ಹಾಸ್ಯಪ್ರಧಾನ ಫ್ಯಾಮಿಲಿ ಎಂಟರ್‌ಟೈನರ್ ‘ರಮ್ಯ ರಾಮಸ್ವಾಮಿ’ ಚಿತ್ರದಲ್ಲಿ ರವಿಚಂದ್ರನ್ ರಾಮಸ್ವಾಮಿಯಾಗಿ ಬಣ್ಣ ಹಚ್ಚಲಿದ್ದಾರೆ. ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಚಿ.ಗುರುದತ್ ಮಾತನಾಡಿದ್ದಾರೆ.
‘ಹಿಂದೆ ಅಪ್ಪು ಅವರ ಆಕಾಶ್, ಅರಸು ಇತ್ಯಾದಿ ಸಿನಿಮಾಗಳಿಗೆ ಕತೆ ಬರೆದ ಜನಾರ್ದನ ಮಹರ್ಷಿ ಅವರ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇದು ಹಾಸ್ಯ ಪ್ರಧಾನವಾದ ಆದರೆ ಸಾಕಷ್ಟುಭಾವನಾತ್ಮಕ ಕತೆಯೂ ಇರುವ ಫ್ಯಾಮಿಲಿ ಎಂಟರ್‌ಟೈನರ್' ಎಂದು ಹೇಳಿದ್ದಾರೆ.
'ರವಿಚಂದ್ರನ್ ಸ್ಕ್ರಪ್ಟ್ ನೋಡಿ ಮೆಚ್ಚಿಕೊಂಡಿದ್ದಾರೆ. ಬಹುಶಃ ಏಪ್ರಿಲ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಇದೀಗ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ.'
'ನಾನು ರವಿಚಂದ್ರನ್ ಬಹಳ ಕಾಲದ ಸ್ನೇಹಿತರು. ಜೊತೆಯಾಗಿ ಸಿನಿಮಾ ಮಾಡೋದಕ್ಕೆ ಖುಷಿ ಅನಿಸುತ್ತೆ’ ಎಂದಿದ್ದಾರೆ ಚಿ. ಗುರುದತ್.
ರಮ್ಯ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಅಭಿನಯಿಸಲಿದ್ದಾರೆ, ಶೀಘ್ರ ಆ ವಿವರ ನೀಡುವುದಾಗಿ ನಿರ್ಮಾಪಕ ಎನ್‌ಎಸ್ ರಾಜ್ ಕುಮಾರ್ ತಿಳಿಸಿದ್ದಾರೆ.
ಜಿ ಎಸ್ ವಿ ಸೀತಾರಾಂ ಛಾಯಾಗ್ರಹಣ ಚಿತ್ರಕ್ಕಿದೆ. ರವಿ ಬಸ್ರೂರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಎನ್‌ಎಸ್ ರಾಜ್‌ಕುಮಾರ್ ಚಿತ್ರ ನಿರ್ಮಿಸುತ್ತಿದ್ದಾರೆ.