ಕುಟುಂಬದೊಂದಿಗೆ ಕನಸಿನ ರಾಣಿ.. ಚೀನಾ-ಬ್ಯಾಂಕಾಕ್ ರಸ್ತೆಗಳಲ್ಲಿ ಸುತ್ತಾಡುತ್ತಿರೋ ಮಾಲಾಶ್ರೀ-ಆರಾಧನಾ..!

Published : Jan 10, 2026, 12:23 PM IST

ಚೀನಾ ಹಾಗೂ ಬ್ಯಾಂಕಾಕ್‌ನಲ್ಲಿ ತಾವು ತಮ್ಮ ಕುಟುಂಬದ ಜೊತೆಗೆ ಮೋಜು-ಮಸ್ತಿ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ನಟಿ ತಮ್ಮ ಇಡೀ ಕುಟುಂಬದ ಜೊತೆಗೆ ಕುಳಿತು ಊಟ ಮಾಡುತ್ತಿದ್ದಾರೆ. ಆ ಫೋಟೊಗೆ ವೈರಲ್ ಆಗ್ತಿದೆ.

PREV
112

ಕನ್ನಡದ 'ಕನಸಿನ ರಾಣಿ' ಖ್ಯಾತಿಯ ನಟಿ ಮಾಲಾಶ್ರೀ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಕುಟುಂಬಸ್ಥರ ಜೊತೆಗೆ ಚೀನಾ, ಬ್ಯಾಂಕಾಕ್‌ನ ರಸ್ತೆ, ಮಾಲ್‌ಗಳಲ್ಲಿ ಮಾಲಾಶ್ರೀ ಸುತ್ತಾಡುತ್ತಿದ್ದಾರೆ.

212

ನಟಿ ಮಾಲಾಶ್ರೀ ಅವರು ತಮ್ಮ ಮಗಳಾದ ಆರಾಧನಾ ರಾಮ್, ಮಗನಾದ ಆರ್ಯನ್ ಹಾಗೂ ತಾಯಿ ಜೊತೆಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. 

412

ಯಾವತ್ತೂ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿರುವ ನಟಿ ಮಾಲಾಶ್ರೀ ಅವರು ಇತ್ತೀಚೆಗೆ ಚೀನಾ, ಬ್ಯಾಂಕಾಕ್‌ಗೆ ಹೋಗಿರುವ ಫೋಟೊಗಳನ್ನು ಇನ್‌ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

512

ನಟಿ ಮಾಲಾಶ್ರೀ ಆಗಾಗ ವಿದೇಶಕ್ಕೆ ಹೋಗಿ ಬರುತ್ತಲೇ ಇರುತ್ತಾರೆ. ಅವರು ತಮ್ಮ ತಾಯಿ, ಮಗ ಹಾಗೂ ಮಗಳ ಜೊತೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

612

ಈ ಬಾರಿ ಚೀನಾ ಹಾಗೂ ಬ್ಯಾಂಕಾಕ್‌ನಲ್ಲಿ ತಾವು ತಮ್ಮ ಕುಟುಂಬದ ಜೊತೆಗೆ ಮೋಜು-ಮಸ್ತಿ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

712

ಒಂದು ಫೋಟೊದಲ್ಲಿ ನಟಿ ತಮ್ಮ ಇಡೀ ಕುಟುಂಬದ ಜೊತೆಗೆ ಕುಳಿತು ಊಟ ಮಾಡುತ್ತಿದ್ದಾರೆ. ಆ ಫೋಟೊಗೆ 'ಕುಟುಂಬ, ಆಹಾರ, ನಗು ಮತ್ತು ಪ್ರೀತಿ' ಎಂದು ಅಡಿ ಬರಹ ಬರೆದುಕೊಂಡಿದ್ದಾರೆ.

812

ನಟಿ ಮಾಲಾಶ್ರೀ ಅವರು 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು ಸೂಪರ್ ಸ್ಟಾರ್ ಆಗಿ ಮೆರೆದವರು. ನಟರಷ್ಟೇ ಖ್ಯಾತಿ, ಸಂಭಾವನೆ ಪಡೆದು ಕನ್ನಡದಲ್ಲಿ ಹಿಂದೆಂದೂ ಯಾರೂ ಮಾಡಿರದ ಸಾಧನೆ ಮಾಡಿರುವನಟಿ ಮಾಲಾಶ್ರೀ.

912

ಅಂದು ಡಬಲ್ ಶಿಫ್ಟ್ ಮೂಲಕ ಕೆಲಸ ಮಾಡುತ್ತಿದ್ದ ನಟಿ ಮಾಲಾಶ್ರೀ ಅವರು, ಅಂದು ಮಿಕ್ಕ ನಟಿಯರಿಗಿಂತ, ಬಹಳಷ್ಟು ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟಿ.

1012

ಇದೀಗ, ನಟಿ ಮಾಲಾಶ್ರೀಯವರು ಸಿನಿಮಾಗಳಲ್ಲಿ ಗೆಸ್ಟ್ ರೋಲ್‌ಗಳಲ್ಲಿ ಹಾಗೂ ಕೆಲವು ಸೆಲೆಕ್ಟೆಡ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆದರೆ, ಅವರ ಮಗಳು ಆರಾಧನಾ ರಾಮ್ ಅವರು ದರ್ಶನ್ ನಟನೆಯ 'ಕಾಟೇರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

1112

ಕಾಟೇರ ಸಿನಿಮಾ ಸೂಪರ್ ಹಿಟ್ ಆಗುವ ಮೂಲಕ ಆರಾಧನಾ ರಾಮ್ ಅವರು ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ನಟ ಉಪೇಂದ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಆರಾಧನಾ ರಾಮ್.

1212

ನಟಿ ಮಾಲಾಶ್ರೀ ಅವರು 'ಕೋಟಿ ನಿರ್ಮಾಪಕ' ಖ್ಯಾತಿಯ ರಾಮು ಅವರನ್ನು ಮದುವೆ ಆದವರು. ಆದರೆ, ರಾಮು ಅವರು ಕೋವಿಡ್ ಸಮಯದಲ್ಲಿ ನಿಧನರಾಗಿದ್ದು, ಈಗ ನಟಿ ಮಾಲಾಶ್ರೀ ಅವರು ಸಿಂಗಲ್ ಪೇರೆಂಟ್‌ ಆಗಿ ತಮ್ಮ ಕುಟುಂಬವನ್ನು ಜವಾಬ್ದಾರುಯಿಂದ ನಿರ್ವಹಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories