ಕನ್ನಡ ಚಿತ್ರರಂಗದ (Sandalwood) ಯುವನಟ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿ ಒಂದೂವರೆ ವರ್ಷ ಕಳೆದರೂ, ಅವರ ನೆನಪುಗಳು ಮಾತ್ರ ಇನ್ನೂ ಅಮರ.
ಚಿರು ಮತ್ತು ಮೇಘನಾ ರಾಜ್ (Meghana Raj) ಆಪ್ತ ಗೆಳೆಯ ಪನ್ನಗಾ ಭರಣ (Pannaga Bharana) ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿರು ಜೊತೆಗಿರುವ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪನ್ನಗಾ ಮತ್ತು ಚಿರು ಒಬ್ಬರಿಗೊಬ್ಬರು ಕೇಕ್ (Cake) ತಿನ್ನಿಸಿಕೊಂಡು ಫೋಟೋಗೆ ಸ್ಮೈಲ್ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ರೀತಿ, ಒಂದೇ ಬಣ್ಣದ ಶರ್ಟ್ ಧರಿಸಿದ್ದಾರೆ.
ಈ ಫೋಟೋದಲ್ಲಿ ಚಿರು ಆಪ್ತ ಗೆಳೆಯರ ಜೊತೆ ಸಹೋದರ ಧ್ರುವ ಸರ್ಜಾ (Dhruva Sarja) ಮತ್ತು ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ (Imran Sardhariya) ಇದ್ದಾರೆ.
ಒಂದು ಫೋಟೋದಲ್ಲಿ ಪನ್ನಗಾ ಅಸೀಟು (ಅಕ್ಕಿ ಅಥವಾ ಗೋಧಿ ಪೌಡರ್) ಹಿಡಿದುಕೊಂಡು ನಿಂತಿದ್ದಾರೆ. ಬಹುಶಃ ಇದನ್ನು ಒಬ್ಬರ ಮೇಲೆ ಮತ್ತೊಬ್ಬರು ಸುರಿದುಕೊಂಡಿದ್ದಾರೆ ಅನಿಸುತ್ತದೆ.
ಜ್ಯೂನಿಯರ್ ಚಿರು ಉರ್ಫ್ ಸಿಂಬಾ ಉರ್ಫ್ ರಾಯನ್ ರಾಜ್ ಸರ್ಜಾ ಈಗ ನೋಡಲು ತೇಟ್ ಚಿರು ತರಾನೇ. ಈ ಹಳೆ ಫೋಟೋವನ್ನು ನೋಡಿದ್ದವರು ಅರೇ ರಾಯನ್ ಹೀಗೆ ಇದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.