ಹುಟ್ಟು ಹಬ್ಬದಂದು ಫ್ಯಾಮಿಲಿ ಫೋಟೋ ರಿವೀಲ್ ಮಾಡಿದ ನಟಿ Amulya!

Published : Sep 15, 2022, 03:49 PM ISTUpdated : Sep 15, 2022, 04:01 PM IST

ವೈರಲ್ ಆಗುತ್ತಿದೆ ನಟಿ ಅಮೂಲ್ಯ ಫ್ಯಾಮಿಲಿ ಫೋಟೋಶೂಟ್. ಮುದ್ದಾದ ಅವಳಿ ಮಕ್ಕಳಿಗೆ ಮೇಲೆ ನೆಟ್ಟಿಗರ ಕಣ್ಣು....

PREV
16
ಹುಟ್ಟು ಹಬ್ಬದಂದು ಫ್ಯಾಮಿಲಿ ಫೋಟೋ ರಿವೀಲ್ ಮಾಡಿದ ನಟಿ Amulya!

ಸ್ಯಾಂಡಲ್‌ವುಡ್‌ ಗೋಲ್ಡನ್ ಕ್ವೀನ್ ಅಮೂಲ್ಯ ಸೆಪ್ಟೆಂಬರ್ 14ರಂದು 29ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

26

ಅಮೂಲ್ಯಾ ತಾಯಿಯಾದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಮೆಸೇಜ್ ಬರೆದುಕೊಂಡಿದ್ದಾರೆ.

36

'ಈ ವರ್ಷದ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ತಾಯಿಯಾಗಿ ನನ್ನ ಮುದ್ದಾದ ಗಂಡು ಮಕ್ಕಳ ಜೊತೆ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.

46

 ' ವರ್ಷ ಕಳೆಯುತ್ತಿದ್ದಂತೆ ಸದಾ ಜೊತೆಗಿರುವ ಬೆಸ್ಟ್‌ ಗಿಫ್ಟ್‌. ನನ್ನ ಇಬ್ಬರೂ ಮಕ್ಕಳು ಮೋಸ್ಟ್‌ precious,forever growing, ಗ್ಲೋಯಿಂಗ್ ಗಿಫ್ಟ್‌ಗಳು.  ಅವರ ಬೆಳವಣಿಗೆಯನ್ನು ನಾನು ಎಂಜಾಯ್ ಮಾಡುತ್ತಿರುವೆ. ನ್ಯೂ ಮಮ್ಮಿಯಾಗಿ ಇಂದು ನನ್ನ ಹ್ಯಾಪಿ ಬರ್ತಡೇ' ಎಂದಿದ್ದಾರೆ ಅಮೂಲ್ಯ.

56

ಅಮೂಲ್ಯ, ಪತಿ ಜಗದೀಶ್ ಮತ್ತು ಇಬ್ಬರು ಮುದ್ದು ಮಕ್ಕಳು ವೈಟ್ ಆಂಡ್ ವೈಟ್‌ನಲ್ಲಿ ಮಿಂಚುತ್ತಿದ್ದಾರೆ. ಕ್ಯಾಮೆರಾನ ಮಕ್ಕಳು ತುಂಬಾನೇ ಕ್ಯೂರಿಯಾಸಿಟಿಯಲ್ಲಿ ನೋಡುತ್ತಿದ್ದಾರೆ.

66

 'ಹ್ಯಾಪಿ ಬರ್ತಡೇ ನನ್ನ ಸುಂದರವಾದ ಹೆಂಡತಿ, ನನ್ನ ಇಬ್ಬರು ಸನ್-ಶೈನ್‌ಗಳ ಮಮ್ಮಿ. ನಿನ್ನ ಕನಸು ನನಸಾಗಲಿ' ಎಂದು ಪತಿ ಜಗದೀಶ್ ಪೋಸ್ಟ್‌ ಮಾಡಿದ್ದಾರೆ.

Read more Photos on
click me!

Recommended Stories