ಮಗುವಿನ ನಗು, ಸಂತಸ, ಕಾಡು; ರಿಷಬ್ ಮತ್ತು ಸ್ನೇಹಿತರ ಜೊತೆ ರಕ್ಷಿತ್ ಶೆಟ್ಟಿ ಪ್ರವಾಸ, ಫೋಟೋ ವೈರಲ್

First Published | Jan 23, 2023, 5:00 PM IST

ರಿಷಬ್ ಕುಟುಂಬ ಮತ್ತು ಸ್ನೇಹಿತರ ಜೊತೆ ರಕ್ಷಿತ್ ಶೆಟ್ಟಿ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಆದರೆ ಸಾಲು  ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 777 ಚಾರ್ಲಿ ಸೂಪರ್ ಸಕ್ಸಸ್ ಬಳಿಕ ರಕ್ಷಿತ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ರಕ್ಷಿತ್ ಸದ್ಯ ಸಪ್ತಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಕ್ಷಿತ್ ಕಾಂತಾರ ಸ್ಟಾರ್, ಗೆಳೆಯ ರಿಷಬ್ ಶೆಟ್ಟಿ ಜೊತೆ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. 

Tap to resize

ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಗೆಳೆಯ ರಕ್ಷಿತ್‌ನ ಭೇಟಿಯಾಗಿದ್ದಾರೆ. ಕಾಂತಾರ ಸೂಪರ್ ಸಕ್ಸಸ್ ನ ಸಂತಸದಲ್ಲಿರುವ ರಿಷಬ್ ಶೆಟ್ಟಿ ಅದೇ ಖುಷಿಯಲ್ಲಿ ಗೆಳೆಯರ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಗೆಳೆಯರಾದ ಪ್ರಮೋದ್ ಶೆಟ್ಟಿ, ಸೀತಲ್ ಶೆಟ್ಟಿ ಜೊತೆ ಪ್ರವಾಸ ಸಂಭ್ರಮಿಸುತ್ತಿದ್ದಾರೆ. 

ಸುಂದರ ಫೋಟೋಗಳನ್ನು ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಕ್ಷಿತ್ ಕೈಯಲ್ಲಿ ರಿಷಬ್ ಶೆಟ್ಟಿ ಮುದ್ದು ಮಗಳು ಕುಳಿತಿದ್ದಾಳೆ. ರಿಷಬ್ ಮಗಳನ್ನು ಎತ್ತಿಕೊಂಡು ಕುಳಿತಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಸುಂದರ ಫೋಟೋಗಳನ್ನು ಶೇರ್ ಮಾಡಿ ರಿಷಬ್ ಶೆಟ್ಟಿ, ಅನ್ವೇಷಿಸದ ಅರಣ್ಯದ ನಿಗೂಢತೆ, 
ಹರಿಯುವ ನೀರಿನ ಪ್ರಶಾಂತತೆ, ಮಗುವಿನ ನಗುವಿನ ಧ್ವನಿ, ನನ್ನ ವಿಶೇಷ ಜನರ ಜೊತೆ ಇರುವುದು,  ಜೀವನದ ಅನೇಕ ಸಣ್ಣ ಸಂತೋಷಗಳು' ಎಂದು ಬರೆದುಕೊಂಡಿದ್ದಾರೆ. 

ರಿಷಬ್ ಶೆಟ್ಟಿ ಪೋಸ್ಟ್ ಗೆ ಅಭಿಮಾನಿಗಳು ಲೈಕ್ಸ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಹೊರತಾಗಿ ರಕ್ಷಿತ್ ಬೇರ ಫೋಟೋಗಳನ್ನು ಶೇರ್ ಮಾಡುವುದು ತೀರ ಅಪರೂಪ. ಇದೀಗ ರಕ್ಷಿತ್ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿದೆ. ರಕ್ಷಿತ್ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಪೋಸ್ಟ್ ಹಾಕುತ್ತೀರಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 

Latest Videos

click me!