ಖ್ಯಾತ ಕಾಮಿಡಿಯನ್, ನಟಿ, ನಿರೂಪಕಿ ಕಮ್ ಯುಟ್ಯೂಬರ್ ಲಿಲ್ಲಿ ಸಿಂಗ್ (Lilly Sing) ತಮ್ಮ ಜೀವನದ ಪ್ರತಿಯೊಂದೂ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
ಒಂದು ರೀತಿ ಓಪನ್ ಬುಕ್ ಲೈಫ್ ಲೀಡ್ ಮಾಡುತ್ತಿರುವ ನಟಿ, ಇದೀಗ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ ಹಂಚಿಕೊಳ್ಳುವ ಮೂಲಕ ತಮಗೆ ಆಗಿರುವ ಆರೋಗ್ಯದ ಸಮಸ್ಯೆ ಬಗ್ಗೆ ಬರೆದುಕೊಂಡಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಆದಷ್ಟು ಬೇಗ ಚೇತರಿಸಿಕೊಂಡು ಬನ್ನಿ ಎಂದು ಕಾಮೆಂಟ್ ಮಾಡಿದ್ದಾರೆ.
'ನಿನ್ನೆ ರಾತ್ರಿ ನಾನು ಎಮರ್ಜೆನ್ಸಿ ವಾರ್ಡ್‌ನಲ್ಲಿ (Emergency Ward) ಇದ್ದೆ. ನನ್ನ ಓವರೀಸ್ (Overian Cyst) ತುಂಬಾನೇ ವೈಲ್ಡ್ ಅಗಿ ಆಡುತ್ತಿದೆ. ಎರಡೂ ಓವರ್‌ಗಳಿಗೆ ಸಿಸ್ಟ್ ಇದೆ. ಏನು ಇವೆಲ್ಲಾ ನಿಜನಾ? ಎನ್ನುವ ಯೋಚನೆ ನನ್ನ ತಲೆಯಲ್ಲಿ. ಒಂದು ವಿಚಾರ ನನ್ನ ಓವರಿಸ್‌ಗೆ ಅರ್ಥ ಮಾಡಿಸಬೇಕು,' ಎಂದು ಲಿಲ್ಲಿ ಬರೆದುಕೊಂಡಿದ್ದಾರೆ.
ಪ್ರತಿ ತಿಂಗಳು ನಾನು ನರಳುವಂತೆ ಮಾಡುತ್ತೀಯಾ, ಆ ಪೀರಿಯಡ್ಸ್ (Periods) ಯಾರಿಗೂ ಬೇಡ. ಈ ನೋವು ಎಲ್ಲಾ ಸಾಕಾಗಿದೆ ಇರಲಿ ನಾನು ವೀಕ್ ಅಲ್ಲವೇ ಅಲ್ಲ. ನಾನು ನನ್ನ ಅಂಗಾಂಗಗಳಿಂದ ಏನೂ ನಿರೀಕ್ಷೆ ಮಾಡುವುದಿಲ್ಲ.'
'ಆರೋಗ್ಯವಾಗಿದ್ದರೆ ಸಾಕು. ಯಾಕಿಷ್ಟು ನೋವು ಹೆಣ್ಣು ಮಕ್ಕಳಿಗೆ? ಇರಲಿ ನನ್ನ ಅಂಗಾಂಗಗಳಿಗೆ ನಾನೇ ತಾಯಿ ಅಲ್ವಾ?' ಎಂದು ಬರೆದುಕೊಂಡಿದ್ದಾರೆ.
'ನೀವು ನಮಗೆ ಸಿಕ್ಕಿರುವ Gem. ಇದನ್ನು ಇಷ್ಟು ಸುಲಭವಾಗಿ ತೋರಿಸುತ್ತಿದ್ದೀರಾ? ತಮಾಷೆಯಲ್ಲಿ ಪಕ್ಕಕ್ಕೆ ಇಟ್ಟು ಹೇಳಬೇಕು. ದೇವರು ನಿಮಗೆ ಒಳ್ಳೆಯದು ಮಾಡಲಿ, ಆದಷ್ಟು ಬೇಗ ಚೇತರಿಸಿಕೊಂಡು ಬನ್ನಿ,' ಎಂದು ಹಾಲಿವುಡ್ ಸೆಲೆಬ್ರೆಟಿಗಳು ಕಾಮೆಂಟ್ ಮಾಡಿದ್ದಾರೆ.
'ಅಬ್ಬಾ ಭಯ ಆಗುತ್ತದೆ. ನಿಜ ಏಕೆಂದರೆ ಕೆಲವು ತಿಂಗಳ ಹಿಂದೆ ನನಗೂ ಸಿಸ್ಟ್ ಆಗಿತ್ತು. ಟೆನ್ನಿಸ್ ಬಾಯ್ ಸೈಜ್ ಇತ್ತು ಅದು ಬ್ಲಾಸ್ಟ್ ಆಯ್ತು. ಸಹಿಸಿಕೊಳ್ಳಲು ಆದಗ ನೋವು ಅದು,' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.