24 ದಿನಗಳ ಬಳಿಕ ಘೋಷಣೆಯಾದ ಉದಯೋನ್ಮುಖ ಕನ್ನಡ ನಟಿಯ ಮರಣದ ಸುದ್ದಿ, ಗಿಣಿಶಾಸ್ತ್ರದಿಂದ ಸಾವಿನ ಸುಳಿವು ಸಿಕ್ಕಿತ್ತಾ?

Published : Jan 18, 2024, 04:17 PM IST

ಆಕೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ 17 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಎರಡೇ ವರ್ಷದಲ್ಲಿ ಹಲವು ಹಿಟ್‌ ಸಿನೆಮಾಗಳನ್ನು ನೀಡಿದರು. ಆಕೆ ಓರ್ವ ಸೌಂದರ್ಯದ ಗಣಿಯಾಗಿದ್ದಳು. ಆಕೆಯ ಸಾವು ಹತ್ಯೆಯೋ? ಆತ್ಮಹತ್ಯೆಯೋ? ಎಂಬ ಬಗ್ಗೆ ಇಂದಿಗೂ ಉತ್ತರ ನಿಗೂಢವಾಗಿದೆ.

PREV
110
24 ದಿನಗಳ ಬಳಿಕ ಘೋಷಣೆಯಾದ ಉದಯೋನ್ಮುಖ ಕನ್ನಡ ನಟಿಯ ಮರಣದ ಸುದ್ದಿ, ಗಿಣಿಶಾಸ್ತ್ರದಿಂದ ಸಾವಿನ ಸುಳಿವು ಸಿಕ್ಕಿತ್ತಾ?

ಸೂತ್ರಧಾರ, ಪ್ರೇಮ ರಾಗ ಹಾಡು ಗೆಳತಿ, ಬಾಳಿನ ದಾರಿ, ಬಾಳಿದ ಮನೆ, ಅಮೃತವರ್ಷಿಣಿ, ನೀ ಮುಡಿದಾ ಮಲ್ಲಿಗೆ ಹೀಗೆ ಹಲವು ಹಿಟ್‌ ಸಿನೆಮಾಗಳಲ್ಲಿ ನಟಿಸಿರುವುದು ಮುದ್ದಾದ ನಟಿ ನಿವೇದಿತಾ ಜೈನ್.  ಸತತ 24 ದಿನಗಳ ಕಾಲ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಐಸಿಯು ಬೆಡ್‌ನಲ್ಲಿ ಕೋಮಾದಲ್ಲಿದ್ದ ನಟಿ ನಿವೇದಿತಾ ಜೈನ್ ಅನ್ನು ಜೂನ್ 10 ರಂದು ನಿಧನ ಎಂದು ಘೋಷಿಸಲಾಯಿತು.

210

ಅತ್ಯಂತ ಸುಂದರಿಯಾಗಿದ್ದ ಆಕೆ ಸಾಯುವ ವೇಳೆಗೆ ಮುಖ ವಿಕಾರಗೊಂಡು ಕೈ, ಕಾಲುಗಳು ಮುರಿದುಕೊಂಡು ವಿಚಿತ್ರವಾಗಿದ್ದರು. ರಾಜರಾಜೇಶ್ವರಿ ನಗರದಲ್ಲಿ ದೊಡ್ಡ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಿದ್ದ ನಟಿ, ಮೇ 17, 1998 ರಂದು ಅದೇ ಮನೆಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿದ್ದರು. ಘಟನೆ ನಡೆದು 23ನೇ ದಿನ ಆಕೆ ಚೇತರಿಸಿಕೊಳ್ಳುತ್ತುದ್ದಾಳೆ ಎಂದು ಸುದ್ದಿಯಾಗಿತ್ತು. ಆದರೆ 24 ನೇ ದಿನಕ್ಕೆ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯ್ತು.

310

ನಿವೇದಿತ ಜೈನ್ ಮೃತ ಎಂದು ಘೋಷಿಸುವ ಒಂದು ದಿನ ಹಿಂದಷ್ಟೆ ನಿವೇದಿತಾ ಗುಣಮುಖರಾಗುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದು ಸುದ್ದಿಯಾಗಿತ್ತು. ಆದರೆ ಮರುದಿನ ನಿಧನ ಎಂದು ಘೋಷಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆಕೆಯ ಸಾವಿನ ಸುತ್ತ ಎದ್ದಿರುವ ಅನುಮಾನದ ಹುತ್ತ 26 ವರ್ಷವಾದರೂ ಕರಗಿಲ್ಲ. ಇಂದಿಗೂ ಆ ಸಾವು ನಿಗೂಢವಾಗಿದೆ.

