ಹಿಂದಿ ಚಿತ್ರರಂಗಕ್ಕೆ ಹಾರಿದ ಗಿಣಿ; 2023 ನನಗೆ ಅದೃಷ್ಟದ ವರ್ಷ ಎಂದು ರಾಗಿಣಿ ದ್ವಿದೇದಿ

Published : Jan 12, 2023, 09:02 AM IST

ಲಂಡನ್‌ನಲ್ಲಿ ಹಿಂದಿ ಸಿನಿಮಾ ಚಿತ್ರೀಕರಣ ಮಾಡುತ್ತಿರುವ ತುಪ್ಪದ ಹುಡುಗಿ. ಎಲ್ಲಾದರೂ ಹೋಗಿ ಕನ್ನಡ ಮರಿಬೇಡಿ ಎಂದು ಕಿವಿ ಮಾತು ಹೇಳಿದ ನೆಟ್ಟಿಗರು....

PREV
16
ಹಿಂದಿ ಚಿತ್ರರಂಗಕ್ಕೆ ಹಾರಿದ ಗಿಣಿ; 2023 ನನಗೆ ಅದೃಷ್ಟದ ವರ್ಷ ಎಂದು ರಾಗಿಣಿ ದ್ವಿದೇದಿ

ಕನ್ನಡ ಚಿತ್ರರಂಗದ ಹಾಟ್‌ ಆಂಡ್ ಕ್ಯೂಟ್ ನಟಿ ರಾಗಿಣಿ ದ್ವೀವೇದಿ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಿಂದಿ ಸಿನಿಮಾವೊಂದಕ್ಕೆ ಸಹಿ ಮಾಡಿ ಚಿತ್ರಿಕರಣ ಆರಂಭಿಸಿದ್ದಾರೆ. 

26

ರಾಗಿಣಿ ಸಹಿ ಮಾಡಿರುವ ಹಿಂದಿ ಚಿತ್ರದ ಹೆಸರು ವಾಲ್ಕೇರ್ ಹೌಸ್‌ ಎಂದು.  ಈಗಾಗಲೇ ಲಂಡನ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್‌ ಮುಗಿದಿದೆ. ಇದು ಹಾರರ್‌ ಸಿನಿಮಾ.

36

ಬಾಲಿವುಡ್‌ ಸೇರಿದಂತೆ ಈ ವರ್ಷ ತಮ್ಮ ನಟನೆಯ ಆರಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲಿವೆ. 2023 ನನ್ನ ಪಾಲಿಗೆ ಅದೃಷ್ಟದ ವರ್ಷ ಆಗಲಿದೆ. ಚಳಿ ಪ್ರದೇಶದಲ್ಲಿ ಹಿಂದಿ ಚಿತ್ರದ ಶೂಟಿಂಗ್‌ ಮಾಡಿದ್ದೇವೆ ಎಂದು ಚಿತ್ರದ ಶೂಟಿಂಗ್‌ ಅನುಭವವನ್ನು ರಾಗಿಣಿ ಮಾಧ್ಯಮಗಳ ಮುಂದೆ ಹಂಚಿಕೊಂಡರು.

46

'ಈ ಚಿತ್ರದಲ್ಲಿ ನಾನು ಲಂಡನ್‌ ಮೂಲದ ಬುಕ್‌ ರೈಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಹೀಗಾಗಿ ಲಂಡನ್‌ನಲ್ಲಿ ಮೊದಲ ಹಂತ ಶೂಟಿಂಗ್ ಮಾಡಲಾಗಿದೆ. ನನ್ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ದೊಡ್ಡ ತಾರ ಬಳಗವಿದೆ'

56

'ನನ್ನ ಮೊದಲ ಹಿಂದಿ ಸಿನಿಮಾ ಇದಾಗಿದ್ದು ಹಾರರ್ ಸಬ್ಜೆಕ್ಟ್‌ ಇದೆ. ಒಳ್ಳೆಯ ಕಥೆ, ಪಾತ್ರ ಇರುವುದರರಿಂದ ಖುಷಿಯಾಗಿದ್ದೇನೆ. ಹಿಂದಿ ಸಿನಿಮಾ ಮಾಡುತ್ತಿರುವುದು ತಂದೆ ತಾಯಿಗೆ ಖುಷಿ ನೀಡಿದೆ'

66

'ಪೋಷಕರ ಬೆಂಬಲದಿಂದ ನಾನು ಇಷ್ಟು ಬೆಳೆಯಲು ಸಾಧ್ಯವಾಯ್ತು' ಎಂದಿದ್ದಾರೆ ರಾಗಿಣಿ. ಮಲಯಾಳಂನಲ್ಲಿ ಒಂದು ಸಿನಿಮಾ, ತಮಿಳಿನಲ್ಲಿ ಮೂರು ಸಿನಿಮಾ ಹಾಗೂ ತೆಲುಗು ಸಿನಿಮಾವೊಂದರಲ್ಲಿ ಒಂದು ಸಾಂಗ್ ಮಾಡಿದ್ದಾರೆ ರಾಗಿಣಿ. 

Read more Photos on
click me!

Recommended Stories