ಕೊರೋನಾ ವಾರಿಯರ್ಸ್‌ಯಿಂದ ನಟಿ ಅಮೂಲ್ಯಗೆ ಸೀಮಂತ!

Suvarna News   | Asianet News
Published : Feb 24, 2022, 11:29 AM ISTUpdated : Feb 24, 2022, 02:26 PM IST

ಬೆಳ್ಳಿ ಕೃಷ್ಣ ಮತ್ತು ತೊಟ್ಟಿಲು ತೂಗಿಸಿದ ಜಗದೀಶ್ ಮನೋಜ್ ಹಾಗೂ ಸ್ನೇಹಿತ, ನಟಿ ಅಮೂಲ್ಯಗೆ ಅದ್ಧೂರಿ ಸೀಮಂತ ಮಾಡಿದ ಕೊರೋನಾ ವಾರಿಯರ್ಸ್. 

PREV
17
ಕೊರೋನಾ ವಾರಿಯರ್ಸ್‌ಯಿಂದ ನಟಿ ಅಮೂಲ್ಯಗೆ ಸೀಮಂತ!

ಕೊರೋನಾ (Covid19) ಮೊದಲ ಲಾಕ್‌ಡೌನ್‌ ಸಮಯದಲ್ಲಿ ಜಗದೀಶ್ (Jagadish) ಮತ್ತು ಅಮೂಲ್ಯ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡಿ ಪೌಷ್ಟಿಕಾಂಶ ಕಿಟ್ (Nutrition Kit) ವಿತರಣೆ ಮಾಡಿದ್ದರು.

27

ಕೊರೋನಾ ಸಮಯದಲ್ಲಿ ಜಗದೀಶ್‌ ಜೊತೆ ಕೈ ಜೋಡಿಸಿದ ವಾರಿಯರ್ಸ್‌ (Covid warriors) ಇದೀಗ ನಟಿ ಅಮೂಲ್ಯಗೆ (Amulya Gowda) ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. 

37

ವಾರಿಯರ್ಸ್‌ ಮತ್ತು ಅವರ ಕುಟುಂಬದವರು ಆಗಮಿಸಿ ಜಗದೀಶ್ ನಿವಾಸದಲ್ಲಿ ಸೀಮಂತ ಮಾಡಿದ್ದಾರೆ. ಕೆಂಪು ಬಣ್ಣದ ಸೆಲ್ವಾರ್‌ನಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ. 

47

ಇಡೀ ವಾರಿಯರ್ಸ್‌ ಸೇರಿಕೊಂಡು ಬೆಳ್ಳಿ ಕೃಷ್ಣ (Silver Krishna) ಮತ್ತು ತೊಟ್ಟಿಲು ಕೊಟ್ಟು ಅದನ್ನು ತೂಗಿಸಿದ್ದಾರೆ. ಸೀರೆ, ಹಣ್ಣು, ಹೂ, ಬಳೆ ಕೊಟ್ಟು ಮಡಿಲು ತುಂಬಿಸಿದ್ದಾರೆ. 

57

 ನಟಿ ಅಮೂಲ್ಯಗೆ ಎರಡು ಸೀಮಂತ, ಎರಡು ಬೇಬಿ ಶವರ್ (Baby shower) ಈಗಾಗಲೇ ಮಾಡಲಾಗಿದೆ. ಪ್ರತಿಯೊಂದೂ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

67

ಅಮೂಲ್ಯ ಸ್ನೇಹಿತರಾದ ಬಿಗ್ ಬಾಸ್ ವೈಷ್ಣವಿ ಗೌಡ (Bigg Boss Vaishnavi) ಒಂದು ಬೇಬಿ ಶವರ್ ಮಾಡಿದ್ದರು. ಇಡೀ ಚಿತ್ರರಂಗವನ್ನು ಆಹ್ವಾನಿಸಿ ನಟಿ ಅಮೂಲ್ಯ ಒಂದು ಬೇಬಿ ಶವರ್ ಹಮ್ಮಿಕೊಂಡಿದ್ದರು. 

77

ಜಗದೀಶ್ ನಿವಾಸದಲ್ಲಿ ಗಿಣಿ ಮತ್ತು ಹೂಗಳಿಂದ ಇಡೀ ಮನೆ ಅಲಂಕಾರ ಮಾಡಿ ಸಾಂಪ್ರದಾಯಿಕವಾಗಿ ಒಂದು ಸೀಮಂತ ಮಾಡಿದ್ದರು, ಈಗ ಕೋವಿಡ್ ವಾರಿಯರ್ಸ್‌ ಸೇರಿಕೊಂಡು ಒಂದು ಸೀಮಂತ ಮಾಡಿದ್ದಾರೆ.

Read more Photos on
click me!

Recommended Stories