ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಜಗದೀಶ್ ಗೌಡ ಫ್ಯಾಮಿಲಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿರುವ ಈ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವಳ ಮಕ್ಕಳಿಬ್ಬರೂ ಪೂಜೆಯಲ್ಲಿ ಭಾಗಿಯಾಗಿದ್ದರು.
ಪೂಜೆ ನಂತರ ಕೆಲ ಸಮಯಗಳ ಕಾಲ ದೇಗುಲದಲ್ಲಿ ಕುಳಿತುಕೊಂಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಅಮೂಲ್ಯರನ್ನು ಕಂಡು ಸೆಲ್ಫಿ ಕೇಳಿದ್ದಾರೆ.
ನಟನೆಯಿಂದ ದೂರ ಉಳಿದಿರುವ ಅಮೂಲ್ಯ ಮದರ್‌ಹುಡ್‌ನ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು ಜೀವನದ ಪ್ರತಿಯೊಂದು ಕ್ಷಣವನ್ನು ಅಪ್ಲೇಟ್ ಮಾಡುತ್ತಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಅಮೂಲ್ಯ ಮತ್ತು ಜಗದೀಶ್ ಫ್ಯಾಮಿಲಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಕುಟುಂಬ ಹೀಗೆ ನಗು ನಗುತ್ತಲಿರಲ್ಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.