ಬಾಡಿಗೆ ಮನೆಯಿಂದ ಸ್ವಂತ ಮನೆಗೆ; ಗೃಹಪ್ರವೇಶದ ಸಂಭ್ರಮದಲ್ಲಿ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ!

First Published | Jan 18, 2024, 5:02 PM IST

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿರುವ ಸಂಯುಕ್ತಾ ಹೆಗ್ಡೆ ಹೊಸಮನೆಗೆ ಕಾಲಿಟ್ಟಿದ್ದು, ಗೃಹಪ್ರವೇಶದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. 
 

ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಮಾತಿನ ಮಲ್ಲಿ ಕಿರಿಕ್ ಬೆಡಗಿ ಅಂತಾನೆ ಫೇಮಸ್ ಆಗಿರುವ ಸಂಯುಕ್ತಾ ಹೆಗ್ಡೆ ಇದೀಗ ಹೊಸ ಮನೆಗೆ ಕಾಲಿಟ್ಟಿದ್ದು, ತಮ್ಮ ಕಷ್ಟದ ದಿನಗಳನ್ನು ನೆನೆದುಕೊಂಡು, ಸದ್ಯ ಗೃಹಪ್ರವೇಶದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 

ಈಗಷ್ಟೇ ಹೊಸ ಮನೆ ಗೃಹಪ್ರವೇಶ ನಡೆಸಿರುವ ಸಂಯುಕ್ತಾ ಹೆಗ್ಡೆ (Samyukta Hegde)ಸೋಶಿಯಲ್ ಮೀಡಿಯಾದಲ್ಲಿ ಹೊಸ ಮನೆಯಲ್ಲಿ ಮಾಡಿದ ಧಾರ್ಮಿಕ ಪೂಜೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಾವು ನಡೆದು ಬಂದ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 

Tap to resize

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂಯುಕ್ತಾ, ಹೊಸ ಮನೆಗೆ ಕಾಲಿಟ್ಟಿರುವ ಈ ಕ್ಷಣ, ಹಳೆಯ ನೆನಪುಗಳ ಪ್ರವಾಹ ಮತ್ತೆ ಹರಿದು ಬರುತ್ತಿದೆ, 1 ಬಿಚ್‌ಕೆ ಬಾಡಿಗೆ ಮನೆಯಲ್ಲಿ 4 ಜನರು ಒಂದು ಸ್ವಂತ ಮನೆ ಹೊಂದಿರಬೇಕು ಅಂತ ಕನಸು ಕಾಣುತ್ತ ಒಟ್ಟಿಗೆ ಬಾಳುತ್ತಿದ್ದೆವು.

ಪ್ರತಿ ಕಣ್ಣೀರು, ಪ್ರತಿ ಯಶಸ್ಸು, ಮತ್ತು ಈಗ ಈ ಮನೆ ಎಲ್ಲವನ್ನೂ ಸಾಧಿಸೋಕೆ ಸಾಧ್ಯವಾಗಿರೋದಕ್ಕೆ ಈ ಖುಷಿಯನ್ನು ನೀಡಿದ್ದಕ್ಕೆ ಯುನಿವರ್ಸ್ ಗೆ ಧನ್ಯವಾದಗಳು. ನನ್ನದೇ ಎಂದು ಕರೆಯಲು ಸ್ವಲ್ಪ ಸ್ಥಳವನ್ನು ಹೊಂದಿರೋದರಿಂದ ಸಮಸ್ಯೆಗಳು ಖಂಡಿತವಾಗಿ ಮರೆಯಾಗುತ್ತವೆ ಎಂದು ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ.

ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿರುವ ಸಂಯುಕ್ತಾ ಹೆಗ್ಡೆಯವರಿಗೆ ಕುಟುಂಬದವರು, ಸ್ನೇಹಿತರು, ಸಿನಿಮಾ ರಂಗದ ಸ್ನೇಹಿತರು ಎಲ್ಲರೂ ಶುಭಾಷಯ ಕೋರಿದ್ದಾರೆ. ಸದ್ಯ ಈ ಬೆಡಗಿ ಸಾಮಾನುಗಳನ್ನೆಲ್ಲಾ ಅನ್ ಪ್ಯಾಕ್ ಮಾಡೊದ್ರಲ್ಲಿ ಬ್ಯುಸಿಯಾಗಿದ್ದಾರಂತೆ. 

ಶಿರಸಿಯ ಹುಡುಗಿ ಸಂಯುಕ್ತಾ ಹೆಗ್ಡೆ ಹುಟ್ಟಿದ್ದು ಬೆಳದದ್ದು ಎಲ್ಲವೂ ಬೆಂಗಳೂರಲ್ಲೆ. ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಇವರು ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು, ಮೊದಲ ಸಿನಿಮಾ ಕೊಟ್ಟ ಯಶಸ್ಸು ಬೇರೆ ಯಾವ ಸಿನಿಮಾದಿಂದಲೂ ಸಿಕ್ಕಿಲ್ಲ. 

ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ (Bigg Boss Kannada Season 5)ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಭಾಗವಹಿಸಿ, ಅಲ್ಲಿ ಕಿರಿಕ್ ಮಾಡಿಕೊಂಡೇ ಹೊರ ಹೋಗಿದ್ದರು. ಇನ್ನು ಹಿಂದಿ ಕಿರುತೆರೆಯ ಫೇಮಸ್ ಶೋಗಳಾದ ಎಂಟಿವಿ ರೋಡೀಸ್ 15, ಎಂಟಿವಿ ಸ್ಲಿಟ್ ವಿಲ್ಲಾ 11 ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. 

ನಟನೆಯ ಜೊತೆಗೆ ಫಿಟ್ನೆಸ್ (fitness) ಬಗ್ಗೆ ತುಂಬಾನೆ ಡೆಡಿಕೇಟ್ ಆಗಿರುವ ಸಂಯುಕ್ತಾ ಹೆಗ್ಡೆ ಸಿಕ್ಸ್ ಪ್ಯಾಕ್, ಮಸಲ್ ಬಿಲ್ಡ್ ಮಾಡಿ ಸೈ ಎನಿಸಿಕೊಂಡಿದ್ದರು. ಅಲ್ಲದೇ ಅದ್ಭುತ ಡ್ಯಾನ್ಸರ್ ಆಗಿರುವ ಬೆಡಗಿ ಹಲವು ರೀತಿಯ ಡ್ಯಾನ್ಸ್ ಫಾರ್ಮ್ ಗಳಲ್ಲಿ ನಿಸ್ಸೀಮರಾಗಿದ್ದಾರೆ. 

Latest Videos

click me!