ಕೊಡಗಿನ ಕುವರಿ, ಸ್ಯಾಂಡಲ್‌ವುಡ್ ಸುಂದರಿ ನಿಧಿ ಸುಬ್ಬಯ್ಯ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಅಗುತ್ತಿದೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಕಾಣಿಸಿಕೊಂಡ ನಂತರ ನಿಧಿ ಜೀ ಕನ್ನಡ ಗೋಲ್ಡ್ ಗ್ಯಾಂಗ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಹಲವು ಸಿನಿಮಾ ಕಥೆಗಳನ್ನು ಕೇಳುತ್ತಿರುವುದಾಗಿ ತಿಳಿಸಿದ್ದರು.
'ನಾನು 13 ಕೆಜಿ ಸಣ್ಣ ಆಗಿದ್ದೀನಿ ಆದರೆ ಯಾವ ಸಿನಿಮಾಗೂ ಸಣ್ಣ ಆಗಿಲ್ಲ ನನ್ನ ಆರೋಗ್ಯ ದೃಷ್ಟಿಯಿಂದ ಸಣ್ಣಗಾಗಿದ್ದೇನೆ.' ಎಂದು ಖಾಸಗಿ ಸಂದರ್ಶನದಲ್ಲಿ ನಿಧಿ ಸುಬ್ಬಯ್ಯ ಹೇಳಿದ್ದಾರೆ.
'ಮೊದಲಿನಿಂದಲೂ ಸೈಕ್ಲಿಂಗ್, ಟ್ರೆಕ್ಕಿಂಗ್ ಅಂದರೆ ತುಂಬಾ ಇಷ್ಟ. ನನ್ನ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಂಡೆ' ಎಂದು ಆಹಾರದ ಬಗ್ಗೆ ಮಾತನಾಡಿದ್ದಾರೆ.
'ಮೊಟ್ಟೆ, ಮೀನು ಜಾಸ್ತಿ ಸೇವಿಸಿದೆ. ಮನಸ್ಸು ಮಾಡಿದರೆ ಎಲ್ಲರೂ ತೂಕ ಇಳಿಸಿಕೊಳ್ಳಬಹುದು ತೂಕ ಕಡಿಮೆ ಮಾಡಿಕೊಳ್ಳುವುದು ದೊಡ್ಡ ವಿಚಾರ ಅಲ್ಲ' ಎಂದು ನಿಧಿ ಹೇಳಿದ್ದಾರೆ.
'ಸುಮಾರಷ್ಟು ಸಿನಿಮಾ ಆಫರ್ ಬಂತು ಆದರೆ ಎಲ್ಲವೂ ಒಂದೇ ರೀತಿ ಕಥೆ. ಇಷ್ಟವಾದ ಸ್ಕ್ರಿಪ್ಟ್ ಸಿಕ್ಕರೆ ಮಾತ್ರ ನಟಿಸುತ್ತೇನೆ' ಎಂದಿದ್ದಾರೆ.