'ಮುಂಗಾರು ಮಳೆ' ಸುರಿಸಿ 'ಪರವಶ' ಮಾಡಿದ ಕವಿ ಕಾಯ್ಕಿಣಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ!

First Published | Jan 24, 2020, 3:42 PM IST

'ಈ ಸಂಜೆ ಯಾಕಾಗಿದೆ, ನೀ ಇಲ್ಲದೇ...' ಎಂದು 'ಮುಂಗಾರು ಮಳೆ' ಸುರಿಸಿ ಯುವ ಹೃದಯಗಳನ್ನು ಭಾವ 'ಪರವಶ' ಮಾಡಿದ ಕವಿ ಜಯಂತ ಕಾಯ್ಕಿಣಿ. ಯುವಕರನ್ನು ಸೆಳೆಯುವಂಥ ಆಕರ್ಷಕ ಬರಹಗಳ ಮೂಲಕ  ಬೊಗಸೆಯಲ್ಲಿ ಮಳೆ ತಂದವರು. ಓದುವ ಗೀಳು ಹೆಚ್ಚಿಸಿದವರು. ಈ ಸಹೃದಯಿ ಸಾಹಿತಿ ಬಗ್ಗೆ ಒಂದಿಷ್ಟು...
 

ಜಯಂತ್ ಕಾಯ್ಕಿಣಿ ಮೂಲತಃ ಗೋಕರ್ಣದವರು. ಬೀಚ್ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
ಜಯಂತ್ ಅವರ ತಂದೆ ಶಾಲಾ ಶಿಕ್ಷಕರು ಹಾಗೂ ತಾಯಿ ಸಮಾಜ ಕಾರ್ಯಕರ್ತೆ.
Tap to resize

ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಯೋ ಕೆಮಿಸ್ಟ್ರಿ ಪದವಿ ಪಡೆದಿದ್ದಾರೆ.
ಮುಂಬೈ ಎಂಬ ಮಾಯಾ ನಗರದಲ್ಲಿ ರಸಾಯನಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಜಯಂತ್‌ ಅವರಿಗೆ ಮಾತೃಭಾಷೆ ಕೊಂಕಣಿ ಅಲ್ಲದೇ, ಕನ್ನಡ ಮರಾಠಿ, ಹಿಂದಿ ಮತ್ತು ಇಂಗ್ಲೀಷ್‌ ಅನ್ನು ಚೆನ್ನಾಗಿ ಬಲ್ಲವರು.
ಫ್ರೀ ಲಾನ್ಸ್‌ ಬರಹಗಾರನಾಗಿ 'ಲಿಂಟಾಸ್', 'ಮುದ್ರಾ' ಮತ್ತು 'ತ್ರಿಕಾಯ' ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
'ಭಾವನಾ' ಮಾಸಪತ್ರಿಕೆ ಸಂಪಾದಕರಾಗಿದ್ದರು.
'ಮುಂಗಾರು ಮಳೆ' ಸೇರಿದಂತೆ ಹಲವು ಚಿತ್ರಗಳಿಗೆ ಗೀತ ರಚಿಸಿದ್ದಾರೆ.
4 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Latest Videos

click me!