ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ Love Mocktail 2 ನಟಿ ಸುಶ್ಮಿತಾ ಗೌಡ!

Suvarna News   | Asianet News
Published : Feb 11, 2022, 01:54 PM IST

ಲವ್ ಮಾಕ್ಟೇಲ್ ಬಿಡುಗಡೆ ಸಂಭ್ರಮದ ಜೊತೆ ದಾಂಪತ್ಯ ಜೀವನದ ಸಂಭ್ರಮದಲ್ಲಿರುವ ನಟಿ ಸುಶ್ಮಿತಾ ಗೌಡ.

PREV
17
ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ Love Mocktail 2 ನಟಿ ಸುಶ್ಮಿತಾ ಗೌಡ!

ಲವ್ ಮಾಕ್ಟೇಲ್ 2 (Love Mocktail) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ನಟಿ ಸುಶ್ಮಿತಾ ಗೌಡ (Sushmitha Gowda) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

27

ಬೆಂಗಳೂರಿನ (Bengaluru) ಹೊರ ಹೊಲೆಯದಲ್ಲಿರುವ ರೆಸಾರ್ಟ್‌ನಲ್ಲಿ ಫೆಬ್ರವರಿ 10ರಂದು ತಮ್ಮ ಬಹು ಕಾಲದ ಗೆಳೆಯ ಅಶ್ವಿನ್ ಗೌಡ (Ashwini Gowda) ಜೊತೆ ಹಸೆಮಣೆ ಏರಿದ್ದಾರೆ. 

37

ಇಂದು ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆ ಅಗಿದ್ದು ಸೋಷಿಯಲ್ ಮೀಡಿಯಾದಲ್ಲಿ (Social Media) ಮೂಲಕವೇ ತಮ್ಮ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. 

47

ಸುಶ್ಮಿತಾ ಮತ್ತು ಅಶ್ವಿನ್ ಸಂಗೀತ ಮತ್ತು ಮೆಹಂದಿ (Mehendi) ಕಾರ್ಯಕ್ರಮ ನಡೆದ ನಂತರ ಒಂದು ದಿನ ಬ್ರೇಕ್ ತೆಗೆದುಕೊಂಡು, ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

57

 ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಎದುರು ಮಾತನಾಡುತ್ತಿರುವ ಸಂತೋಷದ ಜೊತೆ ತಮ್ಮ ಮದುವೆ ಬಗ್ಗೆ ಹೇಳಿಕೊಂಡು, ಪ್ರಚಾರ ನಡೆದ ಮಾರನೇ ದಿನವೇ ಮದುವೆಯಾದರು. 

67

ವಿದೇಶದಲ್ಲಿ ಅಶ್ವಿನ್ ಕೆಲಸ ಮಾಡುತ್ತಿದ್ದು, ಪ್ರೀ-ವೆಡ್ಡಿಂಗ್ ಫೋಟೋಶೂಟ್‌ನ ಮಂಜಿನ ನಡುವೆ ಮಾಡಲಾಗಿತ್ತು. ಅಲ್ಲದೆ ಆಗಲೇ ಅಶ್ವಿನಿ ಮಂಡಿಯೂರಿ ಪ್ರಪೋಸ್ ಮಾಡಿದ ವಿಡಿಯೋ ಹಂಚಿಕೊಂಡಿದ್ದರು.

77

ಸುಶ್ಮಿತಾ ಸೋಷಿಯಲ್ ಮೀಡಿಯಾ ಸ್ಟಾರ್ ಮತ್ತು ಜನಪ್ರಿಯ ಮಿರಾಕಿ ಕೂದಲು ಎಣ್ಣೆಯ ಸಂಸ್ಥಾಪಕಿ. ಹೀಗಾಗಿ ನಟಿ ಆಶಿಕಾ ರಂಗನಾಥ್ (Ashika Ranganath) ಸೇರಿದಂತೆ ಅನೇಕ ಸಿನಿಮಾ ತಾರೆಯರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read more Photos on
click me!

Recommended Stories