ಕಾಲೇಜ್ ಫೆಸ್ಟ್‌ ವೇದಿಕೆಯಲ್ಲಿ ಡಿಕೆಶಿ ಪುತ್ರಿ, ನಟಿ ಸಪ್ತಮಿ, ಡಾಲಿ ಧನಂಜಯ್, ಪೋಟೋ ವೈರಲ್!

First Published | Jun 2, 2024, 3:19 PM IST

ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ, ನಟ ಡಾಲಿ ಧನಂಜಯ್ ಹಾಗೂ ಕಾಂತಾರ ನಟಿ ಸಪ್ತಮಿ ಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.ಸಿನಿಮಾ ನಟಿಯನ್ನೂ ಮೀರಿಸುವ ಸೌಂದರ್ಯ ಹೊಂದಿರುವ ಐಶ್ವರ್ಯ, ಸಿನಿ ತಾರೆಯರ ಜೊತೆ ಕಾಣಿಸಿಕೊಂಡಿದ್ದೇಕೆ?
 

ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇದೀಗ ಸೌಂದರ್ಯ ಸ್ಯಾಂಡಲ್‌ವುಡ್ ಸಿನಿತಾರೆಯರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
 

ಐಶ್ವರ್ಯ ಡಿಕೆಎಸ್ ಹೆಗ್ಡೆ ಜೊತೆ ಕಾಂತಾರಾ ನಟಿ ಸಪ್ತಮಿ ಗೌಡ, ಡಾಲಿ ಧನಂಜಯ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಇದು ಸಿನಿಮಾ ಕಾರ್ಯಕ್ರಮಕ ಅಲ್ಲ, ಐಶ್ವರ್ಯ ಮುನ್ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಕಾಲೇಜ್ ಫೆಸ್ಟ್ ಕಾರ್ಯಕ್ರಮ.
 

Tap to resize

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜು ಫೆಸ್ಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾಲಿ ಧನಂಜಯ್, ಕಾಂತಾರ ನಟಿ ಸಪ್ತಮಿ ಗೌಡ ಆಗಮಿಸಿದ್ದರು. 
 

ಕಾಲೇಜು ಫೆಸ್ಟ್ ಕಾರ್ಯಕ್ರಮಕ್ಕೆ ಆಗಮಿಸಿದ ಡಾಲಿ ಧನಂಜಯ್ ಹಾಗೂ ಸಪ್ತಮಿ ಗೌಡ ವಿದ್ಯಾರ್ಥಿಗಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಇವರನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳ ಜೊತೆಗೆ ಚರ್ಚೆಯಲ್ಲಿ ನಟ ನಟಿಯರೂ ಪಾಲ್ಗೊಂಡಿದ್ದಾರೆ. ಅರ್ಥಪೂರ್ಣ ಚರ್ಚೆಯನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ನಡೆಸಿಕೊಟ್ಟಿದ್ದಾರೆ. 
 

ಐಶ್ವರ್ಯ ಡಿಕೆಎಸ್ ಹೆಗ್ಡೆ ಈ ಕುರಿತು ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಯಶಸ್ವಿ ಕಾರ್ಯಕ್ರಮದ ಸಂಭ್ರಮ ಹಂಚಿಕೊಂಡಿದ್ದಾರೆ.
 

ಇತ್ತೀಚೆಗೆ ಐಶ್ವರ್ಯ ತಮ್ಮ ಫ್ಯಾಶನ್ ಬ್ರ್ಯಾಂಡ್‌ನ ವಿಶಿಷ್ಟ ಹಾಗೂ ಅತ್ಯಾಕರ್ಷಕ ಉಡುಪಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದರು. ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಫೋಟೋ ಹಂಚಿಕೊಂಡಿದ್ದರು. 
 

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಉದ್ಯಮಿಯಾಗಿ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಮನ್ನಣೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಫ್ಯಾಶನ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 
 

Latest Videos

click me!