Shubha Poonja Wedding Updates: ಮಂಗಳೂರಲ್ಲಿ ಮದ್ವೆ, ಬೆಂಗಳೂರಲ್ಲಿ ರಿಸೆಪ್ಷನ್!

Suvarna News   | Asianet News
Published : Dec 15, 2021, 06:03 PM IST

ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವುದು ನಟಿ ಶುಭಾ ಪೂಂಜಾ ಮದುವೆ ವಿಷಯ. ಸಮಾಜ ಸೇವಕ ಸುಮಂತ್‌ ಅವರನ್ನು ಮದುವೆ ಆಗುತ್ತಿರುವ ಶುಭಾ ವೆಡ್ಡಿಂಗ್ ಪ್ಲಾನ್ ಬಗ್ಗೆ ರಿವೀಲ್ ಮಾಡಿದ್ದಾರೆ.   

PREV
17
Shubha Poonja Wedding Updates: ಮಂಗಳೂರಲ್ಲಿ ಮದ್ವೆ, ಬೆಂಗಳೂರಲ್ಲಿ ರಿಸೆಪ್ಷನ್!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಬಿಗ್ ಬಾಸ್ (Bigg boss) ಸ್ಪರ್ಧಿ ಶುಭಾ ಪೂಂಜಾ (Shubha Poonja) ಇದೇ ತಿಂಗಳ ಕೊನೆಯಲ್ಲಿ ಹೇಳಿದಂತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. 

27

 ಹಲವು ವರ್ಷಗಳಿಂದ ಸಮಾಜ ಸೇವಕ (Social Worker) ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಸೂಚನೆ ಕೊಟ್ಟಿದ್ದಾರೆ.

37

ಸುಮಂತ್ ಅವರು ಉಡುಪಿಯಲ್ಲಿರುವುದು (Udupi) ಹಾಗೂ ನನ್ನ ಕುಟುಂಬಸ್ಥರು ಮಂಗಳೂರಿನಲ್ಲಿರುವ ಕಾರಣ ನಾವು ಅಲ್ಲಿಯೇ ಮದುವೆ ಆಗುತ್ತಿದ್ದೀವಿ,' ಎಂದು ಶುಭಾ ಹೇಳಿದ್ದಾರೆ. 

47

ಮಂಗಳೂರಿನಲ್ಲಿ (Mangalore) ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆಯಲಿದ್ದು, ಸ್ನೇಹಿತರು ಮತ್ತು ಸಿನಿ ರಂಗದವರಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಳ್ಳುತ್ತೇವೆ,' ಎಂದಿದ್ದಾರೆ. 

57

ಸುಮಂತ್ ಇಂಟ್ರೋವರ್ಟ್‌ (Introvert) ವ್ಯಕ್ತಿತ್ವದವರು ಅವರು ಸಮಾಜ ಸೇವೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣ ನಮಗೆ ಕನೆಕ್ಟ್‌ ಆಗಿತ್ತು. 

67

'ನನಗೆ ಬೇರೆ ವೃತ್ತಿಯಲ್ಲಿರುವ ಪಾರ್ಟನರ್‌ ಬೇಕಿತ್ತು. ಸುಮಂತ್ ನನ್ನ ಕೆಲಸವನ್ನು ಅರ್ಥ ಮಾಡಿಕೊಂಡಿದ್ದಾರೆ. ನಾನು ಮಾಡುವ ಕೆಲಸಗಳ ಬಗ್ಗೆ ಅವರಿಗೆ ಯಾವುದೇ ರೀತಿ ತೊಂದರೆ ಇಲ್ಲ,' ಎಂದಿದ್ದಾರೆ ಶುಭಾ. 

77

ಶುಭಾ ಪೂಂಜಾ ನಟನೆಯ 3 ದೇವಿ (3 Devi) ಮತ್ತು ರೈಮ್ಸ್‌ (Rhymes) ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು, 2022ರಲ್ಲಿ ತೆರೆ ಕಾಣಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories