Ek Love Ya ತಂಡದಿಂದ ಪ್ರೇಕ್ಷಕರಿಗೆ ಧನ್ಯವಾದ!

First Published | Mar 11, 2022, 10:18 AM IST

ಮೊದಲ ಸಿನಿಮಾಗೆ ಮನಸ್ಸು ಮುಟ್ಟುವಂತ ಪ್ರೀತಿ ಕೊಟ್ಟಿರುವ ಅಭಿಮಾನಿಗಳಿಗೆ 'ನಿಮ್ಮ ಪ್ರೀತಿಗೆ ಚಿರಋುಣಿ' ಎಂದು ಏಕ್ ಲವ್ ಯಾ ನಟ ರಾಣಾ ಹೇಳಿದ್ದಾರೆ.
 

ಮೊದಲ ಸಿನಿಮಾಗೆ ಮನಸ್ಸು ಮುಟ್ಟುವಂತ ಪ್ರೀತಿ ಕೊಟ್ಟಿರುವ ಅಭಿಮಾನಿಗಳಿಗೆ 'ನಿಮ್ಮ ಪ್ರೀತಿಗೆ ಚಿರಋುಣಿ' ಎಂದು ಏಕ್ ಲವ್ ಯಾ ನಟ ರಾಣಾ ಹೇಳಿದ್ದಾರೆ.

ಪ್ರೇಮ್‌ ನಿರ್ದೇಶನದ, ರಕ್ಷಿತಾ ಪ್ರೇಮ್‌ ನಿರ್ಮಾಣದ ‘ಏಕ್‌ಲವ್‌ಯಾ’ ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. 

Tap to resize

ರಾಜ್ಯದ ವಿವಿಧೆಡೆ ಹೋದಾಗ ಸಿಕ್ಕ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ತಂಡದ ಉತ್ಸಾಹ ಹೆಚ್ಚಿಸಿದೆ. ಸಿನಿಮಾ ನೋಡಿದವರಿಗೆ, ಮೆಚ್ಚಿದವರಿಗೆ ಎಲ್ಲರಿಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಧನ್ಯವಾದ ಸಲ್ಲಿಸಿದ್ದಾರೆ.

ಮೊದಲ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹದಿಂದ ಖುಷಿಗೊಂಡಿರುವ ನಾಯಕ ನಟ ರಾಣಾ, ‘ಪ್ರೇಕ್ಷಕರು ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಋುಣಿ. ಹೀಗೆಯೇ ಹರಸಿ ಬೆಳೆಸಿ’ ಎಂದರು.

ಸುಚೇಂದ್ರ ಪ್ರಸಾದ್‌ ಚಿತ್ರಕ್ಕೆ ಸಿಕ್ಕ ಗೆಲುವಿಗೆ ಹರ್ಷ ವ್ಯಕ್ತ ಪಡಿಸಿದರು. ನಾಯಕ ನಟಿ ರೀಶ್ಮಾ ನಾಣಯ್ಯ, ಛಾಯಾಗ್ರಾಹಕ ಮಹೇನ್‌ ಸಿಂಹ ಧನ್ಯವಾದ ಸಲ್ಲಿಸಿದರು.

ಎಲ್ಲರಿಗಿಂತ ಪ್ರೇಮ್‌ ಧನ್ಯವಾದ ವಿಶೇಷವಾಗಿತ್ತು. ‘ನಾನು ಸಿನಿಮಾ ಬಿಡುಗಡೆ ಆದ ಮೇಲೆ ಥಿಯೇಟರ್‌ಗೆಲ್ಲಾ ಹೋದವನಲ್ಲ. ಈ ಸಲ ಹೋಗಿದ್ದೇನೆ. ಸಿನಿಮಾ ರಿಲೀಸ್‌ ಮೊದಲು ಭಯ ಇತ್ತು. ರಾಣಾ ಅವರು ರಕ್ಷಿತಾ ತಮ್ಮ. 

ಅವರ ಕೆರಿಯರ್‌ ಶುರುವಾಗುತ್ತಿದೆ. ಈ ಸಿನಿಮಾ ಗೆಲ್ಲಲೇಬೇಕು. ಹೆಚ್ಚುಕಡಿಮೆಯಾದರೆ ಮನೆಯಲ್ಲಿ ಮುಖ ತೋರಿಸೋಕೆ ಆಗಲ್ಲ ಎಂದುಕೊಂಡಿದ್ದೆ. ಪ್ರೇಕ್ಷಕರು ಕೈ ಬಿಡಲಿಲ್ಲ. ಗೆಲ್ಲಿಸಿದರು. ಎಷ್ಟುಧನ್ಯವಾದ ಹೇಳಿದರೂ ಸಾಲದು’ ಎಂದರು ಪ್ರೇಮ್‌.ರಕ್ಷಿತಾ ಅವರು ತಮ್ಮ ಬ್ಯಾನರ್‌ನಲ್ಲಿ ಇನ್ನೊಂದು ಸಿನಿಮಾ ಮಾಡುವ ಕೆಲಸವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ.

Latest Videos

click me!