ಬಾನ ದಾರಿಯಲ್ಲಿ ಸೂರ್ಯ ಹಾಡು ಕೇಳಿಲ್ಲ ಅಂದ್ರೆ ನನ್ನ ಮಗ ಊಟನೇ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ

Published : Oct 23, 2022, 10:16 AM IST

ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮಾತನಾಡುತ್ತ ತಮ್ಮ ಮಗ ಅವ್ಯಾನ್ ದೇವ್ ಬಗ್ಗೆ ಹೇಳಿದ ನಿಖಿಲ್...

PREV
17
ಬಾನ ದಾರಿಯಲ್ಲಿ ಸೂರ್ಯ ಹಾಡು ಕೇಳಿಲ್ಲ ಅಂದ್ರೆ ನನ್ನ ಮಗ ಊಟನೇ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ

ಇಡೀ ಭಾರತೀಯ ಚಿತ್ರರಂಗವೇ ಪುನೀತ್ ರಾಜ್‌ಕುಮಾರ್ ಗಂಧದ ಗುಡಿ ಸಿನಿಮಾ ಪ್ರೀ- ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪುನೀತ ಪರ್ವ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು.

27

ವೇದಿಕೆ ಮೇಲೆ ಡಾ.ರಾಜ್‌ಕುಮಾರ್ ಕುಟುಂಬ, ಅಪ್ಪು ಮಾಡಿರುವ ಸಮಾಜ ಸೇವೆ ಮತ್ತು ಸಿನಿಮಾಗಳ ಬಗ್ಗೆ ಮಾತನಾಡಿದ ನಿಖಿಲ್ ತಮ್ಮ ಮಗ ಅವ್ಯಾನ್ ದೇವ್‌ನ ಬಗ್ಗೆ ಹೇಳಿದ್ದಾರೆ.

37

 'ನನ್ನ ಮಗನಿಗೆ ಈಗ ಒಂದು ವರ್ಷ ಆಗಿದೆ ಅವನು ಬಾನ ದಾರಿಯಲ್ಲಿ ಸೂರ್ಯ  ಸಾಂಗ್ ಕೇಳದೆ ಊಟನೇ ಮಾಡಲ್ಲ ಅದು ಅಪ್ಪು ಸರ್ ಹಾಡು. ಅಪ್ಪು ಸರ್ ಬಂದ್ರೆ ಏನೋ ಒಂದು ಖುಷಿ ನನ್ನ ಮಗನಿಗೆ' ಎಂದು ನಿಖಿಲ್ ಹೇಳಿದ್ದಾರೆ.

47

ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಬೇಕು ಎಂದು ಅಶ್ವಿನಿ ಅಕ್ಕ ಅವರು ಕರೆ ಮಾಡಿದ್ದರು. ಆಗ ನಾನು ಅವರಿಗೆ ಒಂದೇ ಮಾತು ಹೇಳಿದೆ' ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಇದು ನೀವು ಕರೆದಿಲ್ಲ ಅಂದ್ರೂ ನಾನು ಬರ್ತಿದ್ದೆ. ಇದು ನನ್ನ ಕರ್ತವ್ಯ' ಎಂದು ನಿಖಿಲ್ ಮಾತನಾಡಿದ್ದಾರೆ.

57

'ರಾಘವೇಂದ್ರ ರಾಜ್‌ಕುಮಾರ್ ಅವರ ಮಗ ಗುರು ಅವರು ಮನೆಗೆ ಬಂದು ಕರೆದರು. ಥ್ಯಾಂಕ್ಯೂ ಗುರು ಅವರೇ. ದಾನ ಧರ್ಮ ಅನ್ನೋದು ಅಪ್ಪು ಸರ್ ಏನ್ ಮಾಡಿಕೊಂಡು ಬಂದಿದ್ದಾರೆ ಅದರಿಂದ ನಾವು ಒಂದು ವಿಚಾರ ತಿಳಿದುಕೊಳ್ಳಬೇಕು'

67

'ಒಂದು ಕೈಯಲ್ಲಿ ಕೊಟ್ಟಿದನ್ನು ಇನ್ನೊಂದು ಕೈಯಿಗೆ ಗೊತ್ತಾಗಬಾರದು ಅಂತಾರೆ ಆ ರೀತಿ ನಡೆದುಕೊಂಡು ಬಂದ ದೇವತಾ ಮನುಷ್ಯ ಅಂದ್ರೆ ಅಪ್ಪು ಸರ್. ಅಪ್ಪು ಸರ್ ನಮ್ಮ ಜೊತೆನೇ ಇದ್ದಾರೆ.' ಎಂದಿದ್ದಾರೆ ನಿಖಿಲ್.

77

ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಸೆಪ್ಟೆಂಬರ್ 24,2021ರಲ್ಲಿ ಕುಟುಂಬಕ್ಕೆ ಮುದ್ದು ಕೃಷ್ಣನನ್ನು ಬರ ಮಾಡಿಕೊಂಡರು. ಅವ್ಯಾನ್ ದೇವ್ ಒಂದು ವರ್ಷದ ಹುಟ್ಟು ಹಬ್ಬವನ್ನು ಕುಟುಂಬಸ್ಥರು ಸರಳವಾಗಿ ಆಚರಿಸಿದ್ದರು.

Read more Photos on
click me!

Recommended Stories