ಕೇರಳ ಮೂಲದ ರಾಚೆಲ್ ಡೇವಿಡ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.
ಕನ್ನಡದ ಹುಡುಗಿ, ಆದರೆ ಮಲಯಾಳಂನಿಂದ ಚಿತ್ರರಂಗಕ್ಕೆ ಅಡಿಯಿಟ್ಟಬೆಡಗಿ ಈಕೆ.
ಈ ಹಿಂದೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಜೊತೆಗೆ ತೆರೆ ಹಂಚಿಕೊಂಡಿದ್ದರು.
‘ರಾಚೆಲ್ ‘ಲವ್ ಮಾಕ್‌ಟೇಲ್ 2’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಪಾತ್ರಕ್ಕೆ ಈಕೆಯ ಲುಕ್, ನಟನೆ ಸರಿ ಹೊಂದುವಂತಿದ್ದ ಕಾರಣ ಆಯ್ಕೆ ಮಾಡಿದೆವು.
ಸಿನಿಮಾದಲ್ಲಿ ಈಕೆಯದು ತುಂಟ, ತರಲೆ ಜೊತೆಗೆ ಹೋಮ್ಲಿ ಹುಡುಗಿಯ ಪಾತ್ರ. ಈಗಾಗಲೇ ಚಿತ್ರದ ಶೇ.55 ಭಾಗದಷ್ಟುಚಿತ್ರೀಕರಣ ಸಂಪೂರ್ಣವಾಗಿದೆ.
ರಾಚೆಲ್ ಪಾತ್ರದ ಚಿತ್ರೀಕರಣವಷ್ಟೇ ಬಾಕಿ ಇದೆ. ಆ ಭಾಗದ ಶೂಟಿಂಗ್ ಇದೀಗ ಪ್ಲಾನ್ ಮಾಡುತ್ತಿದ್ದೇವೆ’ ಎಂದು ಡಾರ್ಲಿಂಗ್ ಕೃಷ್ಣ ತಿಳಿಸಿದ್ದಾರೆ.
ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ಹಾಗೂ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಮುಂಬಯಿಯ ಅನುಪಮ್ ಖೇರ್ ಇನ್ಸ್ ಟಿಟ್ಯೂನಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದಾರೆ.