Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

Suvarna News   | Asianet News
Published : Mar 17, 2022, 05:40 PM ISTUpdated : Mar 17, 2022, 05:42 PM IST

ಇಂದು ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್  ಡಾಕ್ಟರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದಡೆ ಪುನೀತ್ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಸಹ ಬಿಡುಗಡೆಯಾಗಿದೆ. ಪ್ರತಿಯೊಬ್ಬರೂ ಪುನೀತ್ ರಾಜಕುಮಾರ್ ಬಗ್ಗೆ ಒಂದೊಂದು ರೀತಿ ಅಭಿಮಾನ ಹಾಗೂ ಪ್ರೀತಿ ಮರೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ವಿಭಿನ್ನ ರೀತಿಯಲ್ಲಿ ಅಭಿಮಾನ ಮೆರೆದಿದ್ದಾನೆ. 

PREV
15
Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಒಂದೇಡೆ ಬೆನ್ನ ಮೇಲೆ ಟ್ಯಾಟೂ (Tattoo) ಹಾಕುತ್ತಿರುವ ದೃಶ್ಯ, ಮತ್ತೊಂದಡೆ  ಪುನೀತ್ ರಾಜ್‍ಕುಮಾರ್ (Puneeth Rajkumar) ಟ್ಯಾಟೂ ಹಾಕಿಸಿಕೊಂಡಿರುವ ದೃಶ್ಯ, ಇವೇಲ್ಲ ದೃಶ್ಯಗಳು ಕಂಡುಬಂದದ್ದು ಕೊಪ್ಪಳದಲ್ಲಿ. ಹೌದು ಜಿಲ್ಲೆಯ ಗಂಗಾವತಿಯ ಗಾಂಧಿ ನಗರ ನಿವಾಸಿ ಅನಿಲ್ ಕುಮಾರ್ ಇದೀಗ ಪುನೀತ್ ರಾಜ್‍ಕುಮಾರ್ ಟ್ಯಾಟೂ ಹಾಕಿಸಿಕೊಂಡಿದ್ದಾನೆ. 

25

ಅನಿಲ್‌ಕುಮಾರ್ ಅಪ್ಪಟ ಪುನೀತ್ ರಾಜ್‍ಕುಮಾರ್ ಅಭಿಮಾನಿಯಾಗಿದ್ದಾನೆ (Fan). ಇಂದು ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ ಜೊತೆಗೆ 'ಜೇಮ್ಸ್' (James) ಚಲನಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಅನಿಲ್‌ಕುಮಾರ್ ಪುನೀತ್ ರಾಜ್‍ಕುಮಾರ್ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.

35

ಅನಿಲ್‌ಕುಮಾರ್‌ಗೆ ಇಂದೇ ಪುನೀತ್ ರಾಜ್‍ಕುಮಾರ್‌ನ ಟ್ಯಾಟೂ ಹಾಕಿಸಿಕೊಳ್ಳಲೇಬೇಕೆಂದು ನಿರ್ಣಯಿಸಿದ್ದಾ‌ನೆ. ಆದರೆ ಎಲ್ಲಿ ಹಾಕಿಸಿಕೊಳ್ಳಬೇಕೆಂದು ಯೋಚಿಸಿದಾಗ ಸ್ನೇಹಿತರು ಆತನಿಗೆ ಗಂಗಾವತಿಯ ಹನುಮಾನ್ ಟ್ಯಾಟೂ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೇಳಿದ್ದಾರೆ. 

45

ಅದರಂತೆ ಅನಿಲ್‌ಕುಮಾರ್ ತನ್ನ ಬೆನ್ನ ಮೇಲೆ ಪುನೀತ್ ರಾಜಕುಮಾರ್ ರ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇನ್ನು ಅನಿಲ್‌ಕುಮಾರ್‌ಗೆ 4 ಗಂಟೆಗಳ ಕಾಲ ಟ್ಯಾಟೂ ಹಾಕಲಾಗಿದೆ.‌ ಇದರ ಪರಿಣಾಮವಾಗಿ ಅನಿಲ್‌ಕುಮಾರ್ ಬೆನ್ನ ಮೇಲೆ ಪುನೀತ್ ರಾಜ್‍ಕುಮಾರ್ ಅವರ ಅದ್ಭುತವಾದ ಟ್ಯಾಟೂ ಮೂಡಿಬಂದಿದೆ. 

55

ಒಟ್ಟಿನಲ್ಲಿ ಬೆನ್ನ ಮೇಲೆ ಅಪ್ಪು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅನಿಲ್‌ಕುಮಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಆಚರಿಸಿರುವುದು ನಿಜಕ್ಕೂ ವಿಶೇಷವೇ ಸರಿ.

Read more Photos on
click me!

Recommended Stories