ಕೊಡವ ಶೈಲಿಯಲ್ಲಿ ಮಿಂಚಿದ ಶುಭ್ರಾ ಅಯ್ಯಪ್ಪ ದಂಪತಿ; ಮದುವೆಯ ಸುಂದರ ಫೋಟೋಗಳು ಇಲ್ಲಿವೆ

Published : Jan 23, 2023, 02:51 PM IST

ನಟಿ ಶುಭ್ರಾ ಅಯ್ಯಪ್ಪ ಮದುವೆ ಬಳಿಕ ಕೊಡುವ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

PREV
16
ಕೊಡವ ಶೈಲಿಯಲ್ಲಿ ಮಿಂಚಿದ ಶುಭ್ರಾ ಅಯ್ಯಪ್ಪ ದಂಪತಿ; ಮದುವೆಯ ಸುಂದರ ಫೋಟೋಗಳು ಇಲ್ಲಿವೆ

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ, ಮಾಡಲ್ ಶುಭ್ರಾ ಅಯ್ಯಪ್ಪ ಬಹುಕಾಲದ ಗೆಳೆಯ ವಿಶಾಲ್ ಜೊತೆ ಇತ್ತೀಚಿಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶುಭ್ರಾ ಅಯ್ಯಪ್ಪ ಸಿನಿಮಾಗಿಂತ ಹೆಚ್ಚಾಗಿ ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದಾರೆ. 

26

ಜನವರಿ 18ರಂದು ನಡೆದ ಮದುವೆ ಸಂಭ್ರಮದಲ್ಲಿ ವಿಶಾಲ್ ಶಿವಪ್ಪ, ಶುಭ್ರಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.  ಅಂದಹಾಗೆ ಇಬ್ಬರ ಮದುವೆ ಕೂರ್ಗ್‌ನಲ್ಲಿ ನೆರವೇರಿತು. ಸಂಪ್ರದಾಯಬದ್ದವಾಗಿ ನಡೆದ ಮದುವೆ ಸಂಭ್ರಮದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. 

36

ಮದುವೆ ಬಳಿಕ ಶುಭ್ರಾ ಅಯ್ಯಪ್ಪ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೂರ್ಗ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಸೀರಿಯಲ್ಲಿ ಶುಭ್ರ ಕಾಣಿಸಿಕೊಂಡರೆ ವಿಶಾಲ್ ಬಿಳಿ ಬಣ್ಣದ ಕೊಡವ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

46

ಮದುವೆ ಬಳಿಕ ಕೊಡುವ ಶೈಲಿಯಲ್ಲಿ ಮಿಂಚಿದ ಜೋಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸಿಸುತ್ತಿದ್ದಾರೆ. ಶುಭ್ರಾ ಅಯ್ಯಪ್ಪ ವಿಶಾಲ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಫೋಟೋಶೂಟ್ ಮಾಡಿಸಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ಇಬ್ಬರ ಮದುವೆ ವಿಶೇಷವಾದ ಸ್ಥಳದಲ್ಲಿ ನಡೆದಿದೆ. 150 ವರ್ಷಗಳ ಹಳೆಯ ಮನೆ ದೊಡ್ಮನೆಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

56

ನಟಿ ಶುಭ್ರಾ ಅಯ್ಯಪ್ಪ ಫೋಟೋ ಶೇರ್ ಮಾಡಿ, 'ದೊಡ್ಡಮನೆಯಲ್ಲಿ ನಾನು ಮತ್ತು ವಿಶಾಲ್ ನಮ್ಮ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾದೆವು. ಇದು ಅವರ 150 ವರ್ಷಗಳ ಹಿಂದಿನ ಮನೆಯಾಗಿದೆ. ಈ ಸುಂದರ ಸ್ಥಳದಲ್ಲಿ ನಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಈ ಸಂತೋಷದಾಯಕ ಸಂದರ್ಭದ ಪ್ರೀತಿಯನ್ನು ನಾವು ಅನುಭವಿಸಿದ್ದೇವೆ' ಎಂದು ಹೇಳಿದ್ದರು. 

66

ಇತ್ತೀಚಿಗಷ್ಟೆ ತನ್ನ ಲವ್ ಸ್ಟೋರಿ ರಿವೀಲ್ ಮಾಡಿ ಮದುವೆ ವಿಚಾರ ಬಹಿರಂಗ ಪಡಿಸಿದ್ದರು ಶುಭ್ರಾ ಅಯ್ಯಪ್ಪ.  'ವಿಶಾಲ್ ಶಿವಪ್ಪ ಮತ್ತು ನಾನು ಮೊದಲು ಭೇಟಿಯಾಗಿದ್ದು 6 ವರ್ಷಗಳ ಹಿಂದೆ. ನನ್ನ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು ಎಂದು ನನ್ನ ಸ್ನೇಹತರ ಬಳಿ ಮಾಹಿತಿಗಾಗಿ ಬೇಡುತ್ತಿದ್ದರು' ಎಂದು ಶುಭ್ರಾ ಅಯ್ಯಪ್ಪ ಹೇಳಿಕೊಂಡಿದ್ದರು. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಶುಭ್ರಾ ಸದ್ಯ ರಾಮನ ಅವತಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ವಜ್ರಕಾಯ ಮತ್ತು ತಿಮ್ಮಯ್ಯ ಅಂಡ್ ತಮ್ಮಯ್ಯ ಸಿನಿಮಾದಲ್ಲಿ ನಟಿಸಿದ್ದರು. ಕನ್ನಡ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.  
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories