ನಿಮ್ಮ ಎತ್ತರ ಐದು ಅಡಿ, ಚಪ್ಪಲಿ ಮೂರು ಅಡಿ: ಟಗರು ಪುಟ್ಟಿ ಮಾನ್ವಿತಾ ಫೋಟೋಶೂಟ್‌ ನೋಡಿ ಕಾಲೆಳೆದ ನೆಟ್ಟಿಗ!

First Published | Jan 18, 2024, 9:15 AM IST

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಟಗರು ಬ್ಯೂಟಿ ಮಾನ್ವಿತಾ ಕಾಮತ್‌ ತಮ್ಮ ಹೊಸ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದಾರೆ. ಸಖತ್‌ ಹಾಟ್‌ ಹಾಗೂ ಬೋಲ್ಡ್‌ ಲುಕ್‌ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ. 

ಕೆಂಡಸಂಪಿಗೆ ಚಿತ್ರದ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟ ಮಾನ್ವಿತಾ ಕಾಮತ್‌ ಸ್ಯಾಂಡಲ್‌ವುಡ್‌ನಲ್ಲಿ ಮಾನ್ವಿತಾ ಕಾಮತ್ ಟಗರು ಪುಟ್ಟಿ ಅಂತಲೇ ಗುರುತಿಸಿಕೊಳ್ತಾರೆ. ಟಗರು ಸಿನಿಮಾದಲ್ಲಿ ಒಂದು ಸ್ಪೆಷಲ್ ರೋಲ್‌ ಮಾಡಿದ್ದರು. ಈ ರೋಲ್ ಅನ್ನ ಜನ ತುಂಬಾನೆ ಮೆಚ್ಚಿಕೊಂಡಿದ್ದರು. 

ಮಾನ್ವಿತಾ ಕಾಮತ್ ಸಿನಿಮಾದ ಜೊತೆಗೆ ಓದು ಕೂಡ ಮುದುವರೆಸಿದ್ದಾರೆ. ಈ ನಡುವೆ ಸ್ಪೆಷಲ್ ಫೋಟೋ ಶೂಟ್‌ಗಳಲ್ಲಿ ಮಾನ್ವಿತಾ ಕಾಮತ್ ಕಾಣಿಸಿಕೊಳ್ಳುತ್ತಾರೆ. ಸದ್ಯ ಈ ಕರಾವಳಿ ಸುಂದರಿಯ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. 

Tap to resize

ಮಾನ್ವಿತಾ ಕಾಮತ್ ತೊಟ್ಟಿರೋ ಡ್ರೆಸ್ ಸಖತ್ ಮಿಂಚುತ್ತಿದೆ. ಸಿಲ್ವರ್ ಕಲರ್ ಆಗಿರೋದ್ರಿಂದ ಅದು ಇನ್ನಷ್ಟು ಹೊಳೆಯುತ್ತಿದೆ. ಹೊಳೆಯೋ ಬಣ್ಣದ ಈ ಡ್ರೆಸ್ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದೆ. ನೋಡುವ ಕಂಗಳು ಒಮ್ಮೆ ರೋಮಾಂಚನಗೊಂಡ್ರು ಆಶ್ಚರ್ಯವಿಲ್ಲ

ಮಾನ್ವಿತಾ ಹಂಚಿಕೊಂಡಿರುವ ಒಂದು ಫೋಟೋ ಶೂಟ್‌ನಲ್ಲಿ ಹೈ ಹೀಲ್ಡ್ ಹಾಕಿಕೊಂಡಿದ್ದಾರೆ. ಇವುಗಳನ್ನ ನೋಡಿದ ನೆಟ್ಟಿಗನೊಬ್ಬ, ನಿಮ್ಮ ಎತ್ತರ ಐದು ಅಡಿ, ಚಪ್ಪಲಿ ಮೂರು ಅಡಿ ಅಂತ ಕಾಮೆಂಟ್ ಮಾಡುವ ಮೂಲಕ ಕಾಲೆಳಿದಿದ್ದಾನೆ. ಉಳಿದ ನೆಟ್ಟಿಗರು, ಸೂಪರ್ ಟಗರು ಪುಟ್ಟಿ, ದೇವಲೋಕದ ಅಪ್ಸರೆ ಎಂದು ಕಾಮೆಂಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ನಟಿಸುತ್ತಿರುವ ಕ್ಯಾಪ್ಚರ್‌ ಚಿತ್ರದ ಬಳಗಕ್ಕೆ ನಟಿ ಮಾನ್ವಿತಾ ಕಾಮತ್‌ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾಗೆ ಮಗಳಾಗಿ ನಟಿಸಿದ್ದಾರೆ.

ಕ್ಯಾಪ್ಚರ್ ಚಿತ್ರ ಹಾರರ್ ಶೈಲಿಯಲ್ಲಿ ಮೂಡಿಬರುತ್ತಿರುವ ಸಿನಿಮಾ. ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಮಾನ್ವಿತಾ ಕಾಮತ್ ಈ ಚಿತ್ರದ ಕೆಲಸ ಪೂರ್ಣಗೊಳಿಸಿದ್ದು, ಚಿತ್ರಕ್ಕೆ ಲೋಹಿತ್  ಆಕ್ಷನ್ ಕಟ್ ಹೇಳಿದ್ದಾರೆ.

ಪ್ರಿಯಾಂಕಾ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಇಷ್ಟವಾಯಿತು. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು ಎಂದು ಮಾನ್ವಿತಾ ಈ ಹಿಂದೆ ಹೇಳಿದ್ದರು.

Latest Videos

click me!