ಅತಿ ಚಿಕ್ಕ ವಯಸ್ಸಿಗೆ ಅಗಲಿದ ತಾರೆಯರು: ಕೋಟ್ಯಾಂತರ ಅಭಿಮಾನಿಗಳ ಕಣ್ಣೀರು

Suvarna News   | Asianet News
Published : Nov 04, 2021, 02:07 PM IST

ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದ ಅನೇಕ ಗಣ್ಯರು ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿಗೆ ಈ ನಟರ ಅಗಲಿಕೆ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅನಾಥರಾಗಿಸಿದೆ. ಈ  ನೋವಿನಿಂದಲೂ ಹೊರ ಬರಲಾದೇ ಕನ್ನಡಿಗರು ಇರುವಾಗ, ಒಂದಾದ ಮೇಲೆ ಮತ್ತೊಂದು ಹೊಡೆತ ಬೀಳುತ್ತಲೇ ಇದೆ..

PREV
19
ಅತಿ ಚಿಕ್ಕ ವಯಸ್ಸಿಗೆ ಅಗಲಿದ ತಾರೆಯರು: ಕೋಟ್ಯಾಂತರ ಅಭಿಮಾನಿಗಳ ಕಣ್ಣೀರು

ಪುನೀತ್ ರಾಜ್‌ಕುಮಾರ್ (46): ಕನ್ನಡ ಚಿತ್ರರಂಗದ ಫಿಟ್ನೆಸ್ ಫ್ರೀಕ್, ಪವರ್ ಸ್ಟಾರ್ (Puneeth Rajkumar) ಹೃದಯ ಸ್ತಂಬನ (Cardiac Arrest)ದಿಂದ ಕೊನೆ ಉಸಿರೆಳೆದಿದ್ದಾರೆ. ಅಕ್ಟೋಬರ್ 29ರಂದು ಅಪ್ಪು ಇಹಲೋಕ ತ್ಯಜಿಸಿದ್ದಾರೆ. ತಮ್ಮ ಕಣ್ಣುಗಳನ್ನು ನಾಲ್ಕು ಜನರಿಗೆ ದಾನ ಮಾಡಿದ್ದಾರೆ.29ರಂದು ಅಪ್ಪು ಇಹಲೋಕ ತ್ಯಜಿಸಿದ್ದು. ತಮ್ಮ ಕಣ್ಣುಗಳನ್ನು ನಾಲ್ಕು ಜನರಿಗೆ ದಾನ ಮಾಡಿದ್ದಾರೆ.

29

 ಮೆಬೀನಾ ಮೈಕಲ್ (22): ಕನ್ನಡ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಮೆಬೀನಾ ಮೈಕಲ್ (Mebina Maichel) ಸ್ನೇಹಿತರ ಜೊತೆ ಸೋಮವಾರಪೇಟೆಯಿಂದ ಕಾರಲ್ಲಿ ಪ್ರಯಾಣಿಸುವಾಗ ರಸ್ತೆ ಅಪಘಾತದಲ್ಲಿ (Car accident) 2020ರ ಮೇ 26ರಂದು ಕೊನೆ ಉಸಿರೆಳೆದರು.

39

ಜಯಶ್ರೀ ರಾಮಯ್ಯ (28): ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟಿಸಿರುವ ಜಯಶ್ರೀ ರಾಮಯ್ಯ (Jayashree Ramaiah) ಬೆಂಗಳೂರಿನ ರೀಹ್ಯಾಬಿಟೇಷನ್‌ ಸೆಂಟರ್‌ನಲ್ಲಿ 2021ರ ಜನವರಿ 25ರಂದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ (Depression) ಅವರು ಬಳಲುತ್ತಿದ್ದರು ಎನ್ನಲಾಗಿದೆ. 

49

ಹೇಮಾಶ್ರೀ (30): ಚಿತ್ರರಂಗದ ಜನಪ್ರಿಯ ನಟಿ ಎವರ್‌ಗ್ರೀನ್ ಹೇಮಾಶ್ರೀ (Hemashree) ಅವರು ದೇಹದಲ್ಲಿ ಕ್ರೋರೋಫಾರ್ಮ್‌ ಪತ್ತೆಯಾಗಿದ್ದು, ಆಸ್ಪತ್ರೆ ತಲುಪುವ ಮುನ್ನವೇ ನಿಧನರಾಗಿದ್ದರು. ಚುನಾವಣೆಯಲ್ಲಿ ಸೋತರು, ವೈವಾಹಿಕ ಜೀವನದಲ್ಲಿ ಮನಸ್ತಾಪವಿತ್ತು. ಹೀಗಾಗಿ ಎನೋ ಮಾಡಿಕೊಂಡಿರಬೇಕು ಎನ್ನಲಾಗಿದೆ. ಘಟನೆ ನಡೆದದ್ದು 2012, ಈ ಸಾವು ಅಭಿಮಾನಿಗಳ ಮನಸ್ಸಿನಲ್ಲಿ ತುಂಬಾನೇ ಬೇಸರ ತಂದಿತ್ತು.

59

 ಸಂಚಾರಿ ವಿಜಯ್ (37): ಮನೆಯಿಂದ ಹೊರ ಬಂದು ಬೈಕಿನಲ್ಲಿ100 ಮೀಟರ್ ಸಾಗಿರಲಿಲ್ಲ. ಅಷ್ಟರಲ್ಲಿಯೇ ರಸ್ತೆ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದು ಸಂಚಾರಿ (Sanchari Vijay) ನಿಧನರಾದರು. ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಅನೇಕರಿಗೆ ಜೀವ ಕೊಟ್ಟಿದ್ದಾರೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟ. 

69

ಚಿರಂಜೀವಿ ಸರ್ಜಾ (35): ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಚಿರಂಜೀವಿ (Chiranjeevi Sarja), ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿಯೇ ಕೊನೆ ಉಸಿರಳೆದರು. ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದು , ಇಡೀ ಕರ್ನಾಟಕದ ಜನತೆಗೆ ಈ ಘಟನೆಯಿಂದ ಹೊರ ಬರಲು ಕಷ್ಟವಾಗಿತ್ತು.

79

ಕೋಟಿರಾಮು (52): ಖ್ಯಾತ ನಿರ್ಮಾಪಕ ಕೋಟಿ ರಾಮು (Koti Ramu) ಕೊರೋನಾ ಸೋಂಕಿಗೆ ತುತ್ತಾಗಿ ಕೊನೆ ಉಸಿರೆಳೆದರು. ಪತ್ನಿ ಮಾಲಾಶ್ರೀ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದರು.
 

89

ವಿಜೆ ಚಂದನ್ (34): ನಿರೂಪಕ ಹಾಗೂ ನಟನಾಗಿ ಗುರುತಿಸಿಕೊಂಡಿದ್ದ ಚಂದನ್ (VJ Chandan) ದಾವಣಗೆರೆ ರಸ್ತೆ ಅಪಘಾತದಲ್ಲಿ (Bike accident) ನಿಧನರಾದರು. ಪತ್ನಿ ಹಾಗೂ ಮುದ್ದಾದ ಮಗುವನ್ನು ಅಗಲಿದ್ದಾರೆ. 

99

ಬುಲೆಟ್ ಪ್ರಕಾಶ್ (44): ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ (Bullet Prakash) ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ವಿಫಲವಾಗಿ ಕಳೆದ ವರ್ಷ ಕೊರೋನಾ ಟೈಮಲ್ಲಿ ಕೊನೆಯುಸಿರೆಳೆದರು.

Read more Photos on
click me!

Recommended Stories