ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ಜಡ್ಜ್ ಆಗಿದೆ.
ಬಣ್ಣದ ಜರ್ನಿಯಲ್ಲಿ ಸಾಧನೆ ಮಾಡಿರುವ 10 ಸೂಪರ್ ಕ್ವೀನ್‌ಗಳು ಈ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಯಾವ ರೀತಿಯ ಟಾಸ್ಕ್ ಇರಲಿದೆ ಹೇಗೆ ವಿನ್ನರ್ ಘೋಷಣೆ ಮಾಡುತ್ತಾರೆಂದು ಕಾದು ನೋಡಬೇಕಿದೆ.
ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಕೂಡ ಸ್ಪರ್ಧಿಸುತ್ತಿದ್ದು ಅವರ ವೇಟ್ ಲಾಸ್ ಜರ್ನಿ ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಬಗ್ಗೆ ರಚ್ಚು ಮನೆಯಲ್ಲೂ ಮಾತನಾಡಿಕೊಂಡಿದ್ದಾರೆ.
'ಗೀತಾ ಅವರ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ನಾನು ನೋಡುತ್ತಿರುತ್ತೀನಿ. ಗೀತಾ ಅವರು ವರ್ಕೌಟ್ ಮಾಡುತ್ತಿರುವಾಗ ನನ್ನ ತಾಯಿ ನನಗೆ ಬೈದಿದ್ದಾರೆ.' ಎಂದು ರಚ್ಚು ಹೇಳಿದ್ದಾರೆ.
'ಈಗ ನಾನು ಸ್ವಲ್ಪ ದಪ್ಪಗಾಗಿದ್ದೀನಿ ಅದಿಕ್ಕೆ ಗೀತಾನ ನೋಡಿ ಆಕೆ ವರ್ಕೌಟ್ ಮಾಡುತ್ತಿದ್ದಾರೆ ನೀನು ಯಾಕೆ ವರ್ಕೌಟ್ ಮಾಡುತ್ತಿಲ್ಲ. ಗೀತಾ ಅವರ ವರ್ಕೌಟ್‌ನಿಂದ ನಾನು ಮನೆಯಲ್ಲಿ ಬೈಗುಳ ಕೇಳುತ್ತಿರುವೆ. ಪ್ರತಿ ದಿನ ಬೆಳಗ್ಗೆ ವರ್ಕೌಟ್‌ಗೆ ಹೋಗು ಹೋಗು ಅಂತಾರೆ' ಎಂದು ರಚ್ಚು ಹೇಳಿದ್ದಾರೆ.
ಚಿತ್ರಕಥೆ ಮತ್ತು ಸಿನಿಮಾ ಡಿಮ್ಯಾಂಡ್ ಮಾಡುವ ರೀತಿಗೆ ರಚ್ಚು ದೇಹ ದಂಡಿಸುತ್ತಾರೆ. ಅಲ್ಲದೆ ಡಿಂಪಲ್ ಹುಡುಗಿ ಶಿಸ್ತಿನಿಂದ ವರ್ಕೌಟ್ ಮಾಡಿದ್ದರೆ ಬೇಗ ಸಣ್ಣಗಾಗುತ್ತಾರಂತೆ.