ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ರಶ್ಮಿ ಪ್ರಭಾಕರ್ ಇದೀಗ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ.
ಏಪ್ರಿಲ್ 25ರಂದು ನಟಿ ರಶ್ಮಿಕಾ (Rashmi Prabhakar) ಗೆಳೆಯ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 9.21ರಿಂದ 10.19ರ ವರೆಗೆ ಇರುವ ಶುಭ ಮುಹೂರ್ತದಲ್ಲಿ ಮದುವೆಯಾಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಶ್ಮಿ ಅಭಿಮಾನಿಗಳು ಮದುವೆ ಕೌಂಟ್‌ಡೌನ್ ಶುರು ಮಾಡಿಕೊಂಡಿದ್ದಾರೆ. ರಶ್ಮಿ ಕೂಡ ಫೋಟೋ ಹಂಚಿಕೊಳ್ಳುತ್ತಿದ್ದಾರೆ.
ಇಂದು ಸುಮಂಗಲಿ ಪ್ರಾರ್ಥನೆ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಇದಾದ ನಂತರ ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರ ಶುರುವಾಗಲಿದೆ.
ಮದುವೆ ಒಂದೇ ದಿನ ನಡೆಯಲಿದ್ದು ರಶ್ಮಿ ಅವರು ಆರತಕ್ಷತೆ ಇರುವುದಿಲ್ಲ ಎಂದು ಈ ಹಿಂದೆಯೇ ತಿಳಿಸಿದ್ದರು. ಸಾಂಪ್ರದಾಯಿಕವಾಗಿ ಮತ್ತು ಶಾಸ್ಟ್ರೋಕ್ತವಾಗಿ ಮದುವೆಯಾಗಲಿದ್ದಾರೆ.
ಶುಭ ವಿವಾಹ, ಜೀವನ ಚೈತ್ರ, ಮನೆಸೆಲ್ಲಾ ನೀನೇ, ಮಹಾಭಾರತ, ದರ್ಪಣ, ಕಾವ್ಯಾಂಜಲಿ, ಪೌರ್ಣಮಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ರಶ್ಮಿ ಅಭಿನಯಿಸಿದ್ದಾರೆ.