Happy Diwali: ರಾಯನ್ ರಾಜ್ ಸರ್ಜಾ ಬೇರೆ ಬೇರೆ ಮೂಡ್‌ಗಳಿವು....

First Published | Nov 4, 2021, 4:49 PM IST

ಪುತ್ರನ ಫೋಟೋ ಹಂಚಿಕೊಂಡು ಫಾಲೋವರ್ಸ್‌ಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ ನಟಿ ಮೇಘನಾ ರಾಜ್. ವಿಭಿನ್ನ ಮೂಡ್, ಗೆಟ್ ಅಪ್ ಅಪ್ ಚಿರಂಜೀವಿ ಮಗನನ್ನು ನೋಡಿ ಅಭಿಮಾನಿಗಳು ಪುಲ್ ಖುಷ್. ಕಳೆದ ತಿಂಗಳು ಮೊದಲ ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಂಡ ರಾಯನ್ ಫೋಟೋಗಳಿವೆ.
 

ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕಿಡ್ ರಾಯನ್ ರಾಜ್ ಸರ್ಜಾ (Raayan Raj Sarja) ಈ ವರ್ಷ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಅಚರಿಸುತ್ತಿದ್ದಾನೆ. ಒಂದು ವರ್ಷ ಪೂರೈಸಿದ ರಾಯನ್ ಹಬ್ಬದ ಮೂಡಿನಲ್ಲಿ ಕಂಗೊಳಿಸುತ್ತಿದ್ದಾನೆ.

ತಾಯಿ ಮೇಘನಾ ರಾಜ್‌ (Meghana Raj) ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಯನ್‌ನ ಟಿಪ್‌ಟಾಪ್‌ ಆಗಿ ರೆಡಿ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಎಂದಿನಂತೆ ಅಭಿಮಾನಿಗಳು ಜೂನಿಯರ್ ಚಿರು ಫೋಟೋ ನೋಡಿ ಪುಳಕಗೊಂಡಿದ್ದಾರೆ.

Tap to resize

'ರಾಯನ್‌ನ ಡಿಫರೆಂಟ್ ಮೂಡುಗಳಿವು. ನಿಮ್ಮಲ್ಲರಿಗೂ ದೀಪಾವಳಿ ಹಬ್ಬದ ಶುಭಾಶುಗಳು. ನಿಮ್ಮೆಲ್ಲರ ಆಶೀರ್ವಾದ ಮುಖ್ಯ. ಈ ಪುಟ್ಟ ಕಂದಮ್ಮ ಒಂದು ಮಿರಾಕಲ್' ಎಂದು ಮೇಘನಾ ಬರೆದುಕೊಂಡಿದ್ದಾರೆ.
 

'ಈ ಹಬ್ಬ ನಿಮ್ಮ ಜೀವನದಲ್ಲಿ ಹೊಸ ಬೆಳಕು ಮತ್ತು ಸಂತೋಷ (Happiness) ತರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ,' ಎಂದಿದ್ದಾರೆ ಚಿರಂಜೀವಿ ಮಡದಿ ಮೇಘನಾ ರಾಜ್.
 

ಹಳದಿ ಬಣ್ಣದ ಜುಬ್ಬಾಗೆ ಶ್ವೇತಾ ಬಣ್ಣದ ಫ್ಲವರ್ ಪ್ರಿಂಟ್ (Yellow outfit) ಇರುವ ಜುಬಾ ಸೆಟ್‌ನಲ್ಲಿ ರಾಯನ್ ಕಂಗೊಳಿಸುತ್ತಿದ್ದಾನೆ. ಮುದ್ದು ಮುದ್ದಾಗಿರು ರಾಯನ್ ನೋಡಿದರೆ ಎಂಥವರಿಗಾದರೂ ಪ್ರೀತಿ ಉಕ್ಕಿ ಹರಿಯುತ್ತದೆ.
 

ಒಂದು ಫೋಟೋದಲ್ಲಿ ರಾಯನ್ ನಗುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ಅಳುತ್ತಿದ್ದಾನೆ, ಅಲ್ಲದೆ ತುತ್ತೂರಿ ಹಿಡಿದು ಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ಕಮೆಂಟ್ಸ್ ಮೂಲಕ ಅಭಿಮಾನಿಗಳೂ ರಾಯನ್ ಮತ್ತೆ ಅವರಮ್ಮನಿಗೆ ಶುಭ ಕೋರಿದ್ದಾರೆ.

Latest Videos

click me!