ಮುಜುಗರದಲ್ಲಿ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕಿದ ಹೀರೋ; 10 ಸಲ ಮುಖ ತೊಳೆದುಕೊಂಡೆ ನಟಿ ಸದಾ

Published : May 01, 2024, 11:58 AM ISTUpdated : May 01, 2024, 12:01 PM IST

ಸೂಪರ್ ಹಿಟ್ ಸೀನ್ ಆಗಬೇಕು ಎಂದು ನಿರ್ದೇಶಕರ ಒತ್ತಾಯಕ್ಕೆ ಆ ಒಂದು ಸೀನ್ ಚಿತ್ರೀಕರಣ ಮಾಡಿದ ನಟಿ ಸದಾ...ಏನಿದು ಸ್ಟೋರಿ... 

PREV
18
ಮುಜುಗರದಲ್ಲಿ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕಿದ ಹೀರೋ; 10 ಸಲ ಮುಖ ತೊಳೆದುಕೊಂಡೆ ನಟಿ ಸದಾ

ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟಿ ಸದಾ ಮೊದಲ ಸಲ ತಮ್ಮ ಜೀವನದ ರೋಚಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. 

28

ಮೋನಾಲಿಶಾ, ಮೋಹಿನಿ,  ಹುಡುಗ ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ,  ಅಕರ್ಶಕಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸದಾ ನಟಿಸಿದ್ದಾರೆ.

38

ತನಗೆ ಒಂಚೂರು ಇಷ್ಟವಿಲ್ಲದ ದೃಶ್ಯವೊಂದರಲ್ಲಿ ನಟಿಸುವಂತೆ ನಿರ್ದೇಶಕರು ಒತ್ತಾಯ ಹಾಕಿದ್ದರು ಎಂದು ಸದಾ ಹೇಳಿದ್ದಾರೆ. ಸಾಕಷ್ಟು ಹೀರೋ ಹಾಗೂ ಹೀರೋಯಿನ್‌ರನ್ನು ಸ್ಟಾರ್‌ ಆಗಿ ಮಾಡಿದ ನಿರ್ದೇಶಕ ತೇಜಾ ವಿರುದ್ಧ ಸದಾ ಇಂಥದ್ದೊಂದು ಆರೋಪ ಮಾಡಿದ್ದಾರೆ. 

48

ಸದಾ ಅವರು ನಟಿಸಿದ್ದ ಮೊಟ್ಟಮೊದಲ ಚಿತ್ರ ಜಯಂನ ನಿರ್ದೇಶಕ ತೇಜ. ಈ ಚಿತ್ರದಲ್ಲಿ ನಿತಿನ್‌ ಹೀರೋ ಆಗಿದ್ದರು. ಆಲ್‌ ಟೈಮ್‌ ಬ್ಲಾಕ್‌ಬಸ್ಟರ್‌ ಆಗಿದ್ದ ಈ ಸಿನಿಮಾದ ಒಂದು ದೃಶ್ಯ ಈಗಲೂ ತಮಗೆ ಕಾಡುತ್ತಿದೆ ಎಂದಿದ್ದಾರೆ ಸದಾ.

58

ಚಿತ್ರದ ಒಂದು ದೃಶ್ಯದಲ್ಲಿ ಸದಾ, ನಿತಿನ್‌ ಹಾಗೂ ಗೋಪಿಚಂದ್‌ ಮೂವರು ಇದ್ದರು. ಈ ಚಿತ್ರದಲ್ಲಿ ಗೋಪಿಚಂದ್‌ ವಿಲನ್‌ ಆಗಿ ನಟಿಸಿದ್ದರು. ಒಂದು ಸಮಯದಲ್ಲಿ ನನಗೆ ಒಂಚೂರು ಇಷ್ಟವಿಲ್ಲದ ದೃಶ್ಯದಲ್ಲಿ ನಟಿಸಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಸದಾ ಹೇಳಿದ್ದಾರೆ. 

68

ಒಂದು ಸೀನ್‌ನಲ್ಲಿ ಗೋಪಿಚಂದ್‌ ನನ್ನ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕುತ್ತಾರೆ. ಚಿತ್ರದ ಚಿತ್ರೀಕರಣ ಮಾಡುವಾಗ ಈ ದೃಶ್ಯದಲ್ಲಿ ನಾನು ನಟಿಸೋದೇ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದಲ್ಲದೆ, ಬೇಕಿದ್ದಲ್ಲಿ ನಾನು ಚಿತ್ರದಿಂದ ಬೇಕಾದರೆ ಹೊರಹೋಗಲು ಸಿದ್ಧ ಎಂದಿದ್ದರು.

78

ಆದರೆ, ನಿರ್ದೇಶಕರಾಗಿದ್ದ ತೇಜ ಯಾವುದನ್ನೂ ಕೇಳಲಿಲ್ಲ.  ಈ ದೃಶ್ಯವೇ ಚಿತ್ರದಲ್ಲಿ ಹೈಲೈಟ್‌ ಆಗಿರಲಿದೆ ಎಂದಿದ್ದರು. ಇನ್ನು ಗೋಪಿಚಂದ್‌ ಅವರಿಗೂ ಈ ದೃಶ್ಯದಲ್ಲಿ ನಟಿಸಲು ಇಷ್ಟವಿರಲಿಲ್ಲ. ಅವರು ಕೂಡ ನಿರ್ದೇಶಕರಿಗೆ ಹೇಳಿದರು.

88

ಆದರೆ, ಅವರ ಮಾತನ್ನೂ ತೇಜ ಕೇಳಿರಲಿಲ್ಲ. ಆ ದೃಶ್ಯದ ಬಳಿಕ ನಾನು ಬಹುಶಃ 10 ಸಾರಿ ಮುಖ ತೊಳೆದುಕೊಂಡಿದ್ದೆ. ಮನಸ್ಸಿಗೆ ಸಾಕಷ್ಟು ನೋವು ಕೂಡ ಆಗಿತ್ತು ಎಂದಿದ್ದಾರೆ.

Read more Photos on
click me!

Recommended Stories