ಏ.14ಕ್ಕೆ ಸೋನಿ ಲೈವ್‌ ಓಟಿಟಿಯಲ್ಲಿ ಜೇಮ್ಸ್‌!

First Published | Mar 31, 2022, 9:21 AM IST

ಪುನೀತ್‌ ರಾಜ್‌ಕುಮಾರ್‌ ನಟನೆಯ ಬ್ಲಾಕ್‌ಬಾಸ್ಟರ್‌ ಚಿತ್ರ ‘ಜೇಮ್ಸ್‌’ ಏಪ್ರಿಲ್‌ 14ಕ್ಕೆ ಸೋನಿ ಲೈವ್‌ ಓಟಿಟಿಯಲ್ಲಿ ಪ್ರಸಾರವಾಗಲಿದೆ. 
 

ಪುನೀತ್‌ ರಾಜ್‌ಕುಮಾರ್‌ ನಟನೆಯ ಬ್ಲಾಕ್‌ಬಾಸ್ಟರ್‌ ಚಿತ್ರ ‘ಜೇಮ್ಸ್‌’ ಏಪ್ರಿಲ್‌ 14ಕ್ಕೆ ಸೋನಿ ಲೈವ್‌ ಓಟಿಟಿಯಲ್ಲಿ ಪ್ರಸಾರವಾಗಲಿದೆ. 
 

ವಿಶ್ವಾದ್ಯಂತ ದಾಖಲೆಯ ಪ್ರದರ್ಶನ ಕಂಡು, ಒಂದೇ ವಾರದಲ್ಲಿ ಸುಮಾರು 125 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ ಈ ಚಿತ್ರ ಪುನೀತ್‌ ಜನ್ಮದಿನ ಮಾ.17ರಂದು ಬಿಡುಗಡೆಯಾಗಿತ್ತು. 
 

Tap to resize

ಇದೀಗ ನಿರೀಕ್ಷೆಗೂ ಮೊದಲೇ ಓಟಿಟಿಗೆ ಎಂಟ್ರಿ ಕೊಡುವ ಮೂಲಕ ಮತ್ತೊಂದು ಸರ್ಪ್ರೈಸ್‌ ನೀಡಿದೆ. ಪುನೀತ್‌ ರಾಜ್‌ಕುಮಾರ್‌, ಪ್ರಿಯಾ ಆನಂದ್‌ ನಟನೆಯ ಚಿತ್ರವನ್ನು ಚೇತನ್‌ ಕುಮಾರ್‌ ನಿರ್ದೇಶಿಸಿದ್ದರು. ಕಿಶೋರ್‌ ಪತ್ತಿಕೊಂಡ ನಿರ್ಮಾಪಕರು.

ಜೇಮ್ಸ್‌ ಚಿತ್ರದಲ್ಲಿ ಕೆಲವೇ ಸೆಕೆಂಡುಗಳ ಒಂದು ಪುಟ್ಟ ದೃಶ್ಯವಿದೆ. ಈ ದೃಶ್ಯದಿಂದ ಕತೆ ಗೊತ್ತಾಗುವುದಿಲ್ಲವಾದ್ದರಿಂದ ನಿಶ್ಚಿಂತೆಯಿಂದ ಓದಬಹುದು. ಆ ದೃಶ್ಯದಲ್ಲಿ ಅಪ್ಪು ಕೋಮಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿರುತ್ತಾರೆ.

ಗ್ಯಾರೇಜಿನಲ್ಲಿ ನಿಲ್ಲಿಸಿರುವ ಚಂದದ ಕಾರಿನ ಮೇಲೆ ಹಾಕಿರುವ ಟರ್ಪಾಲು ಎತ್ತಿ ಕೊಡವಿ ಕಾರು ಹತ್ತಿ ಕುಳಿತು ರಸ್ತೆಯಲ್ಲಿ ಸಿಗುವ ಎಲ್ಲಾ ಕಾರು, ಬೈಕುಗಳನ್ನು ಹಿಂದಕ್ಕೆ ಹಾಕಿ ಗೆದ್ದು ಬೀಗಿ ತುಟಿ ಮೇಲೆ ಸಣ್ಣ ನಗು ಧರಿಸಿಕೊಂಡು ಎಂಟ್ರಿ ಕೊಡುವ ಪುನೀತ್‌ರನ್ನು ನೋಡುವಾಗ ಮನಸ್ಸು ತುಂಬಿ ಬರುತ್ತದೆ

ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್‌ ಎಂಬ ಹೆಸರಿಟ್ಟಾಗಲೇ ಜೇಮ್ಸ್‌ ಬಾಂಡ್ ಸ್ಟೈಲಿನ ಸಿನಿಮಾ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಪ್ರತೀ ಫ್ರೇಮಲ್ಲೂ ಪುನೀತ್ ಅವರು ಸ್ಟೈಲಿಷ್ ಜೇಮ್ಸ್‌ ಬಾಂಡ್. ಹಾರಿ ಎಗರಿ ಒಬ್ಬೊಬ್ಬನ ಗೋಣು ಮುರಿಯುವ ಫೈಟರ್, ಬಂದೂಕನ್ನು ಆಟಿಕೆಯಂತೆ ಬಳಸಿ ಹತ್ತಾರು ಮಂದಿಯನ್ನು ಸುಟ್ಟು ಬಿಸಾಕುವ ಶೂಟರ್, ಗೆಳೆಯರನ್ನು ಪ್ರೀತಿಯಿಂದ ನೋಡುವ ಒಬ್ಬ ಬ್ರದರ್ ಎಲ್ಲವೂ ಆಗಿ ಪುನೀತ್ ಕಣ್ಣು ಮನಸ್ಸಲ್ಲಿ ಉಳಿದುಹೋಗುತ್ತಾರೆ. 

ಮೇಕಿಂಗ್‌ನಲ್ಲಿರುವ ಅದ್ದೂರಿತನ, ಚಿತ್ರಕತೆಯಲ್ಲಿರಬೇಕಾದ ಜಾಣತನ, ದೇಶಕ್ಕೆ ಒಳ್ಳೆಯದು ಮಾಡಬೇಕೆಂಬ ಒಳ್ಳೆಯತನ ಎಲ್ಲವುದರ ಆಚೆಗೆ ಈ ಸಿನಿಮಾ ನೋಡಿ ಆಚೆ ಬಂದ ಮೇಲೂ ಮನಸ್ಸಲ್ಲಿ ಉಳಿಯುವುದು ಕೊನೆಯಲ್ಲಿ ಬರುವ ಮೇಕಿಂಗ್ ದೃಶ್ಯಗಳಲ್ಲಿ ಕಾಣಸಿಗುವ ಪುನೀತ್ ಅವರ ನಗುಮುಖ. ಮಾಸದೇ ಉಳಿದ ಆ ನಗುಮುಖವೇ ಈ ಸಿನಿಮಾಗೆ ಶ್ರೀರಕ್ಷೆ.

ಜೇಮ್ಸ್‌ ವನ್ ಮ್ಯಾನ್ ಶೋ. ದೊಡ್ಡ ತಾರಾಗಣ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಲೊಕೇಶನ್‌ಗಳು, ಮೆಚ್ಚುಗೆ ಹುಟ್ಟಿಸುವ ಸೆಟ್‌ಗಳು ಎಲ್ಲವೂ ಇಲ್ಲಿ ಅದ್ದೂರಿ. ಸೆಂಟಿಮೆಂಟಿಗೆ ಗೆಳೆಯರು, ಹೊಡೆದು ಹಾಕಲು ಕೈಗೊಂದು ಕಾಲಿಗೊಂದು ವಿಲನ್‌ಗಳು, ಜಾಣತನ ತೋರಿಸಲು ಬೇಕಾಗುವ ಸಿಚುವೇಷನ್‌ಗಳು, ಹೋರಾಡಲೊಂದು ಡ್ರಗ್ ಮಾಫಿಯಾ, ಮೆಚ್ಚಿಕೊಳ್ಳುವುದಕ್ಕೆ ದೇಶಪ್ರೇಮವನ್ನು ಹೊಂದಿಸಿಕೊಂಡಿರುವ ಈ ಸಿನಿಮಾ ಒಂಥರಾ ಯುದ್ಧದ ಥರ ಇದೆ.

Latest Videos

click me!