ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಶೂಟಿಂಗ್ ಮುಕ್ತಾಯ: ಡಿಸೆಂಬರ್ 31ರಂದು ತೆರೆಗೆ

First Published | Oct 23, 2021, 10:57 AM IST

ಚಾರ್ಲಿ ಚಿತ್ರೀಕರಣದ ಅದ್ಭುತವಾದ ಪಯಣವನ್ನು ನಿನ್ನೆ ಕುಂಬಳಕಾಯಿ ಒಡೆಯುವುದರ ಮೂಲಕ ಮುಗಿಸಿದ್ದೇವೆ. ಡಿಸೆಂಬರ್ 31ರಂದು ಚಿತ್ರಮಂದಿರದಲ್ಲಿ ಭೇಟಿಯಾಗೋಣ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ '777 ಚಾರ್ಲಿ' (777 Charlie) ಸಿನಿಮಾ ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದ ಮೇಲೆ ಸಿನಿರಸಿಕರು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಚಿತ್ರದ ಬಗ್ಗೆ ನಟ ರಕ್ಷಿತ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ, 164 ಅಪೂರ್ವ ದಿನಗಳ ಶೂಟಿಂಗ್​ಗೆ ಪೂರ್ಣ ವಿರಾಮ. ಚಾರ್ಲಿ ಚಿತ್ರೀಕರಣದ ಅದ್ಭುತವಾದ ಪಯಣವನ್ನು ನಿನ್ನೆ ಕುಂಬಳಕಾಯಿ ಒಡೆಯುವುದರ ಮೂಲಕ ಮುಗಿಸಿದ್ದೇವೆ. ಡಿಸೆಂಬರ್ 31ರಂದು ಚಿತ್ರಮಂದಿರದಲ್ಲಿ ಭೇಟಿಯಾಗೋಣ' ಎಂದು ಕುಂಬಳಕಾಯಿ ಕಾರ್ಯಕ್ರಮದ ಒಂದಷ್ಟು ಸಿಹಿ ಕ್ಷಣಗಳ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ.

Tap to resize

ಇನ್ನು ಈ ಚಿತ್ರದ ಟಾರ್ಚರ್‌ ಸಾಂಗ್‌ (Torture Song) ಇತ್ತಿಚೆಗಷ್ಟೇ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. 

ಕನ್ನಡದಲ್ಲಿ ವಿಜಯ್‌ ಪ್ರಕಾಶ್‌ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್‌, ತೆಲುಗಿನಲ್ಲಿ ರಾಮ್‌ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್‌ ಖಾನ್‌ಕ್ರಮವಾಗಿ ಆಯಾಯ ಭಾಷೆಗಳಲ್ಲಿ ಹಾಡಿದ್ದಾರೆ.

ಯುವ ನಿರ್ದೇಶಕ ಕಿರಣ್‌ ರಾಜ್‌ (Kiran Raj) ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ '777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್‌ ನಾಯಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದೆ. 

ಸಂಗೀತಾ ಶೃಂಗೇರಿ (Sangeetha Sringeru) ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜ್‌ ಬಿ. ಶೆಟ್ಟಿ, ಡ್ಯಾನಿಶ್‌ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವು ದಾರಿ ತಪ್ಪಿದ ಶ್ವಾನ ಚಾರ್ಲಿ ಮತ್ತು ಅವನ ಸಹಚರ ಧರ್ಮ (ರಕ್ಷಿತ್ ಶೆಟ್ಟಿ ಪಾತ್ರ)ದ ಸುತ್ತದ ಕಥೆಯನ್ನು ಅನುಸರಿಸುತ್ತದೆ. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆಗೆ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು.

ಶ್ವಾನ ಪಾತ್ರದ ಚಿತ್ರೀಕರಣಕ್ಕಾಗಿಯೇ ಚಿತ್ರತಂಡ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಇನ್ನು '777 ಚಾರ್ಲಿ' ಚಿತ್ರೀಕರಣ ಶುರು ಆಗುವವರೆಗೂ ನಾಯಿಗಳಿಂದ ಕೊಂಚ ದೂರವಿದ್ದೆ. ಅದಕ್ಕೆ ಕಾರಣವಿದೆ. ಚಿಕ್ಕಂದಿನಲ್ಲಿ ನನ್ನ ಬಳಿ ಎರಡು ನಾಯಿಗಳಿದ್ದವು.

ಆ ನಾಯಿಗಳನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದೆ. ದುರದೃಷ್ಟವಶಾತ್‌ ಆ ನಾಯಿಗಳು ತೀರಿಕೊಂಡವು. ಆ ನೋವು ನನ್ನಲ್ಲಿ ಹಾಗೆ ಉಳಿದುಹೋಯಿತು. ಹಾಗಾಗಿ ಮತ್ತೆ ಅಂಥಾ ನೋವಿನ ಅನುಭವ ಆಗುವುದು ಬೇಡ ಅಂತ ನಾಯಿಗಳಿಂದ ದೂರ ಉಳಿದಿದ್ದೆ. 

ಯಾವಾಗ ಚಾರ್ಲಿ ಶುರುವಾಯಿತೋ ಅವತ್ತಿಂದ ಚಾರ್ಲಿ ಎಂಬ ನಾಯಿ ಜತೆ ಒಡನಾಟ ಶುರುವಾಗಿ ಮತ್ತೆ ನಾಯಿ ಜತೆ ಬದುಕುವುದನ್ನು ರೂಢಿ ಮಾಡಿಕೊಂಡಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ತಿಳಿಸಿದ್ದರು.

Latest Videos

click me!