410

ನಿವೇದಿತಾ ಜೈನ್ ಸಾವಿನ ಬಗ್ಗೆ ಅನುಮಾನ ಬರಲು ಮುಖ್ಯ ಕಾರಣ ಅವರ ಕುಟುಂಬದವರು ಕೊಟ್ಟಿದ್ದ ಸ್ಪಷ್ಟತೆ ಇಲ್ಲದ ಹೇಳಿಕೆಗಳು. 'ನಿವೇದಿತಾ ಡಾನ್ಸ್ ಮಾಡುವಾಗ ಮಹಡಿಯಿಂದ ಕೆಳಗೆ ಬಿದ್ದರು' ಎಂದು ಮೊದಲಿಗೆ ಹೇಳಲಾಯಿತು. ಆ ನಂತರ 'ನಿವೇದಿತಾ ಮಿಸ್‌ ಇಂಡಿಯಾಗೆ ತಯಾರಿ ನಡೆಸುತ್ತಾ ಕ್ಯಾಟ್ ವಾಕ್ ಅಭ್ಯಾಸ ಮಾಡುವಾಗ ಮಹಡಿಯಿಂದ ಬಿದ್ದರು' ಎನ್ನಲಾಯಿತು. ಇನ್ನು ಕೆಲವರು ಆಕೆ ಕುಡಿದು ಜ್ಞಾನ ಇಲ್ಲದೆ ಬಿದ್ದಳು ಎಂದು ಸುದ್ದಿ ಹಬ್ಬಿಸಿದ್ದರು. ಇವೆಲ್ಲವೂ ನಿವೇದಿತಾ ಸಾವಿನ ಬಗ್ಗೆ ಅನುಮಾನ ಮೂಡಿಸಿದವು.
 

510

ಇನ್ನು ಕೆಲವರು ಆಕೆ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿಕೆ ನೀಡಿದ್ದರು. ಆದರೆ ಈ ಸುದ್ದಿಯನ್ನು ಆಕೆಯ ಕುಟುಂಬ ತಳ್ಳಿ ಹಾಕಿತು. ಇದೆಲ್ಲದರ ನಡುವೆ ನಿವೇದಿತಾ ಜೈನ್ ಸಾವಿನ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಗಳ ಹೆಸರೂ ಸಹ ಕೇಳಿಬಂತು. ನಿವೇದಿತಾ ಜೈನ್ ಮಹಡಿಯಿಂದ ಬಿದ್ದ ದಿನ ಐಶಾರಾಮಿ ಬಿಳಿ ಕಾರೊಂದು ವೇಗವಾಗಿ ನಿವೇದಿತಾ ಮನೆ ಮುಂದಿನಿಂದ ಹೋಯಿತು. ಅದು ಆಗಿನ ಸಿಎಂ ಅವರಿಗೆ ಸೇರಿದ್ದ ಕಾರು ಎಂದು ಗಾಳಿ ಸುದ್ದಿ ಹರಿದಾಡಿತು. ಆದರೆ ಯಾವುದೂ ಸಹ ನಿರೂಪಿತವಾಗಲಿಲ್ಲ.
 

610

ನಿವೇದಿತಾ ಜೈನ್ ಸಾವಿನ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಗಳ ಹೆಸರೂ ಸಹ ಕೇಳಿಬಂತು. ನಿವೇದಿತಾ ಜೈನ್ ಮಹಡಿಯಿಂದ ಬಿದ್ದ ದಿನ ಐಶಾರಾಮಿ ಬಿಳಿ ಕಾರೊಂದು ವೇಗವಾಗಿ ನಿವೇದಿತಾ ಮನೆ ಮುಂದಿನಿಂದ ಹೋಯಿತು. ಅದು ಆಗಿನ ಸಿಎಂ ಅವರಿಗೆ ಸೇರಿದ್ದ ಕಾರು ಎಂದು ಗಾಳಿ ಸುದ್ದಿ ಹರಿದಾಡಿತು. ಇದರ ಜೊತೆಗೆ ಸಿಎಂ ಗೆ ಸೇರಿದ ಅತ್ಯಾಪ್ತರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು.  ಆಕೆಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿ 2ನೇ ಮಹಡಿಯಿಂದ ಎಸೆದು ಅಪಘಾತ ಅಥವಾ ಆತ್ಮಹತ್ಯೆ ಎಂದು ಬಿಂಬಿಸಲಾಯ್ತು ಎಂದು ಕೂಡ ಸುದ್ದಿ ಹಬ್ಬಿತು. ಆಕೆಯ ಸಾವಿನ ಬಗೆಗಿನ ಎಲ್ಲಾ ಸುದ್ದಿಯೂ ಇಂದಿಗೂ ಗಾಳಿ ಸುದ್ದಿಯಾಗಿಯೇ ಉಳಿದಿದೆ.  

