಗಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ತಮ್ಮ ಕನಸಿನ ಕನ್ಯೆ  ಬಗ್ಗೆ ಹೇಳಿದ್ದು, ಅವರ ಜೊತೆ ಒಂದು ಚಿತ್ರದಲ್ಲಾದರೂ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

PREV
16
‘ಜಸ್ಟ್ ಮ್ಯಾರೀಡ್’ ಚಿತ್ರದ ಖುಷಿಯಲ್ಲಿ ಶೈನ್​ ಶೆಟ್ಟಿ

ನಟ ಶೈನ್​ ಶೆಟ್ಟಿ ಸಕತ್​ ಫೇಮಸ್​ ಆಗಿದ್ದು, ಬಿಗ್​ಬಾಸ್​ (Bigg Boss)5ನೇ ಸೀಸನ್​ನ ವಿನ್ನರ್​ ಆದ ಬಳಿಕ. ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟ, ಸದ್ಯ ‘ಜಸ್ಟ್ ಮ್ಯಾರೀಡ್’ ಚಿತ್ರದ ಖುಷಿಯಲ್ಲಿದ್ದಾರೆ. ಕಳೆದ ತಿಂಗಳು ಈ ಚಿತ್ರ ರಿಲೀಸ್​ ಆಗಿದೆ. ಕಳೆದ ವರ್ಷ ‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ಶೆಟ್ಟಿ ಮಿಂಚಿದ್ದರು. ಇದೀಗ ನಟಿ ಅಂಕಿತಾ ಅಮರ್ (Ankita Amar) ಜೊತೆ ಪರದೆ ಹಂಚಿಕೊಂಡಿದ್ದಾರೆ.

26
ಅವಿವಾಹಿತವಾಗಿರೋ ನಟ

ಇದು ರೀಲ್​ ಲೈಫ್​ ಮದ್ವೆ ಸ್ಟೋರಿ ಆಯ್ತು. ಇನ್ನು ರಿಯಲ್​ ಲೈಫ್​ನಲ್ಲಿ ಶೈನ್ ಶೆಟ್ಟಿ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​​ ಆಗಿದ್ದಾರೆ. ಇವರ ಮದುವೆಯ ಬಗ್ಗೆ ಸದಾ ಎಲ್ಲಿ ಹೋದರೂ ಅಭಿಮಾನಿಗಳ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ಆ ಬಗ್ಗೆ ಸದ್ಯ ಎಲ್ಲಿಯೂ ನಟ ಬಾಯಿ ಬಿಟ್ಟಿಲ್ಲ.

36
ಈಕೆಯೇ ಡ್ರೀಮ್​ ಗರ್ಲ್​

ಆದರೆ ಎಷ್ಟೇ ದೊಡ್ಡ ಸ್ಟಾರ್​ ಆದರೂ ಸೆಲೆಬ್ರಿಟಿ ಕ್ರಷ್​ ಇದ್ದೇ ಇರುತ್ತಾರೆ. ಅದೇ ರೀತಿ ಕನಸಿನ ಕನ್ಯೆಯೂ (Dream Girl) ಇರುತ್ತಾರೆ. ಇದೀಗ ನಟ ಶೈನ್​ ಶೆಟ್ಟಿ (Shine Shetty) ಅವರಿಗೆ ಕನಸಿನ ಕನ್ಯೆಯ ಬಗ್ಗೆ ಕೇಳಲಾಗಿದೆ. ಅದಕ್ಕೆ ಅವರು ನನ್ನ ಡ್ರೀಮ್​ ಗರ್ಲ್​ ರಮ್ಯಾ ಎಂದು ಹೇಳಿದ್ದಾರೆ. ಅಲ್ಲಿಗೆ ಮೋಹಕ ತಾರೆ ರಮ್ಯಾ ಎಂದರೆ ಹಲವು ಸೆಲೆಬ್ರಿಟಿಗಳಿಗೆ ಕ್ರಷ್​ ಎನ್ನುವುದು ತಿಳಿದಿದೆ. ಈಚೆಗೆ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಮಹೇಶ್​ ಕೂಡ ರಮ್ಯಾ ಹೆಸರು ಹೇಳಿದ್ದರು.

46
ರೇಖಾ ಎಂದ್ರೆ ಇಷ್ಟ

ಬಾಲ್ಯದಿಂದಲೂ ಬಾಲಿವುಡ್​​ ನಟಿ ರೇಖಾ ಕಂಡರೆ ಇಷ್ಟವಾಗಿತ್ತು. ಈಗ ರಮ್ಯಾ ಎಂದು ಶೈನ್​ ಶೆಟ್ಟಿ ಹೇಳಿದ್ದಾರೆ. ಅವರ ಜೊತೆ ಒಂದಾದರೂ ಚಿತ್ರ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

56
ಜಸ್ಟ್ ಮ್ಯಾರೀಡ್ ಸ್ಟೋರಿ ಏನು?

ಇನ್ನು ಅವರ ಜಸ್ಟ್ ಮ್ಯಾರೀಡ್ (Just Married) ಸಿನಿಮಾ ಸ್ಟೋರಿ ಹೇಳುವುದಾದರೆ, ‘ಇಡೀ ಫ್ಯಾಮಿಲಿಯಲ್ಲಿರೋ ಎಲ್ಲರಿಗೂ ಹೆಣ್ಣು ಮಕ್ಕಳೇ. ಅಂಥ ಕುಟುಂಬದಲ್ಲಿ ಓರ್ವ ಹುಡುಗ ಹುಟ್ಟುತ್ತಾನೆ. ಆತನನ್ನು ತುಂಬಾನೇ ಮುದ್ದಿನಿಂದ ಬೆಳೆಸಲಾಗುತ್ತದೆ. ಆತ ಹಾಯಾಗಿ ಬ್ಯಾಚುಲರ್ ಜೀವನ ನಡೆಸುತ್ತಾ ಇರುತ್ತಾನೆ. ಅಂಥವನಿಗೆ ವಿವಾಹ ಆದರೆ ಏನಾಗುತ್ತದೆ ಎಂಬುದೇ ಇದರ ಕಥೆ.

66
ಮೂಗುದಾರ ಹಾಕಿಸುವ ಯತ್ನ

‘ಹೋರಿಯನ್ನು ನಿಯಂತ್ರಿಸೋಕೆ ಮೂಗುದಾರ ಹಾಕುತ್ತಾರೆ. ಅದೇ ರೀತಿ ಈತನಿಗೂ ಒಂದು ಮೂಗುದಾರ ಹಾಕೋಣ ಎಂದು ಮದುವೆ ಮಾಡುತ್ತಾರೆ. ಆತರ ಮದುವೆ ಮಾಡಿದಾಗ ಏನಾಗುತ್ತದೆ? ಅವನು ಬದಲಾಗುತ್ತಾನಾ ಎಂಬುದು ಚಿತ್ರದ ಕಥೆ

Read more Photos on
click me!

Recommended Stories