ಒಂದೋ ಖುಷಿಯಾಗಿರ್ಬೇಕು ಇಲ್ದಿದ್ರೆ ಮದ್ವೆ ಆಗ್ಬೇಕು: ಒತ್ತಾಯಕ್ಕೆ ಮದ್ವೆ ಆಗ್ಬೇಡಿ ಎಂದ ರಮ್ಯಾ

Published : Nov 25, 2022, 01:45 PM ISTUpdated : Nov 25, 2022, 01:56 PM IST

ಮದುವೆ ಬಗ್ಗೆ ವಿದ್ಯಾರ್ಥಿಗಳು ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟ ಮೋಹಕ ತಾರೆ ರಮ್ಯಾ. ಖುಷಿಯಾಗಿರ್ಬೇಕು ಎಂದ ನಟಿ......

PREV
16
ಒಂದೋ ಖುಷಿಯಾಗಿರ್ಬೇಕು ಇಲ್ದಿದ್ರೆ ಮದ್ವೆ ಆಗ್ಬೇಕು: ಒತ್ತಾಯಕ್ಕೆ ಮದ್ವೆ ಆಗ್ಬೇಡಿ ಎಂದ ರಮ್ಯಾ

 ಗುರುವಾರ ಕೆಂಗೇರಿಯ ಬಿಜಿಎಸ್‌ ಆರೋಗ್ಯ ಮತ್ತು ಶಿಕ್ಷಣ ಕ್ಯಾಂಪಸ್‌ನಲ್ಲಿ ಬಿಜಿಎಸ್‌ ಉತ್ಸವದ ಚಾಲನಾ ಸಮಾರಂಭದ ಬಳಿಕ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಮೋಹಕ ತಾರೆ ರಮ್ಯಾ.

26

ಕಾರ್ಯಕ್ರಮದಲ್ಲಿ ನಿಮ್ಮ ಮದುವೆ ಯಾವಾಗ ಎಂದು ರಮ್ಯಾಗೆ ಪ್ರಶ್ನೆ ಮಾಡಲಾಗಿತ್ತು.ಪ್ರಶ್ನೆ ಕೇಳಿದ್ದವರಿಗೆ ನೀವು ಸಿಂಗಲ್ಲಾ ಎಂದು ರಮ್ಯಾ ಮರು ಪ್ರಶ್ನೆ ಕೇಳುತ್ತಾರೆ. 

36

 'ಮದ್ವೆ ಏನಕ್ಕೆ ಆಗಬೇಕು ಅಂತ ನನಗೆ ಅರ್ಥ ಆಗಲ್ಲ. ಮದ್ವೆ ಆಗ್ಬೇಡಿ ಅಂತ ಹೇಳಿದ್ದೀರಾ ಅಲ್ವಾ? ಅದೇ ಬೆಸ್ಟ್‌ ಅಗಲ್ಲ. ನಾನು ಮದುವೆ ಆಗೋಲ್ಲ' ಎಂದು ರಮ್ಯಾ ಹೇಳಿದ್ದಾರೆ.

46

 'ಮದ್ವೆ ಯಾಕೆ ಆಗಬೇಕು? ಒಂದು ಖುಷಿಯಾಗಿರಬೇಕು ಇಲ್ಲದಿದ್ದರೆ ಮದ್ವೆ ಆಗಬೇಕು. ಯಾವುದಾದ್ದರೂ ಒಂದು ಆಯ್ಕೆ ಮಾಡಬೇಕು ನಾನು ಖುಷಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತೀನಿ' ಎಂದಿದ್ದಾರೆ ರಮ್ಯಾ.

56

'100% ಮದ್ವೆ ವಿಚಾರ ಕೇಳುತ್ತೀರಾ ಅಂತ ನನಗೆ ಗೊತ್ತಿತ್ತು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಇರಬೇಕು ವಿದ್ಯಾಭ್ಯಾಸ ತುಂಬಾ ಮುಖ್ಯ. ನಿಮಗೆ ಒಳ್ಳೆಯ ಸೋಲ್‌ಮೇಟ್‌ ಸಿಕ್ಕರೆ ಮದ್ವೆ ಆಗಿ ಖುಷಿಯಾಗಿರಿ.'

66

'ಲವ್ ಹೊರತು ಪಡಿಸಿ ಮದುವೆ ವಿಚಾರಕ್ಕೆ ಒತ್ತಾಯ ಮಾಡಿದ್ದರೆ ಒಪ್ಪಿಕೊಳ್ಳಬೇಡಿ. ನನಗೆ ಇನ್ನೂ ಯಾರೂ ಸಿಕ್ಕಿಲ್ಲ ಸಿಕ್ಕರೆ ಮದ್ವೆ ಆಗ್ತೀನಿ' ಎಂದು ಮೋಹಕ ತಾರೆ ಹೇಳಿದ್ದಾರೆ.

Read more Photos on
click me!

Recommended Stories