710

17 ಮೇ 1979ರಂದು ಜನಿಸಿದ ನಿವೇದಿತಾ ಜೈನ್ ಬೆಂಗಳೂರಿನಲ್ಲಿ ಹುಟ್ಟಿದಾಕೆ. ಮಾಡೆಲಿಂಗ್‍ ಕ್ಷೇತ್ರದಲ್ಲಿ ಹೆಸರು ಮಾಡಿದ್ದಳು ಅಷ್ಟೇ ಅಲ್ಲ ಆ ಕಾಲದಲ್ಲೇ ಮಿಸ್ ಬೆಂಗಳೂರು ಪಟ್ಟ ಪಡೆದ ಅದ್ಭುತ ನಟಿ. ಆಕೆಯನ್ನು ಬಣ್ಣದ ಬದುಕು ಸೆಳೆಯಿತು.  1996 ರಲ್ಲಿ ಶಿವಮಣಿ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್  ಪ್ರಮುಖ ಪಾತ್ರದಲ್ಲಿ ಇದ್ರದ "ಶಿವಸೈನ್ಯ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಆವಾಗಲೇ ನಿವೇದಿತಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು.  ಕನ್ನಡದ ಸಿನಿಮಾಗಳ ಜತೆಗೆ ತೆಲುಗು, ತಮಿಳಿನಲ್ಲೂ ನಾಯಕಿಯಾದರು. 

810

ನಿವೇದಿತಾ ಅತ್ಯಂತ ಕಡಿಮೆ ಸಮಯದಲ್ಲಿ ಎಷ್ಟು ಫೇಮಸ್‌ ಆಗಿದ್ದರು ಎಂದರೆ ಆಗಿನ ಕಾಲದ ಬಹುತೇಕ ಸ್ಟಾರ್‌ ನಟರು ಮತ್ತು ರಾಜಕಾರಣಿಗಳ ಜೊತೆಯೂ ಆಕೆಯ ಹೆಸರು ತಳುಕು ಹಾಕಿಕೊಂಡಿತ್ತು. ಆದ್ರೆ ನಿವೇದಿತಾ ಜೈನ್‌ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ  ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡಿರುವ ರೀತಿಯಲ್ಲಿ ಇದ್ದರು.  ಆಗಿನ ಮುಖ್ಯಮಂತ್ರಿಗಳ ಜೊತೆಯೂ ನಿವೇದಿತಾ ಜೈನ್‌ ಹೆಸರು ಸೇರಿಕೊಂಡು ಪ್ರತಿಯೊಬ್ಬರ ಬಾಯಿಗೂ ಆಹಾರವಾಗಿದ್ದರು. 

910

ಹೀಗಿರುವಾಗ ನಟಿ ನಿವೇದಿತಾಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತೇ ಎಂಬ ವಿಚಾರವಾಗಿ ಸ್ಯಾಂಡಲ್‌ವುಡ್‌ನ ನಿರ್ದೇಶಕ ರಘುರಾಮ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. ಪ್ರೇಮ ರಾಗ ಹಾಡು ಗೆಳತಿ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ನಡೆದ ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದರು. 

1010

ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ಪ್ರೇಮ ರಾಗ ಹಾಡು ಗೆಳತಿ ಚಿತ್ರದ ಶೂಟಿಂಗ್‌ ಕೊಲ್ಲೂರು ಆಸುಪಾಸಿನಲ್ಲಿ ನಡೆಯುತ್ತಿತ್ತು. ಆಗ ಅಲ್ಲಿಗೆ ಗಿಣಿ ಜ್ಯೋತಿಷಿ ಬಂದಿದ್ದ. ಆಗ ನಟಿ ಜೈನ್ ಗಿಣಿ ಶಾಸ್ತ್ರ ಕೇಳಿಸಿಕೊಂಡಿದ್ದರು. ಆಗ ಆ ಗಿಳಿ ಶಾಸ್ತ್ರಜ್ಞ, ನಟಿಯ ಕೈ ರೇಖೆಗಳನ್ನೆಲ್ಲ ನೋಡಿ, ನಿಮ್ಮ ಬಳಿ ಹೆಚ್ಚು ಸಮಯ ಇಲ್ಲ, ನಿಮ್ಮ ಆಸೆ ಕನಸುಗಳು ಏನೆನಿವೆಯೋ ಅವೆಲ್ಲವನ್ನೂ ಬೇಗ ಮುಗಿಸಿಕೊಳ್ಳಿ ಎಂದಿದ್ದರಂತೆ. ಈ ವಿಚಾರವನ್ನು ಚಿಂತೆಯಲ್ಲೇ ತಮ್ಮ ಆತ್ಮೀಯರ ಬಳಿಯೂ ಹೇಳಿಕೊಂಡಿದ್ದರಂತೆ.  ಹಿರಿಯ ಪತ್ರಕರ್ತ ದಿವಗಂತ ವಿಜಯ ಸಾರಥಿ ಅವರಿಗೂ ಈ ವಿಷಯ ತಲುಪಿಸಿದ್ದರು. ಪತ್ರಿಕೋದ್ಯಮದ ದಿನಗಳಲ್ಲಿ ಇದೇ ಘಟನೆಯನ್ನು ವಿಜಯ ಸಾರಥಿ ರಘುರಾಮ್‌ ಬಳಿ ಹಂಚಿಕೊಂಡಿದ್ದರು ಎಂದು ನಿರ್ದೇಶಕ ರಘುರಾಮ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories