Rishab Shetty Kantara Movie: 'ಕಾಂತಾರ-1' ಟ್ರೇಲರ್ ಬಿಡುಗಡೆಯಾಗಿ ದೊಡ್ದ ಮಟ್ಟದಲ್ಲಿ ಸೌಂಡ್ ಮಾಡಿತು. ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆದಿದೆ. ಈ ಸಂದರ್ಭದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ದಂಪತಿ, ರುಕ್ಮಿಣಿ ವಸಂತ, ಹೊಂಬಾಳೆ ಫಿಲ್ಮ್ಸ್ ಕೂಡ ಭಾಗಿಯಾಗಿತ್ತು.
ಸಿನಿಮಾ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಕೊನೆಯದಾಗಿ ಫೋಟೋ ಸೆಶನ್ ನಡೆಯಿತು. ಆ ವೇಳೆ ರಿಷಬ್ ಶೆಟ್ಟಿ ಅವರು ಹೆಂಡ್ತಿ ಪಕ್ಕದಲ್ಲಿ ನಿಂತರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಾಮಾನ್ಯವಾಗಿ ಹೀರೋ, ಹೀರೋಯಿನ್ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋದುಂಟು. ಈ ಫೋಟೋಗಳನ್ನು ಸಿನಿಮಾ ಪ್ರಚಾರಕ್ಕೆ ಬಳಸಲಾಗುವುದು.
26
ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್
ರಿಷಬ್ ಶೆಟ್ಟಿ ಅವರು ರುಕ್ಮಿಣಿ ಜೊತೆಗೂ ಒಂದು ಫೋಟೋ ತೆಗೆಸಿಕೊಂಡರು. ‘ಕಾಂತಾರ’ ಸಿನಿಮಾಕ್ಕೆ ಪ್ರಗತಿ ಶೆಟ್ಟಿ ಅವರೇ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಶುರುವಾಗಿ ಐದು ವರ್ಷಗಳಾಗಿವೆ. ಇದರ ಪ್ರತಿ ಹಂತದಲ್ಲಿಯೂ ಪ್ರಗತಿ ಇದ್ದಾರೆ. ರಿಷಬ್ ಅವರು ಎಲ್ಲಿ ಹೋದರೂ ಕೂಡ ಪ್ರಗತಿ ಅಲ್ಲಿ ಹಾಜರಿ ಹಾಕೋದುಂಟು. ಆ ಮಟ್ಟಿಗೆ ಅವರು ಪತಿಯ ಸಿನಿಮಾ ಕೆಲಸಕ್ಕೆ ಸಾಥ್ ಕೊಡುತ್ತಾರೆ.
36
ರಿಷಬ್ ಶೆಟ್ಟಿ ಏನಂದ್ರು?
ರಿಷಬ್ ಶೆಟ್ಟಿ ಮಾತನಾಡಿ, 'ಕಾಂತಾರ', ಪಂಚವಾರ್ಷಿಕ ಯೋಜನೆಯ ತರಹ ಐದು ವರ್ಷದ ದೊಡ್ಡ ಜರ್ನಿ. ತುಂಬ ಕಷ್ಟಗಳನ್ನು ದಾಟಿ ಈಗ ರಿಲೀಸ್ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ನನ್ನ ಪತ್ನಿ ಪ್ರಗತಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಾಳೋ ಗೊತ್ತಿಲ್ಲ. ಇದು ಎಮೋಷನಲ್ ಜರ್ನಿಯೂ ಹೌದು. ನನ್ನ ಈ ಪ್ರಯತ್ನಕ್ಕೆ ತುಂಬ ದೊಡ್ಡ ತಂಡ ಶಕ್ತಿಯಾಗಿ ನಿಂತಿದೆ. ಅರಣ್ಯಾಧಿಕಾರಿಗಳಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮ್ಮ ತಂಡ ನಿದ್ದೆ ಸರಿಯಾಗಿ ಮಾಡಿಲ್ಲ. ಅಷ್ಟು ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಸಾರಿ ನಾನು ಸಾವಿನ ಬಾಗಿಲಿಗೆ ಹೋಗಿ ಬಂದಿದ್ದೇನೆ. ಆ ದೈವದ ಶಕ್ತಿ ನಮ್ಮ ಜೊತೆ ನಿಂತಿದೆ ಅನಿಸಿತು. ಈ ಚಿತ್ರಕ್ಕಾಗಿ ನಿರ್ಮಾಪಕರು ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ” ಎಂದು ಹೇಳಿದ್ದಾರೆ.
ರುಕ್ಮಿಣಿ ವಸಂತ ಮಾತನಾಡಿ, 'ಇದು ಮನಸಿಗೆ ತುಂಬಾ ಹತ್ತಿರವಾದ ಸಿನಿಮಾ. ಕೆರಿಯರ್ ಪ್ರಾರಂಭದ ಹೆಜ್ಜೆಯಲ್ಲಿ ಇಂತಹ ಮಹತ್ವದ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ಈ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ತಂಡದ ಸಪೋರ್ಟ್ ತುಂಬಾ ಸಿಗತಾ ಇತ್ತು. ಹಾಗಾಗಿ ಅಷ್ಟಾಗಿ ಕಷ್ಟವಾಗಲಿಲ್ಲ' ಎಂದರು.
56
ಮಕ್ಕಳ ಜೊತೆ ಮನೆ ಬಿಟ್ಟಿದ್ರು
'ಮೂರು ವರ್ಷ ನಾವು ಮನೆ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಕುಂದಾಪುರನಲ್ಲಿ ವಾಸವಿದ್ದು ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ. ಹೊಂಬಾಳೆ ಫಿಲಂಸ್ ನಮಗೊಂದು ಫ್ಯಾಮಿಲಿ ಆಗಿ ನಿಂತಿದೆ. ಐದು ವರ್ಷಗಳ ಹಿಂದೆ ಪೋನ್ ನಲ್ಲಿ ಒಂದು ಲೈನ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದವರು ವಿಜಯ್ ಕಿರಗಂದೂರ್ ಅವರು. ಈ ಚಿತ್ರದಲ್ಲಿ ಕಾಸ್ಟೋಮ್ ಡಿಸೈನ್ ಮಾಡಿದ್ದು ಖುಷಿ ಇದೆ. ಈ ಚಿತ್ರದ ಹಿಂದೆ ಒಂದು ಶಕ್ತಿಯಿರುವುದು ಖಂಡಿತ' ಎಂದು ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ ಮಾಹಿತಿ ನೀಡಿದರು.
66
ವಿಶ್ಯಾದ್ಯಂತ ರಿಲೀಸ್
ಅಕ್ಟೋಬರ್ 2ರಂದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ 30 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಇದೆ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ಬಿಂಗ್ ಕೂಡ ಆಗುತ್ತಿದೆ. ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟ್ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು.