ಪುನೀತ್ ರಾಜ್‌ಕುಮಾರ್ ಪತ್ನಿ ಆಶ್ವಿನಿ ಹುಟ್ಟುಹಬ್ಬ; ಅಭಿಮಾನಿಗಳಿಂದ ಮನಕಲಕುವ ಶುಭಾಶಯ!

First Published | Mar 15, 2022, 12:36 PM IST

ಪಿಆರ್‌ಕೆ ಸಂಸ್ಥೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. 

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ರೇವಂತ್‌ ಮಾರ್ಚ್‌ 14ರಂದು 40ರ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಅಪ್ಪು ಇಲ್ಲದೆ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ಆಚರಣೆ ಇಲ್ಲ ಎಂದು ಆಪ್ತ ಕುಟುಂಬಸ್ಥರು ಹೇಳಿದ್ದಾರೆ. 

Tap to resize

 ಹುಟ್ಟುಹಬ್ಬದ ಶುಭಾಶಯಗಳು ಆಶ್ವಿನಿ. ದೇವರು ನಿಮಗೆ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ನೀಡಲಿ ಎಂದು ರಾಘವೇಂದ್ರ ರಾಜ್‌ಕುಮಾರ್ ಟ್ಟೀಟ್ ಮಾಡಿದ್ದಾರೆ. 

'ಕೆಆರ್‌ಜೆ ಕನೆಕ್ಟ್‌ ಮತ್ತು ಕೆಆರ್‌ಜೆ ಸ್ಟುಡಿಯೋ ಅಶ್ವಿನಿ ಮೇಡಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತದೆ ಎಂದು ಟ್ಟೀಟ್ ಮಾಡಿದ್ದರು. 

ಪಿಆರ್‌ಕೆ ಸಂಸ್ಥೆ ಆರಂಭವಾದ ಪಿಆರ್‌ಕೆ ಪ್ರೊಡಕ್ಷನ್ಸ್‌ ಮತ್ತು ಪಿಆರ್‌ಕೆ ಆಡಿಯೀ ಸಂಸ್ಥೆಯನ್ನು ಆಶ್ವಿನಿ ಪುನೀತ್ ಅವರೇ ಮುನ್ನಡೆಸುತ್ತಿದ್ದಾರೆ. 

ಮಾರ್ಚ್‌ 13ರಂದು ಜೇಮ್ಸ್‌ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶ್ವಿನಿ ಮತ್ತು ಕುಟುಂಬಸ್ಥರು ಭಾವುಕರಾಗಿದ್ದಾರೆ. ಹೀಗಾಗಿ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋಗಿದ್ದಾರೆ. 

ಪುನೀತ್ ಕೊನೆಯ ಸಿನಿಮಾ ಜೇಮ್ಸ್‌  ಮತ್ತು ಡಾಕ್ಯೂಮೆಂಟರಿ ಗಂದಧ ಗುಡಿ ಬಿಡುಗಡೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ತೆಗೆದುಕೊಂಡಿದ್ದಾರೆ.

Latest Videos

click me!