SIIMA 2022: ಕನ್ನಡ ಚಿತ್ರರಂಗದಲ್ಲಿ ಯಾರ್ಯಾರಿಗೆ ಯಾವ ಪ್ರಶಸ್ತಿ ಬಂದಿದೆ ನೋಡಿ!

First Published Sep 11, 2022, 10:48 AM IST

ಸೌತ್‌ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್‌ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಪ್ರತಿ ಭಾಷೆಯಲ್ಲೂ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಸಲ ಯಾರಿಗೆ ಯಾವ ಪ್ರಶಸ್ತಿ ಲಭಿಸಿದೆ ನೋಡಿ...

Best Debutant Producer: ರತ್ನನ್ ಪ್ರಪಂಚ ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದ ಕೆಆರ್‌ಜೆ ಸ್ಟುಡಿಯೋ ಮೊದಲ ಬಾರಿ ಸೈಮಾ ಅವಾರ್ಡ್‌ ಪಡೆದುಕೊಂಡಿದೆ.

Most Promising Newcomer: ಶ್ರೀಲೀಲಾ. ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ ಭರಾಟೆ, ಬೈಟು ಲವ್ ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಬೆಸ್ಟ್‌ ಪ್ಲೇ ಬ್ಯಾಗ್ ಸಿಂಗರ್: ಸೋಜುಗದ ಸೂಜು ಮಲ್ಲಿಗೆ ಹಾಡಿಗೆ ಚೈತ್ರಾ ಜೆ ಆಚಾರ್. ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಸ್ಪೆಷಲ್ ಹಾಡು ಇದಾಗಿದೆ.

Best Debutant Actor: ನಾಗಭೂಷಣ. ಇಕ್ಕಟ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಈಗ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಗೀತಾ ಸೈಮಾ 2022 ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುನೀತ್‌ಗೆಂದು ಅರ್ಪಣೆ ಮಾಡಿರುವ ಈ ಕಾರ್ಯಕ್ರಮದಲ್ಲಿ ಮೂರ್ನಾಲ್ಕು ಹಾಡುಗಳನ್ನು ಹಾಡಿದ್ದಾರೆ.

Best Actor: ಪ್ರಮೋದ್. ರತ್ನನ್ ಪ್ರಪಂಚ (Ratnan Prapancha) ಚಿತ್ರದಲ್ಲಿ ಪ್ರಮೋದ್ ನಟನೆ ಸಾವಿರಾರೂ ಸಿನಿ ರಸಿಕರ ಗಮನ ಸೆಳೆದಿದೆ. 

Best Actor in Comedy: ಚಿಕ್ಕಣ್ಣ. ಧ್ರುವ ಸರ್ಜಾ ನಟಿಸಿರುವ ಪೊಗರು ಸಿನಿಮಾದಲ್ಲಿ ಚಿಕ್ಕಣ್ಣ ಅಭಿನಯಿಸಿದ್ದು ಬೆಸ್ಟ್‌ ಕಾಮಿಡಿ ಮಾಡಿದ್ದಾರೆ. ಧನಂಜಯ್‌ ಅವರಂದ ಚಿಕ್ಕಣ್ಣ ಅವಾರ್ಡ್ ಪಡೆದುಕೊಂಡಿದ್ದಾರೆ.

ಬೆಸ್ಟ್‌ ಲಿರಿಕ್ ರೈಟರ್ ಕನ್ನಡ ವಾಸುಕಿ ವೈಭವ್. ಧನ್ಯಾ ರಾಮ್‌ಕುಮಾರ್ ಮತ್ತು ಸೂರಜ್ ಅಭಿನಯಿಸಿರುವ ನಿನ್ನ ಸನಿಹಕೆ ಚಿತ್ರದ ನೀ ಪರೀಚಯ ಹಾಡು.

ಡಿಂಪಲ್ ಕ್ವೀನ್ ರಚಿತಾ ರಾಮ್ 10ನೇ ಸೈಮಾ ಅವಾರ್ಡ್ ಕಾರ್ಯಕ್ರನದಲ್ಲಿ ಭಾಗಿಯಾಗಿದ್ದರು. ಗೋಲ್ಡನ್ ಬಣ್ಣದ ಸೆಲ್ವಾರ್‌ನಲ್ಲಿ ರಚ್ಚು ಮಿಂಚಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ನಟ ಡಾಲಿ ಧನಂಜಯ್‌ ಸೈಮಾ ಅವಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ. ಧನಂಜಯ್ ಕೈಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿದೆ. 

Best actress in a leading role: ಅಮೃತಾ ಐಯ್ಯಂಗಾರ್. ಧನಂಜಯ್‌ಗೆ ಜೋಡಿಯಾಗಿ ಬಡವ ರಾಸ್ಕಲ್‌ ಸಿನಿಮಾದಲ್ಲಿ ಅಮೃತಾ ಅಭಿನಯಿಸಿದ್ದಾರೆ.

Best actress leading role: ಮದಗಜ ಚಿತ್ರಕ್ಕೆ ನಟಿ ಆಶಿಕಾ ರಂಗನಾಥ್‌ (Ashika Ranganath) ಲೀಡಿಂಗ್ ರೋಲ್ ಅವಾರ್ಡ್‌ ಬಂದಿದೆ. 

Best Director: ರಾಬರ್ಟ್‌. ನಿರ್ದೇಶಕ ತರುಣ್ ಸುಧೀರ್‌ಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೈಮಾ ಅವಾರ್ಡ್ ನೀಡಿದ್ದಾರೆ. 

click me!