Kannada Movie: ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳನ್ನು ಚಿತ್ರಿಸುವ ಯು ಟರ್ನ್ ಚಿತ್ರವು, 2.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 10.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಫ್ಲೈಓವರ್ ಮೇಲೆ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸುವುದರಿಂದ ಉಂಟಾಗುವ ಅಪಾಯಗಳನ್ನು ಮತ್ತು ತಾಯಿ-ಮಗುವಿನ ಸಾವಿಗೆ ಕಾರಣರಾದವರನ್ನು ಹುಡುಕುವ ಕಥೆಯನ್ನು ಹೊಂದಿದೆ.
ಒಂದು ಸಿನಿಮಾ ಹಿಟ್ ಆಗಬೇಕಾದ್ರೆ ಅದರ ಕಥೆ ಚೆನ್ನಾಗಿರಬೇಕಾಗುತ್ತದೆ. ಕಥೆ ಜೊತೆ ಅದನ್ನು ತೆರೆ ಮೇಲೆ ತೋರಿಸುವ ಚಾಕಚಕ್ಯತೆಯೂ ಸಿನಿಮಾದ ಗೆಲುವಿಗೆ ಕಾರಣವಾಗುತ್ತದೆ. ಚಿತ್ರಕಥೆ ಮತ್ತು ನಿರ್ದೇಶನ ಸಿನಿಮಾದ ಗೆಲುವಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ರಸಹೀನತೆಯ ಕಥೆಗೆ ನೀವೇ ಎಷ್ಟೇ ಕೋಟಿ ಹಣ ಸುರಿದು ಅದನ್ನು ಅದ್ಧೂರಿಯಾಗಿ ತೋರಿಸಿದ್ರೂ ಜನರು ಅದನ್ನು ಒಪ್ಪಿಕೊಳ್ಳಲ್ಲ. ಬಿಗ್ ಬಜೆಟ್ ಹೆಸರಿನಲ್ಲಿ ಬಂದ ಸಿನಿಮಾಗಳು ಸೋತು ಸುಣ್ಣವಾದ ಉದಾಹರಣೆಗಳು ನಮ್ಮ ಮುಂದಿವೆ.
27
ಪ್ರತಿಭಾನ್ವಿತ ನಿರ್ದೇಶಕರು ಸಣ್ಣದಾದ ಎಳೆಯನ್ನು ತೆರೆಯ ಮೇಲೆ ಸುಂದರವಾಗಿ ತೋರಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಕೆಲ ಚಿತ್ರಗಳು ಅಂತಿಮವಾಗಿ ನೋಡುಗರಿಗೆ ಅತಿದೊಡ್ಡ ಸಂದೇಶವನ್ನು ನೀಡುತ್ತವೆ. ಇಂತಹ ಸಿನಿಮಾಗಳು ನೀಡುವ ಸಂದೇಶ ಸಮಾಜದ ಮೇಲೆ ಸಕಾರಾತ್ಮಕ ಬೆಳವಣಿಗೆಯನ್ನು ಮೂಡಿಸುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ಚಿತ್ರ 2016ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕಥಾ ನಾಯಕಿಯೇ ಇಲ್ಲಿ ಹೀರೋ ಆಗಿದ್ದಾರೆ.
37
ಪವನ್ ಕುಮಾರ್ ನಿರ್ದೇಶನದ ಶ್ರದ್ಧಾ ಶ್ರೀನಾಥ್, ದಿಲೀಪ್ ರಾಜ್, ರೋಜರ್ ನಾರಾಯಣ್ ಮತ್ತು ರಾಧಿಕಾ ಚೇತನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 2.5 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಇಡೀ ಚಿತ್ರ ಬೆಂಗಳೂರಿನಲ್ಲಿಯೇ ಚಿತ್ರೀಕರಣವಾಗಿತ್ತು. ಬೆಂಗಳೂರಿನ ಫ್ಲೈಓವರ್ ಮೇಲೆ ವಾಹನ ಸವಾರರು ಟ್ರಾಫಿಕ್ ನಿಯಮ ಉಲ್ಲಂಘಿಸೋದರಿಂದಾಗುವ ಅಪಾಯಗಳನ್ನು ಚಿತ್ರದಲ್ಲಿ ಹೇಳಲಾಗಿದೆ.
ಯು ಟರ್ನ್ ಎಂಬ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥೆಯುಳ್ಳ ಸಿನಿಮಾ ಮೂಲಕ ಟ್ರಾಫಿಕ್ ನಿಯಮಗಳ ಬಗ್ಗೆ ಮಹತ್ವದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಐಎಂಡಿಬಿ ಈ ಚಿತ್ರಕ್ಕೆ 7.4 ರೇಟಿಂಗ್ ನೀಡಿದ್ದು, ಬಾಕ್ಸ್ ಆಫಿಸ್‌ನಲ್ಲಿ 10.7 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
57
ಫ್ಲೈ ಓವರ್ ಮೇಲಿನ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿರುತ್ತಾರೆ. ರಾತ್ರಿ ಈ ಡಿವೈಡರ್ ಬ್ಲಾಕ್‌ಗೆ ಸ್ಕೂಟಿ ಡಿಕ್ಕಿಯಾಗಿದ್ರಿಂದ ತಾಯಿ-ಮಗು ಸಾಯುತ್ತಾರೆ.
67
ಸತ್ತ ಬಳಿಕ ತಾಯಿ-ಮಗು ಆತ್ಮಗಳಾಗಿ ಮುಂದೆ ಡಬಲ್ ರೋಡ್ ಫ್ಲೈ ಓವರ್ ಮೇಲೆ ಡಿವೈಡರ್ ಬ್ಲಾಕ್ ಪಕ್ಕಕ್ಕೆ ಸರಿಸಿದವರನ್ನು ಕೊಲ್ಲುತ್ತಾ ಹೋಗುತ್ತಾರೆ. ತಾಯಿ-ಮಗಳಿಗೆ ಸಾವಿಗೆ ಕಾರಣರಾದವರು ಯಾರು? ಆ ಡಿವೈಡರ್ ಬ್ಲಾಕ್ ಸರಿಸಿದ್ಯಾರು ಯಾರು ಎಂಬುವುದೇ ಚಿತ್ರದ ಕಥೆಯಾಗಿದೆ.
77
ತಾಯಿ-ಮಗಳ ಆತ್ಮಕ್ಕೆ ಕಥಾ ನಾಯಕಿ ರಚನಾ ಹೇಗೆ ಸಹಾಯ ಮಾಡುತ್ತಾಳೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಚಿತ್ರದಲ್ಲಿನ ಸಾಲು ಸಾಲು ಸಾವುಗಳು ವೀಕ್ಷಕರನ್ನ ಕುರ್ಚಿಯ ತುದಿಗೆ ತಂದು ಕೂರಿಸುತ್ತವೆ. ಈ ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.