Puneeth Rajkumar: ಮದುವೆ ಆಮಂತ್ರಣದಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ ಗೌರವ ಸಲ್ಲಿಸಿದ ಜೋಡಿ

Suvarna News   | Asianet News
Published : Dec 14, 2021, 07:06 PM IST

ಬಾಗಲಕೋಟೆಯ ಶ್ರೀಧರ ಮತ್ತು ಸವಿತಾ ಎಂಬ ಜೋಡಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪುನೀತ್ ಭಾವಚಿತ್ರ ಮತ್ತು 'ಜೊತೆಗಿರದ ಜೀವ ಎಂದೆಂದಿಗೂ ಜೀವಂತ' ಎಂಬ ಸಾಲು ಬರೆದು ಗೌರವ ಸಲ್ಲಿಸಿದೆ.

PREV
17
Puneeth Rajkumar: ಮದುವೆ ಆಮಂತ್ರಣದಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ ಗೌರವ ಸಲ್ಲಿಸಿದ ಜೋಡಿ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಒಂದುವರೆ ತಿಂಗಳು ಕಳೆದರೂ ಅವರ ನೆನಪು ಅಭಿಮಾನಿಗಳ ಮನದಲ್ಲಿ ಸದಾ ಹಸಿರಾಗಿದೆ. ಅಪ್ಪು ಹೆಸರಲ್ಲಿ ರಕ್ತದಾನ, ನೇತ್ರದಾನ ಎಲ್ಲವನ್ನೂ ಮಾಡಿ ಅಭಿಮಾನಿಗಳು ಸಾರ್ಥಕ ಅಭಿಮಾನ‌ ಮೆರೆದಿದ್ದಾರೆ. 

27

ಇದೀಗ ಯುವ ಜೋಡಿಯೊಂದು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸಿ 'ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ಅಪ್ಪು ಅಮರ' ಎಂಬ ಸಾಲುಗಳನ್ನು ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ. 

37

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದ ಯುವಕ ಶ್ರೀಧರ ಇಸರನಾಳ ಹಾಗೂ ಬಾಗಲಕೋಟೆ ತಾಲ್ಲೂಕಿನ ಕಿರಸೂರು ಗ್ರಾಮದ ಸವಿತಾ ಎಂಬ ಜೋಡಿ ಮದುವೆಯಲ್ಲೂ ಅಪ್ಪುವನ್ನು ನೆನೆದು ಅಭಿಮಾನ ಮೆರೆದಿದ್ದಾರೆ‌. 

47

ಶ್ರೀಧರ ಹಾಗೂ ಸವಿತಾ ಅವರ ಮದುವೆ 27-12-21 ರಂದು ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದು, ವರ ಶ್ರೀಧರ ಮತ್ತು ವಧು ಸವಿತಾ ಇಬ್ಬರೂ ಸಹ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು.

57

ಮದುವೆಗೆ ಬಂಧು ಬಾಂದವರು, ಆಪ್ತರು, ಸ್ನೇಹಿತರಿಗೆ ಆಹ್ವಾನ ನೀಡಿರುವ ಜೋಡಿ ಲಗ್ನಪತ್ರಿಕೆಯಲ್ಲಿ ಅಪ್ಪು ಭಾವಚಿತ್ರ ಪ್ರಕಟಿಸೋದರ ಜೊತೆಗೆ 'ಜೊತೆಗಿರುವ ಜೀವ ಎಂದೆಂದಿಗೂ ಜೀವಂತ ಅಪ್ಪು ಅಮರ' ಎಂದು ಪ್ರಕಟಿಸಿದ್ದಾರೆ.

67

ನಾನು ಮದುವೆಯಾಗುತ್ತಿರುವ ಯುವತಿ ಸವಿತಾ ಹಾಗೂ ನಮ್ಮ ಇಬ್ಬರ ಮನೆಯವರು ಪುನೀತ್ ಅಭಿಮಾನಿಗಳು. ಅಪ್ಪು ಅವರ ನಿಧನ ನಮಗೆ ಬಾರಿ ನೋವು ತಂದಿದೆ, ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.

77

ಪುನೀತ್ ಅವರು ಮಾಡಿದ ಸಾಮಾಜಿಕ ಕಾರ್ಯ, ಬಡ‌ವರಿಗೆ, ಮಕ್ಕಳ ಶಿಕ್ಷಣಕ್ಕೆ ಅವರು ಮಾಡಿದ ಸಹಾಯ, ಅವರ ಚಿತ್ರಗಳು ಎಲ್ಲವೂ ನಮಗೆ ಸ್ಪೂರ್ತಿ. ಮದುವೆಯಾಗುವ ನಾವು ಆಮಂತ್ರಣದಲ್ಲಿ ಪುನೀತ್ ಅವರ ಭಾವಚಿತ್ರ ಪ್ರಕಟಿಸುವ ಮೂಲಕ ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸುತ್ತಿದ್ದೇವೆ ಎಂದಿದ್ದಾರೆ ಮದುವೆ ಗಂಡು ಶ್ರೀಧರ.

Read more Photos on
click me!

Recommended Stories