ಹೇಮಾ ಚೌಧರಿ ಆರೋಗ್ಯ ವಿಚಾರಿಸಲು ಮನೆ ಬಾಗಿಲಿಗೆ ಹೋದ ನಟಿ ರಜನಿ; ಫೋಟೋ ವೈರಲ್!

First Published | Jun 2, 2024, 5:04 PM IST

ಹಿರಿಯ ನಟಿ ಹೇಮಾ ಚೌಧರಿ ಅವರನ್ನು ಭೇಟಿ ಮಾಡಿದ ಆನ್‌ಸ್ಕ್ರೀನ್‌ ಮಗಳು ರಜನಿ. ಅಮೃತಾ ಪಾತ್ರ ಕಣ್ಣು ಮುಂದಿದೆ ಎಂದ ನೆಟ್ಟಿಗರು.....

ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಸಾಕಷ್ಟು ಕನ್ನಡ ಸರಿಯಲ್‌ಗಳಲ್ಲಿ ನಟಿಸಿ ಅನೇಕ ಕಲಾವಿದರಿಗೆ ಪ್ರೀತಿಯ ಅಮ್ಮನಾಗಿದ್ದರು. 

ಕೆಲವು ತಿಂಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದರು. ಈಗ ಚೇತರಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹೇಮಾ ಅವರನ್ನು ರಜನಿ ಭೇಟಿ ಮಾಡಿದ್ದಾರೆ.

Tap to resize

ಹೌದು! ಕನ್ನಡ ಕಿರುತೆರೆ ಟಾಪ್‌ ಓನ್ ಸೀರಿಯಲ್ ಅಮೃತವರ್ಷಿಣಿಯಲ್ಲಿ ರಜನಿ ಅವರ ತಾಯಿ ಪಾತ್ರದಲ್ಲಿ ಹೇಮಾ ಚೌಧರಿ ಅಭಿನಯಿಸಿದ್ದರು. ಅಂದಿನಿಂದ ಇವರ ಸಂಬಂಧ ಹಾಗೆ ಗಟ್ಟಿಯಾಗಿದೆ.

'ತುಂಬಾ ವರ್ಷಗಳ ನಂತರ ಅಮ್ಮನ ಭೇಟಿ ಮಾಡಿದ ಕ್ಷಣ. ಅವರ ಆರೋಗ್ಯ ತುಂಬಾ ಚೆನ್ನಾಗಿದೆ. ಈಗಲೂ ಅವರ ಉತ್ಸಾಹ ಆ ಹುಮ್ಮಸ್ಸು ಆ ಗಟ್ಟಿತನ ನೋಡೋದೆ ಒಂದು ಚಂದ' ಎಂದು ರಜನಿ ಬರೆದುಕೊಂಡಿದ್ದಾರೆ.

 'ಅಮ್ಮ ತುಂಬಾ ಸ್ಟ್ರಾಂಗ್ ಲೇಡಿ ಅವರಿಂದ ನಾವು ಕಲಿತದ್ದು ತುಂಬಾ ಇದೆ ಕಲಿಯಬೇಕಾದದ್ದು ತುಂಬಾ ಇದೆ. ಲಬ್ ಯು ಸೋ ಮಚ್ ಅಮ್ಮ' ಎಂದಿದ್ದಾರೆ ರಜನಿ. 

'ಅದೃಷ್ಟವಂತರು ನೀವೆಲ್ಲ ಅಂತ ಮಹಾನ್ ಲೆಜೆಂಡ್‌ ಜೊತೆ ಆಕ್ಟಿಂಗ್ ಮಾಡೀಕೆ. ಹೇಮಾ ಅಮ್ಮ ನಿಮ್ಮನ್ನು ನೋಡಿ ಖುಷಿ ಆಯ್ತು. ಕರುನಾಡು ನಿಮ್ಮ ಜೊತೆಗಿದೆ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!